ಬೆಂಗಳೂರು: ದಿವಂಗತ ಮಾಜಿ ಮುಖ್ಯಮಂತ್ರಿ ಆರ್. ಗುಂಡುರಾವ್ ಬಗ್ಗೆ ಪ್ರತಾಪ್ ಸಿಂಹ ವಾಗ್ದಾಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಆರ್. ಗುಂಡುರಾವ್ ಅವರ ಪುತ್ರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿಯವರಿಗೆ ನಮ್ಮ ಕುಟುಂಬದ ಮೇಲೆ ಪ್ರೀತಿ ಜಾಸ್ತಿ ಎಂದು ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

ಆರ್. ಗುಂಡೂರಾವ್ ಬಗ್ಗೆ ಪ್ರತಾಪ್ ಸಿಂಹ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್ ನಮ್ಮ ಕುಟುಂಬದ ಮೇಲೆ ಬಿಜೆಪಿಯವರಿಗೆ ಜಾಸ್ತಿ ಪ್ರೀತಿ. ಹಾಗಾಗಿ ಈ ಹಿಂದೆ ಶೋಭಾ ಕರಂದ್ಲಾಜೆ ನನ್ನ ಪತ್ನಿ ಬಗ್ಗೆ ಮಾತನಾಡಿದ್ದರು, ಈಗ ಪ್ರತಾಪ್ ಸಿಂಹ ನನ್ನ ತಂದೆ ಬಗ್ಗೆ ಮಾತಾಡಿದ್ದಾರೆ. ಸಭ್ಯತೆ, ಘನತೆ ಇಲ್ಲದ ಮಾತಿಗೆ ಏನು ಉತ್ತರ ಕೊಡೋದು. ಕೀಳು ಮಟ್ಟದ ಮಾತಿಗೆ ಪ್ರತಿಕ್ರಿಯೆ ನೀಡೋದು ಬೇಡ. ಎಲ್ಲವನ್ನು ಜನ ಗಮನಿಸುತ್ತಿದ್ದಾರೆ, ಅವರೇ ಉತ್ತರ ಕೊಡ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.


ಇನ್ನು ಈ ಬಗ್ಗೆ ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು, "ದಿವಂಗತ ಮಾಜಿ ಮುಖ್ಯಮಂತ್ರಿ ಆರ್. ಗುಂಡುರಾವ್ ಅವರ ಬಗ್ಗೆ ಮಾತನಾಡುವ ಮುನ್ನ ಪ್ರತಾಪ್ ಸಿಂಹ ತನ್ನ ಪಕ್ಷದ ಅಧ್ಯಕ್ಷರು ಏಕೆ ಜೈಲಿಗೆ ಹೋಗಿದ್ದರು ಎಂಬುದನ್ನು ಅರ್ಥ ಮಾಡಿಕೊಂಡರೆ, ಯಾರು ಗೂಂಡಾಗಳೆಂದು ತಿಳಿಯುತ್ತದೆ" ಎಂದು ಹರಿಹೈದಿದ್ದಾರೆ.