ಬೆಂಗಳೂರು : ರಾಪಿಡೋ ಚಾಲಕ ತನಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ. ಅತೀರಾ ಪುರುಷೋತ್ತಮನ್ ಎಂಬ ಮಹಿಳೆ ಅಳಲು ತೋಡಿಕೊಂಡಿದ್ದು, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ  ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ನಂತರ ಟೌನ್ ಹಾಲ್‌ನಿಂದ ಮನೆಗೆ ತೆರಳಲು ಬುಕ್ ಮಾಡಿದ ಹಲವು ಕ್ಯಾಬ್, ಆಟೋಗಳು ಕ್ಯಾನ್ಸಲ್ ಆದ ಕಾರಣ ನಾನು ಅನಿವಾರ್ಯವಾಗಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದೆ.


COMMERCIAL BREAK
SCROLL TO CONTINUE READING

ರೈಡರ್ ಆ್ಯಪ್‌ನಲ್ಲಿ ನೋಂದಾಯಿಸಿದ ಬೈಕ್‌ ಬಿಟ್ಟು ಬೇರೆ ಬೈಕ್‌ ಬಂದಿತ್ತು. ಈ ಬಗ್ಗೆ ನಾನು ಕೇಳಿದಾಗ ರಾಪಿಡೋದಲ್ಲಿ ನೋಂದಾಯಿಸಲಾದ ಬೈಕ್ ಸರ್ವಿಸ್ ಬಿಡಲಾಗಿದೆ ಎಂದು ರಾಪಿಡೋ ಚಾಲಕ ಹೇಳಿದ್ದಾನೆ. ಮನೆ ತಲುಪಬೇಕೆಂಬ ಉದ್ದೇಶದಿಂದ ಸಂತ್ರಸ್ಥೆ ಬೈಕ್ ಏರಿದ್ದಾರೆ. ಈ ವೇಳೆ ಒಂದು ಕೈನಲ್ಲಿ ಬೈಕ್ ಚಾಲನೆ ಮಾಡಿಕೊಂಡು ಮತ್ತೊಂದು ಕೈಯಿಂದ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಆದರೆ ಭಯದಿಂದಲೇ ಮನೆ ತಲುಪಬೇಕಾದ ಕಾರಣಕ್ಕೆ ಮೌನವಾಗಿದ್ದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.


ಬಿಜೆಪಿ ನಾಯಕರು ಮನೆಯಲ್ಲಿ ಕಂಬಳಿ ಹೊದ್ದು ಮಲಗುವುದು ಒಳಿತು: ಕಾಂಗ್ರೆಸ್ ವ್ಯಂಗ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.