ಬೆಂಗಳೂರು : ಮನೆಯಿಂದ ಹೊರಗಡೆ ನಾಯಿಯನ್ನ ಬಿಡೋ ಮುನ್ನ ಎಚ್ಚರವಾಗಿರಿ. ಕಾಳಜಿ ಮಾಡೊ ನೆಪದಲ್ಲಿ ಬರೊ ಖದೀಮರು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾರೆ. ಇದೇ ಮಾದರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


COMMERCIAL BREAK
SCROLL TO CONTINUE READING

ಕೆಲವರಿಗೆ ಶ್ವಾನ ಅಂದ್ರೆ ಪ್ರಾಣ. ಸಾಕು ನಾಯಿಯನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ತಾರೆ. ಅದಕ್ಕೆ ಬಟ್ಟೆ ಹಾಕಿಸಿ.. ಊಟ ಮಾಡಿಸಿ ಮುದ್ ಮಾಡ್ತಾರೆ. ಆದ್ರೆ ಅದೇ ಪ್ರೀತಿಯ ನಾಯಿ ಕಳೆದುಹೋದ್ರೆ ಹೇಗಿರ್ಬೇಡ ಹೇಳಿ. ಇದೇ ರೀತಿಯಾದ ಸಾಕು ನಾಯಿಯೊಂದು ಕಳ್ಳತನವಾಗಿದ್ದು ಹುಡುಕಿ ಕೊಡುವಂತೆ ಮಾಲೀಕರು ಬೆಂಗಳೂರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮನೆಯಿಂದ ಹೊರಗಡೆ ನಾಯಿಯನ್ನ ಓಡಾಡಲು ಬಿಡುವ ಮುನ್ನ ಎಚ್ಚರವಾಗಿರೋದು ಒಳ್ಳೇದು. ಯಾಕಂದ್ರೆ ನಾಯಿಯನ್ನೇ ಕಳ್ಳತನ ಮಾಡೊ ಖದೀಮರಿದ್ದಾರೆ .


ಇದನ್ನೂ ಓದಿ: ಹನಿ ಗ್ಯಾಂಗ್‌ನಿಂದ ʼಮಂಚಕ್ಕೆ ಕರೆದು ಮುಂಜಿʼ ಮಾಡಿಸುವುದಾಗಿ ಧಮ್ಕಿ : ಉದ್ಯಮಿ ಜಸ್ಟ್‌ ಮಿಸ್‌


ಮಾರ್ಚ್ 17 ರ ಶುಕ್ರವಾರ ಬೆಳಗ್ಗೆ 8 ಗಂಟೆ ಸಮಯ ಜೋಯಿ ಹೆಸರಿನ 1 ವರ್ಷದ ಹಸ್ಕಿ ಬ್ರೀಡ್ ನ ಶ್ವಾನವನ್ನು ಜಿಯಾನ್ ಸೈಯದ್ ಎಂಬುವರು ವಾಕ್ ಗೆ ಬಿಟ್ಟಿದ್ರು. ಕೋರ್ಲ್ಸ್ ಪಾರ್ಕ್ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದ ನಾಯಿಯನ್ನ ಕಾಳಜಿ ಮಾಡುವ ರೀತಿ ಬಂದ ಮೂವರು ಆಸಾಮಿಗಳು  ಸಿನಿಮೀಯ ಶೈಲಿಯಲ್ಲಿ ಸಾಕು ಕದ್ದು ಪರಾರಿಯಾಗಿದ್ದಾರೆ. ಯುವಕರ ಖತರ್ನಾಕ್ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಸೈಯದ್ ಎಂಬುವರು ಟ್ವೀಟ್ ಮೂಲಕ ಜೋಯಿ ಎಂಬ ನಾಯಿಯ ಪೋಟೋ ಹಾಕಿ ಹುಡುಕಿಕೊಡುವಂತೆ ಟ್ವೀಟ್ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮುದ್ದು ಮುದ್ದಾಗಿದ್ದ ಶ್ವಾನವು ಮಾಲೀಕರಿಂದ ದೂರವಾಗಿದ್ದು ಕಳ್ಳರ ಕೈಸೇರಿದೆ. ಯಾವುದಕ್ಕೂ ನೀವು ನಿಮ್ಮ ನಾಯಿಗಳನ್ನ ಹೊರಗೆ ಬಿಡುವ ಮುನ್ನ ಎಚ್ಚರವಾಗಿರಿ. ಇದೇ ಖದೀಮರು ನಿಮ್ಮ ಶ್ವಾನವನ್ನು ಸ್ವಾಹ ಮಾಡಬಹುದು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.