ಬೆಂಗಳೂರು : 2023 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿನಾಯ ಸೋಲು ನೋಡಿದ ಕಾರಣ ಕಮಲ ಪಕ್ಷದಲ್ಲಿ ಹಲವಾರು ಬದಲಾವಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಈ ಪೈಕಿ ರಾಜ್ಯಾಧ್ಯಕ್ಷ, ರಾಜ್ಯ ಉಸ್ತುವಾರಿ ಸೇರಿದಂತೆ ಕೆಲ ಪದಾಧಿಕಾರಿಗಳು ಬದಲಾಗಬಹುದು.


COMMERCIAL BREAK
SCROLL TO CONTINUE READING

ರಾಜ್ಯ ಉಸ್ತುವಾರಿ ಬದಲಾವಣೆ?
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ತಲೆದಂಡ ಸಾಧ್ಯತೆ, ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಉಸ್ತುವಾರಿ ಬದಲಾವಣೆಗೆ ರಾಜ್ಯದ ಪ್ರಮುಖ ನಾಯಕರಿಂದ ಒತ್ತಡ ಹೇರಿದ್ದಾರೆ. ರಾಜ್ಯದ ಉಸ್ತುವಾರಿಯಾಗಿ ಯೋಜನೆ, ನಿರ್ವಹಣೆ, ಜಾರಿಯಲ್ಲಿ ಸಂಪೂರ್ಣ ವಿಫಲ, ಆಗಿದ್ದಾರೆ ಹಾಗೂ ಕಾಂಗ್ರೆಸ್ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ ಎಂದು ಹೇಳಲಾಗುತ್ತಿದೆ. 


ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಂತ್ರ, ನಾಯಕರ ಮೇಲಿನ ಹಿಡಿತ ಪ್ರಚಾರ ತಂತ್ರ, ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ರೀತಿ ಅರುಣ್ ಸಿಂಗ್  ಅವರಿಗೆ ಬರಲಿಲ್ಲ ಅಥವಾ ಇಲ್ಲ ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ- ಹೊಸ ಮನೆ, ಮನೆ ಬದಲಾಯಿಸಿದವರಿಗೂ ಗೃಹ ಜ್ಯೋತಿ ಸೌಲಭ್ಯ : ಸಚಿವ ಕೆ.ಜೆ. ಜಾರ್ಜ್


ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸೂಕ್ತ, ಸಮರ್ಥ ಮಾರ್ಗದರ್ಶಕನ ಅವಶ್ಯಕತೆ ಇದೆ. ಹಾಲಿ ಉಸ್ತುವಾರಿ ಅರುಣ್ ಸಿಂಗ್ ಬದಲಿಸಿ, ಹೊಸ, ಖಡಕ್ , ಸಮರ್ಥ ಉಸ್ತುವಾರಿಯನ್ನು ಕರ್ನಾಟಕಕ್ಕೆ ನೀಡಿ. ನಾವು ಹೆಚ್ಚು ಸೀಟ್ ಗಳನ್ನು ಗೆದ್ದು ತರುತ್ತೇವೆ, ಎಂದು ಕೆಲ ಹಿರಿಯ ನಾಯಕರಿಂದ ವರಿಷ್ಠರಿಗೆ ಮನವಿ ಮಾಡಲಾಗಿದೆ.  ಈ ಹಿನ್ನೆಲೆಯಲ್ಲಿ ಉಸ್ತುವಾರಿ ಅರುಣ್ ಸಿಂಗ್ ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 


ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ :
ಯಾವುದೇ ಪಕ್ಷದಲ್ಲಿ ಚುನಾವಣೆಯನ್ನು ಗೆಲ್ಲಿಸುವ ಜವಾಬ್ದಾರಿ ರಾಜ್ಯಾಧ್ಯಕ್ಷರದ್ದಾಗಿರಲಿದೆ. ಸೋಲು ಕಂಡ ಸಂದರ್ಭದಲ್ಲಿ ಕಾರಣ ಏನೇ ಇರಲಿ ಸೋಲಿನ ಜವಾಬ್ದಾರಿ ಕೂಡ ಇವರೇ ಹೊರುತ್ತಾರೆ. ಈಗ 2023 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 66 ಸೀಟ್ ಪಡೆಯುವ ಮೂಲಕ ಹಿನಾಯ ಸೋಲು ಅನುಭವಿಸಿದೆ. ಈಗಾಗಲೇ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಲಿನ ಜವಾಬ್ದಾರಿ ಹೊತ್ತಿದ್ದಾರೆ. ಈ ಮದ್ಯ ಪಕ್ಷದ ಆಂತರಿಕ ವಲಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಪ್ರಾರಂಭ ಆಗಿದೆ.


ಪಕ್ಷದವರೇ ಹೇಳುವ ಪ್ರಕಾರ ರೇಸ್ ನಲ್ಲಿ ಕೆಲ ಪ್ರಬಲ ಅಭ್ಯರ್ಥಿಗಳು ಇದ್ದಾರೆ. ಜಾತಿ ಆಧಾರದ ಮೇಲೆ ಒಕ್ಕಲಿಗ ಸಮುದಾಯದ ನಾಯಕರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಚರ್ಚೆ ನಡೆಯುತ್ತಿದೆ ಎಂತಲೂ ಹೇಳಲಾಗುತ್ತಿದೆ. 


ಇದನ್ನೂ ಓದಿ- "ಅಭಿವೃದ್ಧಿಗೆ ನನ್ನ ಆದ್ಯತೆ; ಇಸ್ಪೆಟ್ ಕ್ಲಬ್, ಅನಧಿಕೃತ ಸಾರಾಯಿ ಮಾರಾಟ ನಿಲ್ಲಿಸಲು ಕ್ರಮ": ಶಾಸಕ ವಿನಯ ಕುಲಕರ್ಣಿ


ಹಾಗಾದರೆ ಬಿಜೆಪಿ ರಾಜ್ಯಾಧ್ಯಕ್ಷರ ರೇಸ್ ನಲ್ಲಿ ಇರುವ ಅಭ್ಯರ್ಥಿಗಳು ಯಾರು?
ಸಿಟಿ ರವಿ:

ಸದ್ಯಕ್ಕೆ ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿರುವ, ಚಿಕ್ಕಮಗಳೂರು ವಿಧಾನಸಭೆ ಪರಾಜಯ ಅಭ್ಯರ್ಥಿ ಸಿಟಿ ರವಿ ರಾಜ್ಯಾಧ್ಯಕ್ಷ ಪಟ್ಟದ ರೇಸ್ ನಲ್ಲಿ ಇದ್ದಾರೆ.


ಆರ್ ಅಶೋಕ್ :  
ಮುಂದೆ ನಡೆಯುವ ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಆರ್ ಅಶೋಕ್ ಹೆಸರು ರಾಜ್ಯಾಧ್ಯಕ್ಷ ರೇಸ್ ನಲ್ಲಿ ಬಲವಾಗಿ ಕೇಳಿಬರುತ್ತಿದೆ.


ಅಶ್ವಥ್ ನಾರಾಯಣ: 
ರಾಮನಗರ ವಿಚಾರವಾಗಿ ಡಿಕೆ ಸಹೋದರರನ್ನ ನೇರವಾಗಿ ಎದುರುಹಾಕಿಕೊಂಡು ಪಕ್ಷದ ಕೇಂದ್ರ ವರಿಷ್ಠರಿಗೆ  ಹತ್ತಿರವಾದ ಮಾಜಿ ಡಿಸಿಎಂ ಸಿ.ಎನ್. ಅಶ್ವಥ್ ನಾರಾಯಣ ಹೆಸರು ಕೂಡ ಬಿಜೆಪಿ ರಾಜ್ಯಾಧ್ಯಕ್ಷರ ರೇಸ್ ನಲ್ಲಿ ಕೇಳಿಬರುತ್ತಿದೆ.


ಶೋಭಾ ಕರಂದ್ಲಾಜೆ : 
ಕೇಂದ್ರ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಕೂಡ ಒಕ್ಕಲಿಗ ಸಮುದಾಯದ ನಾಯಕಿ ಆಗಿರುವ ಜೊತೆಗೆ ಮಹಿಳೆಯರಿಗೆ ಹತ್ತಿರ ಆಗಬಹುದು ಎಂಬ ಲೆಕ್ಕಾಚಾರ ಕೂಡ ಪಕ್ಷದಲ್ಲಿ ನಡೆಯುತ್ತಿದೆ.


ಇದನ್ನ ಹೊರತು ಪಡಿಸಿ, ಒಕ್ಕಲಿಗ ಸಮುದಾಯದ ನಾಯಕರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿದ್ದಲ್ಲಿ, ಲಿಂಗಾಯತ ಸಮುದಾಯದ ನಾಯಕರಿಗೆ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈ ಪೈಕಿ ರೇಸ್ ನಲ್ಲಿ ಶಾಸಕ ಯತ್ನಾಳ್ ರನ್ನ ಪರಿಗಣಿಸಬಹುದು ಎನ್ನಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ