ರಾಜ್ಯದಲ್ಲಿ ಶ್ಯಾಡೋ ಸಿಎಂ ಯತೀಂದ್ರರ ವರ್ಗಾವಣೆ ದಂಧೆ ಮಿತಿ ಮೀರುತ್ತಿದೆ: ಬಿಜೆಪಿ ಆಕ್ರೋಶ

IAS officers transferred in Karnataka: ಸಿಎಂ ಕುರ್ಚಿಗೆ ವ್ಯಾಲಿಡಿಟಿ ಕಡಿಮೆ ಇರುವ ಕಾರಣ, ಶ್ಯಾಡೋ ಸಿಎಂ ಯತೀಂದ್ರ ರಾಜ್ಯವನ್ನು ಮನಸ್ಸಿಗೆ ಬಂದಂತೆ ವರ್ಗಾವಣೆ ದಂಧೆಯ ಮೂಲಕ ಕೊಳ್ಳೆ ಹೊಡೆಯುತ್ತಿರಬಹುದು! ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Jul 22, 2023, 08:40 PM IST
  • ರಾಜ್ಯದಲ್ಲಿ #ShadowCM ಡಾ.ಯತೀಂದ್ರ ಸಿದ್ದರಾಮಯ್ಯರ ವರ್ಗಾವಣೆ ದಂಧೆ ಮಿತಿ ಮೀರುತ್ತಿದೆ
  • 15 ದಿನದಲ್ಲಿ ಒಂದೇ ಹುದ್ದೆಗೆ ಇಬ್ಬರು ಅರಣ್ಯ ಅಧಿಕಾರಿಗಳನ್ನು ವರ್ಗಾವಣೆಗೆ ಸಿದ್ದರಾಮಯ್ಯ ಆದೇಶ
  • ಸಿದ್ದರಾಮಯ್ಯರನವರೇ #ShadowCMಗೆ ಎಷ್ಟು ಖಾಲಿ ಆದೇಶ ಪತ್ರಗಳಿಗೆ ಸಹಿ, ಸೀಲ್ ಹಾಕಿಕೊಟ್ಟಿದ್ದೀರಿ?
ರಾಜ್ಯದಲ್ಲಿ ಶ್ಯಾಡೋ ಸಿಎಂ ಯತೀಂದ್ರರ ವರ್ಗಾವಣೆ ದಂಧೆ ಮಿತಿ ಮೀರುತ್ತಿದೆ: ಬಿಜೆಪಿ ಆಕ್ರೋಶ title=
ವರ್ಗಾವಣೆ ದಂಧೆ ಮಿತಿ ಮೀರುತ್ತಿದೆ

ಬೆಂಗಳೂರು: ರಾಜ್ಯದಲ್ಲಿ #ShadowCM ಡಾ.ಯತೀಂದ್ರ ಸಿದ್ದರಾಮಯ್ಯರ ವರ್ಗಾವಣೆ ದಂಧೆ ಮಿತಿ ಮೀರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.

‘ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದಂತೆ, ಇದೀಗ ಕೇವಲ 15 ದಿನದಲ್ಲಿ ಒಂದೇ ಹುದ್ದೆಗೆ ಇಬ್ಬರು ಅರಣ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದಾರೆ. ಸದನದಲ್ಲಿ ವಿರೋಧ ಪಕ್ಷಗಳನ್ನು ಹೊರಗಿಟ್ಟ ಮಾತ್ರಕ್ಕೆ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸಲು ಸಾಧ್ಯವಿಲ್ಲ. ಸಿದ್ದರಾಮಯ್ಯರವರೇ #ShadowCMರವರಿಗೆ ಎಷ್ಟು ಖಾಲಿ ಆದೇಶ ಪತ್ರಗಳಿಗೆ ಸಹಿ, ಸೀಲ್ ಹಾಕಿಕೊಟ್ಟಿದ್ದೀರಿ ಹೇಳಿ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ದೇವೇಗೌಡರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ? : ಡಿಕೆಶಿ ವಿರುದ್ಧ ಹೆಚ್‌ಡಿಕೆ ಗರಂ

ವರ್ಗಾವಣೆ ದಂಧೆಯ ಮೂಲಕ ಕೊಳ್ಳೆ!

ಸಿಎಂ ಸಿದ್ದರಾಮಯ್ಯರವರನ್ನು ಕುರ್ಚಿಯಿಂದ ಇಳಿಸಲು, ತಮ್ಮ ಆತ್ಮೀಯರಾದ ಬಿ.ಕೆ.ಹರಿಪ್ರಸಾದ್ ಭುಜದ ಮೇಲೆ ಬಂದೂಕು ಇಟ್ಟು ಡಿಸಿಎಂ ಡಿ.ಕೆ.ಶಿವಕುಮಾರ್ ಗುಂಡು ಹಾರಿಸುತ್ತಿದ್ದಾರೆಯೇ? ಸಿಎಂ ಕುರ್ಚಿಗೆ ವ್ಯಾಲಿಡಿಟಿ ಕಡಿಮೆ ಇರುವ ಕಾರಣ, ಶ್ಯಾಡೋ ಸಿಎಂ ಯತೀಂದ್ರ ರಾಜ್ಯವನ್ನು ಮನಸ್ಸಿಗೆ ಬಂದಂತೆ ವರ್ಗಾವಣೆ ದಂಧೆಯ ಮೂಲಕ ಕೊಳ್ಳೆ ಹೊಡೆಯುತ್ತಿರಬಹುದು!’ ಎಂದು ಬಿಜೆಪಿ ಟೀಕಿಸಿದೆ.

ನಮ್ಮ ಹೋರಾಟ, ಕಾಂಗ್ರೆಸ್ ಷಡ್ಯಂತ್ರ!

‘ಮತ ಬ್ಯಾಂಕ್‌ಗಾಗಿ ಭಯೋತ್ಪಾದನೆಯನ್ನು ಪೋಷಿಸುವ ಕಾಂಗ್ರೆಸ್‌ನ ದೇಶದ್ರೋಹಿ ನಿಲುವುಗಳ ವಿರುದ್ಧ, ರೈತರ ಆತ್ಮಹತ್ಯೆಯನ್ನು ಪ್ರಚೋದಿಸುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ, ರಾಜ್ಯದ ಉನ್ನತ ಅಧಿಕಾರಿಗಳನ್ನು ಕಾಂಗ್ರೆಸ್‌ ಸೇವಕರಂತೆ ಬಳಸುವ ಸರ್ಕಾರದ ಹಿಟ್ಲರ್‌ ಮಾನಸಿಕತೆ ವಿರುದ್ಧ, ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಶೇ.30 ಹೆಚ್ಚಿದರೂ ಉದ್ದೇಶಪೂರ್ವವಾಗಿ ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ನಡೆಯ ವಿರುದ್ಧ, ಕಲುಷಿತ ನೀರು, ಕಳಪೆ ಆಹಾರ ವಿತರಣೆ ವಿರುದ್ಧ ಮತ್ತು ಸರ್ಕಾರದ ಎಲ್ಲಾ ಬಗೆಯ ನಾಡ ವಿರೋಧಿ, ಧರ್ಮ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ನಮ್ಮ ಹೋರಾಟವೆಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಜನರ ತಲೆ ಮೇಲೆ ಫ್ಲವರ್ ಪಾಟ್ ಇಟ್ಟ ಕಾಂಗ್ರೆಸ್..ಹಾಲಿನ ಬೆಲೆ ಏರಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

‘ದೇಶದ ಕಾನೂನಿನ ವಿರುದ್ಧ, ರೈತರ ಬೆಳೆ-ಬೆಲೆ ಸ್ವಾತಂತ್ರ್ಯದ ವಿರುದ್ಧ, ಭಯೋತ್ಪಾದಕರನ್ನು ಬಂಧಿಸುವ ವಿರುದ್ಧ, ಶುದ್ಧ ಹಸ್ತ ಅಧಿಕಾರಿಗಳ ವಿರುದ್ಧ, ಜನತೆಯ ಉತ್ತಮ ಭವಿಷ್ಯದ ವಿರುದ್ಧ, ಜನರ ವಿಕಾಸದ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ’ ಎಂದು ಬಿಜೆಪಿ ಆರೋಪಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News