ಬೆಂಗಳೂರು: ವಿರೋಧ ಪಕ್ಷದ ನಾಯಕನಿಲ್ಲದೆ 16ನೇ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ತೆರೆಬಿದ್ದಿದ್ದು, ಹೊಸ ಇತಿಹಾಸಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದೆ.
‘ಅಧಿವೇಶನವೂ ಮುಗಿಯಿತು... ಬಿಜೆಪಿಗೆ ಪ್ರತಿಪಕ್ಷ ನಾಯಕ ಮಾತ್ರ ಸಿಗಲೇ ಇಲ್ಲ, ಸಿಗುವ ಲಕ್ಷಣವೂ ಕಾಣುತ್ತಿಲ್ಲ! ಹೈಕಮಾಂಡ್ ಮೆಚ್ಚಿಸಲು ಸದನದೊಳಗೆ ಬಿಜೆಪಿಗರು ತೋರಿದ ಪರ್ಫಾರ್ಮೆನ್ಸ್ ಕೂಡ ವ್ಯರ್ಥವಾಗಿದೆ. ಹೈಕಮಾಂಡಿನಿಂದ ಈ ಪರಿ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಬಿಜೆಪಿ ನಾಯಕರು ಮನೆಯಲ್ಲಿ ಕಂಬಳಿ ಹೊದ್ದು ಮಲಗುವುದು ಒಳಿತು’ ಎಂದು ಕಾಂಗ್ರೆಸ್ ಕುಟುಕಿದೆ.
ಅಧಿವೇಶನವೂ ಮುಗಿಯಿತು...
ಬಿಜೆಪಿಗೆ ಪ್ರತಿಪಕ್ಷ ನಾಯಕ ಮಾತ್ರ ಸಿಗಲೇ ಇಲ್ಲ, ಸಿಗುವ ಲಕ್ಷಣವೂ ಕಾಣುತ್ತಿಲ್ಲ!
ಹೈಕಮಾಂಡ್ ಮೆಚ್ಚಿಸಲು
ಸದನದೊಳಗೆ ಬಿಜೆಪಿಗರು ತೋರಿದ ಪರ್ಫಾರ್ಮೆನ್ಸ್ ಕೂಡ ವ್ಯರ್ಥವಾಗಿದೆ.ಹೈಕಮಾಂಡಿನಿಂದ ಈ ಪರಿ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ @BJP4Karnataka ಮನೆಯಲ್ಲಿ ಕಂಬಳಿ ಹೊದ್ದು ಮಲಗುವುದು ಒಳಿತು.
— Karnataka Congress (@INCKarnataka) July 22, 2023
‘ರಾಜ್ಯದ ಸಾವಿರಾರು ಯುವಕರ ಭವಿಷ್ಯ ಕಸಿದ, ಬಿಜೆಪಿ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದೆ ನಮ್ಮ ಸರ್ಕಾರ. ಬಿಜೆಪಿ ಸರ್ಕಾರ ಹಲವು ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡಿತ್ತು, ಆದರೆ ಈಗ ಹಗರಣದ ಇಂಚಿಂಚೂ ತನಿಖೆಗೆ ಒಳಪಡಲಿದೆ. ಬಿಜೆಪಿಯ ಹಲವು ಮಾಜಿ ಸಚಿವರು, ಶಾಸಕರಿಗೆ ಈಗಾಗಲೇ ನಡುಕ ಶುರುವಾಗಿರಬಹುದು!’ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಇದನ್ನೂ ಓದಿ: ದೇವೇಗೌಡರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ? : ಡಿಕೆಶಿ ವಿರುದ್ಧ ಹೆಚ್ಡಿಕೆ ಗರಂ
ನುಡಿದಂತೆ ನಡೆಯುತ್ತಿದ್ದೇವೆ.
ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡುತ್ತೇವೆ ಎನ್ನುವುದು ನಮ್ಮ ಪ್ರಣಾಳಿಕೆಯ ಭರವಸೆಯಾಗಿತ್ತು,
ಆಡಳಿತ ಯಂತ್ರವನ್ನು ಸದೃಢಗೊಳಿಸಲು, ಜನಸಾಮಾನ್ಯರ ಕೆಲಸಗಳನ್ನು ಸುಗಮಗೊಳಿಸಲು ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡುವ ನಿಟ್ಟಿನಲ್ಲಿ ಖಾಲಿ ಇರುವ ಪಿಡಿಓ ಹುದ್ದೆಗಳಲ್ಲಿ ಮೊದಲ ಹಂತವಾಗಿ 150…
— Karnataka Congress (@INCKarnataka) July 22, 2023
ನುಡಿದಂತೆ ನಡೆಯುತ್ತಿದ್ದೇವೆ!
‘ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡುತ್ತೇವೆ ಎನ್ನುವುದು ನಮ್ಮ ಪ್ರಣಾಳಿಕೆಯ ಭರವಸೆಯಾಗಿತ್ತು. ಆಡಳಿತ ಯಂತ್ರವನ್ನು ಸದೃಢಗೊಳಿಸಲು, ಜನಸಾಮಾನ್ಯರ ಕೆಲಸಗಳನ್ನು ಸುಗಮಗೊಳಿಸಲು ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡುವ ನಿಟ್ಟಿನಲ್ಲಿ ಖಾಲಿ ಇರುವ ಪಿಡಿಓ ಹುದ್ದೆಗಳಲ್ಲಿ ಮೊದಲ ಹಂತವಾಗಿ 150 ಪಿಡಿಓಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ’ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ
‘ಬೆಂಗಳೂರನ್ನು ಜಾಗತಿಕ ಮಟ್ಟದ ನಗರವಾಗಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ "ಬ್ರಾಂಡ್ ಬೆಂಗಳೂರು" ಯೋಜನೆಗೆ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ಬೆಂಗಳೂರಿನ ಕೀರ್ತಿಯನ್ನು ಜಗದಗಲ ಹಬ್ಬಿಸಿ ಹೂಡಿಕೆದಾರರ ಆಕರ್ಷಣೆಯ ಕೇಂದ್ರ ಬಿಂದುವನ್ನಾಗಿಸಿ ಉದ್ಯೋಗ ಹಾಗೂ ಆರ್ಥಿಕತೆಯ ವೃದ್ಧಿಗೆ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: Price Hike: ಶೀಘ್ರವೇ ಹೊಟೇಲ್ನಲ್ಲಿ ಟೀ-ಕಾಫಿ ಬೆಲೆ ಹೆಚ್ಚಳ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.