ಯತ್ನಾಳ್‌ 40 ಸಾವಿರ ಕೋಟಿ ಆರೋಪ ಬಿಜೆಪಿಗೆ ತಲೆಬಿಸಿ..!

ಬಸನಗೌಡ ಪಾಟೀಲ್ ಯತ್ನಾಳ್ ಅವರ 40 ಸಾವಿರ ಕೋಟಿ ರೂ.ಆರೋಪ ರಾಜ್ಯ ಬಿಜೆಪಿಯನ್ನ ತಲ್ಲಣಗೊಳಿಸಿದೆ. ಇಂದು ನಡೆದ ಬಿಜೆಪಿ ಹಿರಿಯ ನಾಯಕರ ಸಭೆಯಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಸರ್ಕಾರದ ವಿರುದ್ಧದ ಹೋರಾಟಕ್ಕೂ ಇದು ಅಡ್ಡಿಯಾಗಿದೆ. ಲೋಕಸಭಾ ಚುನಾವಣೆಯ ಮೇಲೂ ಇದರ ಪರಿಣಾಮ ಬೀರಲಿದೆ.ಆದ್ದರಿಂದ ಇಂದಿನ ಬಿಜೆಪಿ ಸಭೆಯಲ್ಲಿ ಯತ್ನಾಳ್ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದೆ.

Written by - Zee Kannada News Desk | Last Updated : Dec 28, 2023, 09:48 PM IST
  • ಯತ್ನಾಳರ ಭಯ ರಾಜ್ಯ ಬಿಜೆಪಿ ನಾಯಕರಿಗೆ ಎಷ್ಟಿದೆ ಅಂದ್ರೆ ಅವರನ್ನ ಮುಟ್ಟಲಾರದಷ್ಟು ಅನ್ನೋದು ಗುಟ್ಟಾಗಿಯೇನು ಉಳಿದಿಲ್ಲ.
  • ಪ್ರಬಲ ಪಂಚಮಸಾಲಿ ಸಮುದಾಯದ ನಾಯಕರಷ್ಟೇ ಅಲ್ಲ ಯತ್ಬಾಳ್ ಪ್ರಖರ ಹಿಂದುತ್ವವಾದಿ ನಾಯಕ.
  • ಹಾಗಾಗಿ ಯತ್ನಾಳರ ವಿರುದ್ಧ ಶಿಸ್ತುಕ್ರಮ, ಉಚ್ಚಾಟನೆಯಂತ ಕ್ರಮ ಕೈಗೊಂಡರೆ ಅದರ ಪರಿಣಾಮ ಬಿಜೆಪಿ ಮೇಲಾಗಲಿದೆ.
ಯತ್ನಾಳ್‌ 40 ಸಾವಿರ ಕೋಟಿ ಆರೋಪ ಬಿಜೆಪಿಗೆ ತಲೆಬಿಸಿ..! title=
file photo

ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರ 40 ಸಾವಿರ ಕೋಟಿ ರೂ.ಆರೋಪ ರಾಜ್ಯ ಬಿಜೆಪಿಯನ್ನ ತಲ್ಲಣಗೊಳಿಸಿದೆ. ಇಂದು ನಡೆದ ಬಿಜೆಪಿ ಹಿರಿಯ ನಾಯಕರ ಸಭೆಯಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಸರ್ಕಾರದ ವಿರುದ್ಧದ ಹೋರಾಟಕ್ಕೂ ಇದು ಅಡ್ಡಿಯಾಗಿದೆ. ಲೋಕಸಭಾ ಚುನಾವಣೆಯ ಮೇಲೂ ಇದರ ಪರಿಣಾಮ ಬೀರಲಿದೆ.ಆದ್ದರಿಂದ ಇಂದಿನ ಬಿಜೆಪಿ ಸಭೆಯಲ್ಲಿ ಯತ್ನಾಳ್ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದೆ.

ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಹೊತ್ತಿನಲ್ಲೇ ಕೋವಿಡ್ ಭ್ರಷ್ಟಾಚಾರದ ಈ ಆರೋಪ ನಾಯಕರನ್ನ ಇನ್ನಿಲ್ಲದಂತೆ ಕಾಡಿದೆ. ಇಂದು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲೂ ರಿಂಗಣಿಸಿದೆ.ಸುಮಾರು ಅರ್ಧ ಗಂಟೆ ಕಾಲ ಯತ್ನಾಳರ ಬಾಯಿಗೆ ಬೀಗ ಜಡಿಯುವ ಬಗ್ಗೆ ಚರ್ಚೆಯಾಗಿದೆ.ಆದ್ರೆ ಯತ್ನಾಳರ ನಾಲಿಗೆಗೆ ಬೀಗ ಹಾಕುವ ಬಗ್ಗೆ ಯಾರೊಬ್ಬರೂ ಚಕಾರವನ್ನೇ ಎತ್ತಿಲ್ಲ. ಯತ್ನಾಳರ ಬಗ್ಗೆ ನಾವು ನಿರ್ಣಯ ಮಾಡೋದು ಬೇಡ ಎಲ್ಲವನ್ನೂ ವರಿಷ್ಠರಿಗೇ ಬಿಡೋಣವೆಂದು ತೀರ್ಮಾನಿಸಿದ್ದಾರೆ.ಅಷ್ಟರ ಮಟ್ಟಿಗೆ ಯತ್ನಾಳರ ಭಯ ರಾಜ್ಯ ಬಿಜೆಪಿ ನಾಯಕರನ್ನ ಕಂಗೆಡಿಸಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಬಳಿ ರಸ್ತೆ ಸಂಪೂರ್ಣ ಬಂದ್

ನೇರವಾಗಿ ಬಿಎಸ್ ವೈ ಹಾಗೂ ವಿಜಯೇಂದ್ರರ ವಿರುದ್ಧ ಯತ್ನಾಳ್ ಮಾಡಿರುವ ಭ್ರಷ್ಟಾಚಾರದ ಆರೋಪ ರಾಜ್ಯ ಬಿಜೆಪಿಗೆ ದೊಡ್ಡ ಡ್ಯಾಮೇಜ್ ತಂದಿಟ್ಟಿರುವುದು ಸುಳ್ಳಲ್ಲ.. ಸ್ವಃತ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಯತ್ನಾಳರ ಮೇಲೆ ನೇರವಾಗಿ ಕ್ರಮ‌ಜರುಗಿಸಬಹುದಿತ್ತು..ಅವರನ್ನ ಪಕ್ಷದಿಂದ ಉಚ್ಛಾಟಿಸಬಹುದಿತ್ತು.. ಆದ್ರೆ ಅಂತಹ ದುಡುಕಿನ ನಿರ್ಧಾರವನ್ನ ತೆಗೆದುಕೊಂಡಿಲ್ಲ.. ಯತ್ನಾಳ್ ವರಿಷ್ಠರ ಮಟ್ಟದಲ್ಲಿ ದೊಡ್ಡ ಸಂಪರ್ಕದಲ್ಲಿದ್ದಾರೆನ್ನುವ ಭಯವೇನೂ ಇಲ್ಲ.. ಆದ್ರೆ ವಿಜಯೇಂದ್ರರಿಗೆ ಎದುರಾಗಿರುವ ಭಯ ಪಂಚಮಸಾಲಿ ಮತಬ್ಯಾಂಕಿನದ್ದು.. ಹೇಳಿ ಕೇಳಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ‌ ಗುರ್ತಿಸಿಕೊಂಡವರು.

ಇದನ್ನೂ ಓದಿ: ಕಾರ್ಯಕರ್ತರ ಕೋಪಕ್ಕೆ BMTC ಬಸ್‌ ಗ್ಲಾಸ್‌ ಪೀಸ್‌ ಪೀಸ್‌

ಯತ್ನಾಳರ ಭಯ ರಾಜ್ಯ ಬಿಜೆಪಿ ನಾಯಕರಿಗೆ ಎಷ್ಟಿದೆ ಅಂದ್ರೆ ಅವರನ್ನ ಮುಟ್ಟಲಾರದಷ್ಟು ಅನ್ನೋದು ಗುಟ್ಟಾಗಿಯೇನು ಉಳಿದಿಲ್ಲ.. ಪ್ರಬಲ ಪಂಚಮಸಾಲಿ ಸಮುದಾಯದ ನಾಯಕರಷ್ಟೇ ಅಲ್ಲ ಯತ್ಬಾಳ್ ಪ್ರಖರ ಹಿಂದುತ್ವವಾದಿ ನಾಯಕ.. ರಾಜ್ಯದ ಯುವಕರಿಗೆ ಹಿಂದುತ್ವದ ಹುಚ್ಚು ಹಚ್ಚಿದವರು.. ಹಾಗಾಗಿ ಯತ್ನಾಳರ ವಿರುದ್ಧ ಶಿಸ್ತುಕ್ರಮ, ಉಚ್ಚಾಟನೆಯಂತ ಕ್ರಮ ಕೈಗೊಂಡರೆ ಅದರ ಪರಿಣಾಮ ಬಿಜೆಪಿ ಮೇಲಾಗಲಿದೆ.

ಒಟ್ನಲ್ಲಿ ಯತ್ನಾಳರ ಹೇಳಿಕೆಯಿಂದ ರಾಜ್ಯ ಬಿಜೆಪಿ ನಾಯಕರು ಆತಂಕಕ್ಕೀಡಾಗಿದ್ದಾರೆ.. ಇತ್ತ ಕ್ರಮ‌ಜರುಗಿಸೋಕೂ ಆಗ್ತಿಲ್ಲ ಅತ್ತ ಸುಮ್ಮನಿರೊಕೂ ಆಗ್ತಿಲ್ಲ ಅಷ್ಟರ ಮಟ್ಟಿಗೆ ಯತ್ನಾಳ್ ಪ್ರಭಾವಿಯಾಗಿದ್ದಾರೆ.. ಒಂದು ವೇಳೆ ಶಿಸ್ತುಕ್ರಮ ಅಂತ ಮುಂದುವರಿದಿದ್ದೇ ಆದ್ರೆ ಅದರ ಪರಿಣಾಮವನ್ನ ಎದುರಿಸೋಕು ಸಿದ್ಧರಾಗಬೇಕಾಗುತ್ತದೆ.. ಅಷ್ಟನ್ನ ಎದುರಿಸೋಕೆ ರಾಜ್ಯ ನಾಯಕರಿಗೆ ಆಗ್ತಿಲ್ಲ..ವಹೀಗಾಗಿ ವರಿಷ್ಠರ ಮೂಲಕ ಯತ್ನಾಳ್ ಬಾಯಿಗೆ ಬೀಗ ಹಾಕಿಸೋಕೆ ಮುಂದಾಗಿದ್ದಾರೆ..ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News