ಬುಡ ಕುಸಿಯುವ ಮುನ್ನ ಎಚ್ಚರವಹಿಸಿ ಸಿದ್ದರಾಮಯ್ಯ: ಬಿಜೆಪಿ ವ್ಯಂಗ್ಯ
ದ್ವೇಷದ ರಾಜಕಾರಣಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಬೆಂಗಳೂರು: ಬುಡ ಕುಸಿಯುವ ಮುನ್ನವೇ ಎಚ್ಚರಿಕೆ ವಹಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah)ಗೆ ಕರ್ನಾಟಕ ಬಿಜೆಪಿ ವ್ಯಂಗ್ಯವಾಡಿದೆ. ವಿಪಕ್ಷ ಸ್ಥಾನದಿಂದ ಸಿದ್ದರಾಮಯ್ಯನವರನ್ನು ತೆಗೆಯುವಂತೆ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ದೂರು ನೀಡಿದ್ದಾರೆಂಬ ವಿಚಾರವಾಗಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
‘ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಕರ್ನಾಟಕದ ಟ್ವಿಟರ್ ಪ್ರವಚನಕಾರ ಸಿದ್ದರಾಮಯ್ಯ(Siddaramaiah)ನವರೇ ನೀವು ಏನೂ ಕೆಲಸ ಮಾಡುವುದಿಲ್ಲ, ಬರೇ ಬುರುಡೆ ಬಿಡುವುದು, ಸಂತೆ ಭಾಷಣ ಕೊಡುವುದು ಎಂದು ಆರೋಪಿಸಿ ನಿಮ್ಮವರೇ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಬಹುಶಃ ಅವರೆಲ್ಲ ಮೂಲ ಕಾಂಗ್ರೆಸ್ಸಿಗರಾಗಿರಬಹುದಲ್ಲವೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
Viral Video: ‘ಮಸಾಲೆ ದೋಸೆ’ ಬೊಂಬಾಟ್ ಗುರು ಎಂದ ಬ್ರಿಟಿಷ್ ರಾಯಭಾರಿ..!
#ವಲಸೆರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಸಿದ್ದರಾಮಯ್ಯ ವಿರುದ್ಧ ಟೀಕಿಸಿರುವ ಬಿಜೆಪಿ(BJP Karnataka), ‘ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಮೂಲಕ ಕಾಂಗ್ರೆಸ್ಸಿಗರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಮೂಲ ಕಾಂಗ್ರೆಸ್ಸಿಗರಿಗೆ ಈಗ ಅಸ್ಥಿತ್ವದ ಭಯ ಕಾಡುತ್ತಿದೆ. ಇದೊಂದು ರೀತಿ ಭಸ್ಮಾಸುರನ ಕತೆಯಂತೆ ಇದೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ಸಿದ್ದರಾಮಯ್ಯನವರಿಗೆ ತಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗುವಷ್ಟರಲ್ಲೇ ವರಿಷ್ಠರಿಗೆ ದೂರು ಮುಟ್ಟಿದೆ. ಸದಾ ನೆರಮನೆಯ ದುಃಖಕ್ಕೆ ಅಳುವವರನ್ನು ಯಾರು ಮೆಚ್ಚುತ್ತಾರೆ ಸಿದ್ದರಾಮಯ್ಯ? ಬುಡ ಕುಸಿಯುವ ಮುನ್ನ ಎಚ್ಚರವಹಿಸಿ!’ ಅಂತಾ ಕುಟುಕಿದೆ.
ಇದನ್ನೂ ಓದಿ: N Mahesh : ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಶಾಸಕ ಎನ್ ಮಹೇಶ್!
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ