ಬೆಂಗಳೂರು: ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು, ಕೇರಳ ಮತ್ತು ಪುದುಚೇರಿಗೆ ಹರಿಯುವ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ಅಥವಾ ತಮಿಳುನಾಡು ಪರವಾಗಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕಾವೇರಿ ನೀರು ಹರಿಸುವ ವಿಚಾರ ಕರ್ನಾಟಕದ ವಿರೋಧ ಪಕ್ಷಗಳು ಮತ್ತು ರೈತ ಸಂಘಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕನ್ನಡ ಸಂಘಗಳು, ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ತಮಿಳು ಸಮುದಾಯದವರು ಬೆಂಗಳೂರು ಬಂದ್‌ಗೆ ಬೆಂಬಲ ನೀಡಿರುವುದು ಈಗ ಚರ್ಚಾ ವಿಷಯವಾಗಿದೆ. ಕರ್ನಾಟಕದಲ್ಲಿ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಕೂಡ ಬಂದ್‌ಗೆ ಬೆಂಬಲ ನೀಡಿರುವುದರಿಂದ ಬೆಂಗಳೂರು ಬಂದ್‌ಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಸೆಪ್ಟೆಂಬರ್ 26ರ ಮಂಗಳವಾರ ಬೆಂಗಳೂರು ನಗರ ಬಂದ್ ಮಾಡಲು ರೈತ ಪರ ಸಂಘಟನೆಗಳು ನಿರ್ಧರಿಸಿವೆ. ಬೆಂಗಳೂರು ಬಂದ್‌ಗೆ 48 ಒಕ್ಕೂಟಗಳು ಸಾರ್ವಜನಿಕವಾಗಿ ಬೆಂಬಲ ನೀಡಿವೆ.


ಇದನ್ನೂ ಓದಿ-6ನೇ ಗ್ಯಾರಂಟಿಯಾಗಿ ʼಮದ್ಯಭಾಗ್ಯʼ : ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ


ಕಾವೇರಿ ನೀರಿನ ವಿಚಾರದಲ್ಲಿ ಹಠಮಾರಿ ಧೋರಣೆ ಅನುಸರಿಸುತ್ತಿರುವ ತಮಿಳುನಾಡು ಸರಕಾರದ ವಿರುದ್ಧ ಇದೇ ತಿಂಗಳ 26ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವಂತೆ ಬೆಂಗಳೂರಿನ ಜನತೆಗೆ ರೈತ ಸಂಘಗಳು ಮನವಿ ಮಾಡಿದೆ. 


ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ಬೆಂಗಳೂರಿನಲ್ಲಿ ನೆಲೆಸಿರುವ ಜನರು ನಿತ್ಯವೂ ಕಾವೇರಿ ನೀರು ಕುಡಿಯುತ್ತಿದ್ದು, ಇದೇ ಕಾವೇರಿ ನೀರಿನ ಸಮಸ್ಯೆ ವಿರುದ್ಧ ಹೋರಾಟಕ್ಕೆ ಮುಂದಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕಾವೇರಿ ನೀರು ಯಥೇಚ್ಛವಾಗಿ ಇದ್ದಾಗ ಆ ನೀರನ್ನು ತಮಿಳುನಾಡಿಗೆ ಬಿಟ್ಟರೂ ಪರವಾಗಿಲ್ಲ, ಈಗ ಕುಡಿಯಲು, ಬೆಳೆಯುವ ಬೆಳೆಗೆ ನೀರಿಲ್ಲದಿದ್ದರೆ ತಮಿಳುನಾಡಿಗೆ ಹೇಗೆ ನೀರು ಬಿಡಬೇಕು ಎಂದು ರೈತ ಸಂಘಗಳು ಪ್ರಶ್ನಿಸುತ್ತಿವೆ.


​ಇದನ್ನೂ ಓದಿ- ಪಾಕಿಸ್ತಾನ ಲೆಕ್ಕಕ್ಕೆ ಇಲ್ಲ ಅಗತ್ಯ ಬಿದ್ದರೆ ಚೀನಾ ಎದುರಿಸುತ್ತೇವೆ


ಬೆಂಗಳೂರು ಬಂದ್‌ಗೆ ಬೆಂಬಲ 


* ಬಿಜೆಪಿ
* ಅಖಿಲ‌ ಕರ್ನಾಟಕ ಯುವ ಕನ್ನಡಿಗರ ವೇದಿಕೆ
* ಜೈ ಭಾರತ ರಕ್ಷಣಾ ವೇದಿಕೆ
* ಕಾರ್ಮಿಕರ ಪಡೆ
* ಕರವೇ ಕನ್ನಡಿಗರ ಸಾರಥ್ಯ
* ಕರವೇ ಕನ್ನಡ ಸೇನೆ
* ನಮ್ಮ‌ ನಾಡ ರಕ್ಷಣಾ ವೇದಿಕೆ
* ಕರ್ನಾಟಕ ಸಿಂಹ ಘರ್ಜನೆ ವೇದಿಕೆ
* ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ
* ಹೊಯ್ಸಳ ಸೇನೆ
* ಕರವೇ ಗಜಸೇನೆ
* ಜೈ ಕರುನಾಡ ಯುವಸೇನೆ
* ಕರ್ನಾಟಕ ಚಾಲಕರ ವೇದಿಕೆ
* ಕರ್ನಾಟಕ ಕನ್ನಡಿಗರ ವೇದಿಕೆ
* ಕರ್ನಾಟಕ ಯುವ ರಕ್ಷಣಾ ವೇದಿಕೆ
* ಸುವರ್ಣ ಕರ್ನಾಟಕ ಹಿತಾರಕ್ಷಣ ವೇದಿಕೆ
* ಕಾವೇರಿ ಕನ್ನಡಿಗರ ವೇದಿಕೆ
* ಅಖಿಲ ಭಾರತ ಕಾರ್ಮಿಕರ ಹಿತರಕ್ಷಣಾ ವೇದಿಕೆ
* ದಲಿತ ಸಂರಕ್ಷಣ ಸಮಿತಿ
* ಕರ್ನಾಟಕ ಸಮರ ಸೇನೆ
* ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ
* ದಲಿತ ಜನಸೇನಾ
* ಕರುನಾಡ ಜನ ಬೆಂಬಲ ವೇದಿಕೆ
* ಕರ್ನಾಟಕ ದಲಿತ ಜನಸೇನೆ
* ಜೈ ಭಾರತ ಚಾಲಕರ ಸಂಘ
* ರಾಜ್ಯ ಕರ್ನಾಟಕ ಸೇನೆ
* ಕರವೇ ಜನಸೇನೆ
* ಅಖಂಡ ಕರ್ನಾಟಕ‌ ರಕ್ಷಣಾ ವೇದಿಕೆ
* ಕರುನಾಡ ಸೇನೆ
* ಕರ್ನಾಟಕ ಚಳುವಳಿ ವೇದಿಕೆ
* ಕನ್ನಡ ಸಾಹಿತ್ಯ ಪರಿಷತ್
* ರಾಜ್ಯ ಕಬ್ಬು ಬೆಳೆಗಾರರ ಸಂಘ
* ಆಮ್ ಆದ್ಮಿ ಪಕ್ಷ
* ಜಯ ಕರ್ನಾಟಕ ಸಂಘಟನೆ
* ಕರುನಾಡ ಯುವಪಡೆ
* ಕೆಂಪೇಗೌಡ ಸೇನೆ
* ಒಕ್ಕಲಿಗರ ಯುವ ವೇದಿಕೆ
* ನೆರವು ಕಟ್ಟದ ಕಾರ್ಮಿಕರ ಸಂಘ
* ಅಖಿಲ‌ ಕರ್ನಾಟಕ ಯುವ ಸೇನೆ
* ಯುವ ಶಕ್ತಿ‌ ಕರ್ನಾಟಕ
* ರಾಷ್ಟ್ರೀಯ ಚಾಲಕರ ಒಕ್ಕೂಟ
* ಕನ್ನಡ ಚಳವಳಿ ಕೇಂದ್ರ
* ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ
* ತಮಿಳು ಸಂಘ
* ಕೆಂಪೇಗೌಡ ಸಮಿತಿ
* ಕರ್ನಾಟಕ ರಕ್ಷಣಾ ಸೇನೆ
* ಆಮ್ ಆದ್ಮಿ ಪಕ್ಷ
* ಕರ್ನಾಟಕ ರಕ್ಷಣಾ ಸೇನೆ
* ಜಯ ಕರ್ನಾಟಕ ಸಂಘಟನೆ
* ರಾಷ್ಟ್ರೀಯ ಚಾಲಕರ ಒಕ್ಕೂಟ
* ತಮಿಳು  ಭಾಷಿಕರ ಸಂಘದ
* ಕೆಂಪೇಗೌಡ ಸಮಿತಿ
* ರಾಜಸ್ತಾನಿ ಭಾಷಿಕರ ಸಂಘ
* ಚಿಕ್ಕ ಪೇಟೆ ವ್ಯಾಪಾರಿಗಳ ಸಂಘ
* ಓಲಾ ಉಬರ್ ಚಾಲಕರ ಸಂಘ


ಬೆಂಗಳೂರು ಬಂದ್‌ ಏನಿರುತ್ತೇ..? 


*ತರಕಾರಿ, ಹಾಲು
* ಆಂಬ್ಯುಲೆನ್ಸ್
* ನಮ್ಮ ಮೆಟ್ರೋ
* ಬ್ಯಾಂಕ್
* ಆಸ್ಪತ್ರೆ
* ಮೆಡಿಕಲ್ಸ್


ಏನಿರಲ್ಲ? 
* ಖಾಸಗಿ ಬಸ್
* ಆಟೋ
* ಚಿಕ್ಕಪೇಟೆ ವ್ಯಾಪಾರಿಗಳು
* ಓಲಾ, ಊಬರ್
* ಹೊಟೇಲ್
* ಬಿಬಿಎಂಪಿ 
* BMTC, KSRTC


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.