ಬೆಂಗಳೂರು: ಬೆಸ್ಕಾಂ ಸಾಫ್ಟ್ ವೇರ್ ನ ತಾಂತ್ರಿಕ ದೋಷದಿಂದಾಗಿ ನವೆಂಬರ್ 1 ರಂದು ಬೆಂಗಳೂರಿನ ದೊಡ್ಡಕಮ್ಮನಹಳ್ಳಿ ನಿವಾಸಿಗಳು ಬ್ಬರ ಮನೆಗೆ ನೀಡಿದ್ದ 22 ಸಾವಿರ ಕರೆಂಟ್ ಬಿಲ್ ಸಂಬಂಧ ಬೆಸ್ಕಾಂ ಅಧಿಕಾರಿಗಳು ಇದೀಗ ಸ್ಪಷ್ಟನೆ ನೀಡಿದ್ದಾರೆ.  ವಿದ್ಯುತ್ ಬಿಲ್ ನಲ್ಲಿ ಕಂಡ ಬಂದ ವ್ಯತ್ಯಾಸವನ್ನು ಮರು ದಿನವೇ ಸರಿಪಡಿಸಲಾಗಿದ್ದು, ಆನ್ ಲೈನ್ ಬಿಲ್ ಪಾವತಿಗೆ ಯಾವುದೇ  ತೊಂದರೆಯಿಲ್ಲ ಎಂದು ಬೆಸ್ಕಾಂ ತಿಳಿಸಿದೆ.


COMMERCIAL BREAK
SCROLL TO CONTINUE READING

ಸಾಫ್ಟ್ ವೇರ್ ತಾಂತ್ರಿಕ ದೋಷದಿಂದಾಗಿ ನವೆಂಬರ್ 1 ರಂದು ಗ್ರಾಹಕರಿಗೆ ನೀಡಿರುವ ಬಿಲ್ ನಲ್ಲಿ ಕಂಡಬಂದ ವ್ಯತ್ಯಾಸವನ್ನು ತಕ್ಷಣವೇ ಸರಿಪಡಿಸಿ ಆನ್ ಲೈನ್ ಬಿಲ್ ಪಾವತಿಗೆ ಅವಕಾಶ ನೀಡಲಾಗಿದ್ದು, ಗ್ರಾಹಕರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಶಾಸಕ ಎನ್. ಮಹೇಶ್ ಕಮಾಲ್...7 ಅನರ್ಹರಲ್ಲಿ 6 ಮಂದಿ ಜಯಭೇರಿ!!


ಇನ್ಫೋಸಿಸ್ನಿಂದ ಇನ್ ಫೋಟೆಕ್ ಕಂಪ್ಯೂಟರ್ ಸಲ್ಯೂಷನ್ಸ್ ಕಂಪನಿಯು ಸಾಫ್ಟ್ ವೇರ್ ನಿರ್ವಹಣೆ ಹೊಣೆಗಾರಿಕೆವಹಿಸಿಕೊಂಡ ಸಂದರ್ಭದಲ್ಲಾದ ತಾಂತ್ರಿಕ ದೋಷದಿಂದಾಗಿ ಗ್ರಾಹಕರಿಗೆ ನವೆಂಬರ್ 1 ರಂದು ನೀಡಿದ್ದ ಭೌತಿಕ ಬಿಲ್ ನಲ್ಲಿ ಕಂಡ ಬಂದ ದೋಷವನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.


ಇದನ್ನೂ ಓದಿ : PM Modi in Bengaluru: ಪ್ರಧಾನಿ ಮೋದಿಗೆ ವ್ಯಂಗ್ಯವಾಗಿ ಪ್ರಶ್ನಿಸಿ ಸ್ವಾಗತ ಕೋರಿದ ಸಿದ್ದರಾಮಯ್ಯ


ಕಂಪ್ಯೂಟರ್ ನಲ್ಲಿ ಸರಿಯಾದ ಬಿಲ್ ಮೊತ್ತವನ್ನು ನಮೂದಿಸಿರುವುದರಿಂದ ಬೆಸ್ಕಾಂ ಬಿಲ್ ಕೌಂಟರ್ ನಲ್ಲಿ ಅಥವಾ ಆನ್ ಲೈನ್ ಪಾವತಿ ಸಂದರ್ಭದಲ್ಲಿ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.ಗ್ರಾಹಕರಿಗೆ ಆನ್ ಲೈನ್ ಬಿಲ್ ಪಾವತಿಯಲ್ಲಿ ತೊಂದರೆ ಆಗಿದೆ ಎಂದು ಕೆಲವು ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.