ಮಂಡ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಅಹೋರಾತ್ರಿ ಧರಣಿ ಪಾಲಿಟಿಕ್ಸ್.. ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಕಮಿಷನ್ ಅಸ್ತ್ರ.
BJP-Congress Ahoratri Dharani : ಎನ್. ಚಲುವರಾಯಸ್ವಾಮಿ ವಿರುದ್ದ ಮೇಲಿಂದ ಮೇಲೆ ಆರೋಪಗಳು ಕೇಳಿ ಬರ್ತಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದೀಗ ಸಚಿವ ಚಲುವರಾಯಸ್ವಾಮಿ ವಿರುದ್ದ ಮುಗಿಬಿದ್ದಿದ್ದಾರೆ.
BJP-Congress : ಇನ್ನು ಮಂಡ್ಯ ದಲ್ಲಂತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭ್ರಷ್ಟ ಸಚಿವ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸ್ತಿದ್ರೆ ಇತ್ತ ಜಿಲ್ಲೆಯ ಕೈ ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಸಚಿವ ಚಲುವರಾಯಸ್ವಾಮಿ ಬೆನ್ನಿಗೆ ನಿಂತು ತಾವು ಕೂಡ ಪ್ರತಿಯಾಗಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಮಂಡ್ಯದಲ್ಲಿ ಹೇಗಿದೆ ಚಲುವರಾಯಸ್ವಾಮಿ ಪರ ವಿರೋಧ ಪ್ರತಿಭಟನೆ ಅನ್ನೋ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹೌದು! ಕೃಷಿ ಸಚಿವ ಚಲುವರಾಯಸ್ವಾಮಿಯವರ ವಿರುದ್ದ ಮೇಲಿಂದ ಮೇಲೆ ಕೇಳಿ ಬರ್ತಿರೋ ಭ್ರಷ್ಟಾಚಾರ ಹಾಗೂ ಲಂಚದ ಆರೋಪ ಪ್ರಕರಣಗಳು ಇದೀಗ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಅಸ್ತ್ರಗಳಾಗಿವೆ. ಜೆಡಿಎಸ್ ನ ನಾಯಕರು ಹಾಗು ಬಿಜೆಪಿ ನಾಯಕರು ಸರ್ಕಾರ ಹಾಗೂ ಸಚಿವ ಚಲುವರಾಯ ಸ್ವಾಮಿ ಹಾಗೂ ಡಿಕೆಶಿ ವಿರುದ್ದ ಮುಗಿಬಿದ್ದು ವಾಗ್ದಾಳಿ ನಡೆಸ್ತಿದ್ರೆ ಇತ್ತ ಮಂಡ್ಯದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ವಿರುದ್ದ ಪೇ ಸಿಎಸ್ ಅಭಿಯಾನ ಆರಂಭಿಸಿದೆ.
ಅಲ್ಲದೆ ನಿನ್ನೆಯಿಂದ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸ್ತಿದ್ದಾರೆ. ಎರಡನೇ ದಿನದ ಬಿಜೆಪಿ ಪಕ್ಷದ ಧರಣಿಗೆ ಮಾಜಿ ಸಚಿವ ಕೆ.ಗೋಪಾಲಯ್ಯ ಆಗಮಿಸಿ ಧರಣಿಗೆ ಕುಳಿತು ರಾಜ್ಯ ಸರ್ಕಾರ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿದ್ರು.
ಇನ್ನು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸಚಿವ ಚಲುವರಾಯಸ್ವಾಮಿಯನ್ನು ಟಾರ್ಗೆಟ್ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ಕೈ ಶಾಸಕರು ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ದ ಕೆಂಡಾಮಂಡಲರಾಗಿದ್ದಾರೆ.ತಮ್ಮ ಜಿಲ್ಲೆಯ ಶಾಸಕರು,ಸಚಿವರು ಆಗಿರುವ ಚಲುವರಾಯಸ್ವಾಮಿಯವರ ಬೆನ್ನಿಗೆ ನಿಂತು ಚಲುವ ರಾಯಸ್ವಾಮಿ ಪರ ಹೋರಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ-ವಿಮೆ ತಿರಸ್ಕರಿಸಿದ ರಿಲೈನ್ಸ ಜನರಲ್ ಇನ್ಸುರೆನ್ಸ್ ಕಂಪನಿಗೆ ರೂ.5 ಲಕ್ಷ 32.5 ಸಾವಿರಗಳ ದಂಡ
ನಿನ್ನೆ ನಾಗಮಂಗಲದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಚಲುವರಾಯಸ್ವಾಮಿ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿ ಚಲುವರಾಯಸ್ವಾಮಿಗೆ ಬೆಂಬಲಿಸಿದ್ದಾರೆ.ಇಂದು ಜಿಲ್ಲೆಯ ಕಾಂಗ್ರೆಸ್ ಶಾಸಕರೆಲ್ಲರು ಒಗ್ಗಟ್ಟಾಗಿ ತಮ್ಮ ನಾಯಕನ ಪರ ನಿಂತಿದ್ದಾರೆ.ಮಂಡ್ಯ ಶಾಸಕ ರವಿಕುಮಾರ್ ನೇತೃತ್ವದಲ್ಲಿ ಬಿಜೆಪಿಯವರು ಅಹೋರಾತ್ರಿ ಆ ರಂಭಿಸಿರುವ ಧರಣಿ ಪ್ರತಿಯಾಗಿ ತಾವು ಕೂಡ ಇಂದು ಅಹೋ ರಾತ್ರಿ ಧರಣಿ ಆರಂಭಿಸಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಶಾಮಿಯಾನ ಹಾಕಿ ಅಹೋರಾತ್ರಿ ಧರಣಿ ಆರಂಭಿ ಸಿದ್ದು ಅಕ್ಕಿಕೊಡದ ಕೇಂದ್ರ ಸರ್ಕಾರದ ವಿರುದ್ದ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರ ಮಾಡಲು ಹೊರ ಟಿರುವ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ದ ಹರಿಹಾಯ್ದಿದ್ದಾರೆ.
ಒಟ್ನಲ್ಲಿ ಸಚಿವ ಚಲುವರಾಯಸ್ವಾಮಿಯ ಈ ಪ್ರಕರಣ ಇದೀಗ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ರಾಜ್ಯ ಸರ್ಕಾರದ ವಿರುದ್ದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಮುಗಿ ಬಿದ್ದಿದ್ದಾರೆ. ಇನ್ನು ಮಂಡ್ಯದಲ್ಲಿ ಸಚಿವ ಚಲುವರಾಯ ಸ್ವಾಮಿ ಪರ ವಿರೋಧ ಪ್ರತಿಭಟನೆಯ ಕಾವು ಜೋರಾಗಿದೆ.
ಎರಡು ಪಕ್ಷ ದವರ ಈ ಪ್ರತಿಭಟನೆಗೆ ಪೊಲೀಸರು ಭ್ರದ್ರತೆ ಒದಗಿಸಲು ಹೈರಾ ಣಾಗಿದ್ದು ಈ ಪ್ರತಿಭಟನೆ ಎಲ್ಲಿ ಹೋಗಿ ನಿಲ್ಲುತ್ತದೆ ಅನ್ನೋದ್ನ ಕಾದು ನೋಡಬೇಕಿದೆ.
ಇದನ್ನೂ ಓದಿ-ವಿಧಾನಸಭೆ ಸೋಲಿನ ಬಗ್ಗೆ ಸೋಮಣ್ಣ ಅಸಮಾಧಾನ.. ಬಿಜೆಪಿ ಬಿಟ್ಟು ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದರಾ ಸೋಮಣ್ಣ.?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.