ಡಿಯೋ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಖದೀಮರ ಬಂಧನ
ಬೆಂಗಳೂರು ನಗರ ಮತ್ತು ಕೋಲಾರ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ (Theft) ಮಾಡಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಳ್ಳರು ಅತಿ ಹೆಚ್ಚು ಡಿಯೋ ಬೈಕ್ ಗಳನ್ನೇ ಕದ್ದಿರುವುದು ಆಶ್ಚರ್ಯಕರವಾಗಿದೆ.
ಬೆಂಗಳೂರು: ಬೈಕ್ ಗಳನ್ನ ಕದ್ದು ಮರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರ ಮತ್ತು ಕೋಲಾರ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ (Theft) ಮಾಡಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಳ್ಳರು ಅತಿ ಹೆಚ್ಚು ಡಿಯೋ ಬೈಕ್ ಗಳನ್ನೇ ಕದ್ದಿರುವುದು ಆಶ್ಚರ್ಯಕರವಾಗಿದೆ.
ಇದನ್ನೂ ಓದಿ: ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಕನ್ನಡಿಗ ಯೋಧ
ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಡಿಮ್ಯಾಂಡ್ ಇರುವ ಡಿಯೋ ಬೈಕ್‌ಗಳನ್ನೆ (Dio Bike) ಟಾರ್ಗೆಟ್ ಮಾಡುತ್ತಿದ್ದರು. ನಗರದಲ್ಲಿ ಹೀಗೆ ಬೈಕ್ ಗಳನ್ನೂ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಬೇಗೂರು ಪೊಲೀಸರ ಕಾರ್ಯಾಚರಣೆ:
ಮತ್ತೊಂದು ಪ್ರಕರಣದಲ್ಲಿ ಬೇಗೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಚಾರ್ಸಿ ಮತ್ತು ಎಂಜಿನ್ ನಂಬರ್ (Engine Number) ಬದಲಾಯಿಸಿ ವಾಹನ ಮಾರಾಟ ಮಾಡುತ್ತಿದ್ದ ಈ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
1 ಕೋಟಿ 55 ಲಕ್ಷ ಮೌಲ್ಯದ 6 ಇನೋವಾ ಕಾರು, 1 ಟಯೋಟಾ ಕಾರು, 1 ಇಟಿಯೋಸ್ ಕಾರನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆಕ್ಸಿಡೆಂಡ್ ಆದ (Accident) ವಾಹನಗಳ ಚಾರ್ಸಿ, ಎಂಜಿನ್ ನಂಬರ್ ಉಜ್ಜಿ ಬದಲಾಯಿಸುತ್ತಿದ್ದರು.
ಇದನ್ನೂ ಓದಿ: V Somanna : ಸಚಿವ ಸೋಮಣ್ಣ ಮಾತಿಗೆ ಕಿಮ್ಮತ್ತಿಲ್ಲ : ಚಾಮರಾಜನಗರದಲ್ಲಿ ಸ್ಥಗಿತಗೊಂಡಿಲ್ಲ ಗಣಿಗಾರಿಕೆ
ಬಳಿಕ ಈ ವಾಹನಗಳನ್ನು ತಮಿಳುನಾಡು (Tamilnadu) ಮತ್ತು ರಾಜ್ಯದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.