ಬೆಂಗಳೂರು: ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿರುವ ಬ್ರಿಟಿಷ್ ಸರ್ಕಾರದ ಭಾರತದ ರಾಯಭಾರಿ ಅಲೆಕ್ಸ್ ಎಲ್ಲಿಸ್(Alex Ellis) ಅವರು ಮೈಸೂರು ಮಸಾಲೆ ದೋಸೆ(Mysore Masala Dosa) ಸವಿದು ದಿಲ್ ಖುಷ್ ಆಗಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಎಲ್ಲಿಸ್ ಹಂಚಿಕೊಂಡಿದ್ದು, ಕನ್ನಡದಲ್ಲಿಯೇ ಕ್ಯಾಪ್ಶನ್ ಬರೆದು ಗಮನ ಸೆಳೆದಿದ್ದಾರೆ.
Delicious #MysuruMasalaDosa!!
A great way to begin my first visit to #Bengaluru.ಸಾಕ್ಕ್ಕತ್ ಆಗಿದೆ | बहुत स्वादिष्ट हैं pic.twitter.com/LDa2ZZ0Fua
— Alex Ellis (@AlexWEllis) August 4, 2021
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai)ಯವರನ್ನು ಭೇಟಿ ಮಾಡಲು ಕರ್ನಾಟಕಕ್ಕೆ ಆಗಮಿಸಿದ್ದ ಅಲೆಕ್ಸ್ ಎಲ್ಲಿಸ್ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಮಸಾಲೆ ದೋಸೆ ಸವಿದು ಖುಷಿ ವ್ಯಕ್ತಪಡಿಸಿದ್ದಾರೆ. ಒಂದು ಟ್ವೀಟ್ ನಲ್ಲಿ, ‘ರುಚಿಯಾದ ಮೈಸೂರು ಮಸಾಲೆ ದೋಸೆ!! ಬೆಂಗಳೂರಿಗೆ ನನ್ನ ಮೊದಲ ಭೇಟಿಯನ್ನು ಆರಂಭಿಸಲು ಒಂದು ಉತ್ತಮ ಸ್ವಾದ ಸಿಕ್ಕಿದೆ. ಮಸಾಲೆ ದೋಸೆ ಸಕ್ಕತ್ ಆಗಿದೆ, ತುಂಬಾ ಸ್ವಾದಿಷ್ಟವಾಗಿದೆ’ ಅಂತಾ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ, ‘ಮಸಾಲೆ ದೋಸೆ ಬೊಂಬಾಟ್ ಗುರು’ ಅಂತಾ ಟ್ವೀಟ್ ಮಾಡಿದ್ದಾರೆ.
92% of Twitter is correct! It tastes better with the hand. ✋
ಮಸಾಲೆ ದೋಸೆ | ಬೊಂಬಾಟ್ ಗುರು👌 | एकदम मस्त 🙌 https://t.co/fQJZ3bKfgW pic.twitter.com/xoBM2VEqxD
— Alex Ellis (@AlexWEllis) August 5, 2021
ಇದನ್ನೂ ಓದಿ: ಅನಾಥೆಯನ್ನು ಮಗಳಂತೆ ಸಾಕಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟ ಮುಸ್ಲಿಂ ವ್ಯಕ್ತಿ!
ಬುಧವಾರ ಎಲ್ಲಿಸ್ ಅವರು, ‘ದಕ್ಷಿಣ ಭಾರತೀಯರೇ ನಾಳೆ ನಾನು ದೋಸೆ ಹೇಗೆ ತಿನ್ನಬೇಕು’ ಎಂಬ ಪ್ರಶ್ನೆಯೊಂದಿಗೆ ಟ್ವಿಟರ್ ಪೋಲ್ ಮಾಡಿದ್ದರು. ಇದಕ್ಕೆ ಶೇ.92 ರಷ್ಟು ಜನರು ಮಸಾಲೆ ದೋಸೆಯನ್ನು ಕೈಯಿಂದ ತಿನ್ನಬೇಕೆಂದು ಕಾಮೆಂಟ್ ಮಾಡಿದ್ದರು. ಗುರುವಾರ ಮಸಾಲೆ ದೋಸೆ ತಿನ್ನಿತ್ತಿರುವ ವಿಡಿಯೋ ಹಂಚಿಕೊಂಡಿರುವ ಎಲ್ಲಿಸ್, ಶೇ.92ರಷ್ಟು ಟ್ವಿಟೀಗರು ಹೇಳಿದ್ದು ಸರಿ ಇದೆ. ಮಾಸಾಲೆ ದೋಸೆ(Masala Dosa)ಯನ್ನು ಕೈಯಿಂದಲೇ ತಿಂದರೆ ಬಲು ರುಚಿಯಾಗಿರುತ್ತದೆ. ‘ಮಸಾಲೆ ದೋಸೆ ಬೊಂಬಾಟ್ ಗುರು’ ಎಂದು ಕನ್ನಡದಲ್ಲಿ ಬರೆದು ಹಿಂದಿಯಲ್ಲಿ ‘ಏಕ್ ಧಂ ಮಸ್ತ್’ ಅಂತಾ ಕ್ಯಾಪ್ಶನ್ ನೀಡಿದ್ದಾರೆ.
ಇದನ್ನೂ ಓದಿ: Dearness Allowance Hike: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ನಮಸ್ಕಾರ ಮುಖ್ಯಮಂತ್ರಿ ಅವರೆ 🙏
Delighted to be 1st diplomat received by @BSBommai - much done, much more to do with the @CMofKarnataka on education, research, investment, sustainability, infrastructure and mobility, to harness talent of 🇬🇧 and 🇮🇳 pic.twitter.com/kdvjRDtw32
— Alex Ellis (@AlexWEllis) August 5, 2021
ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿಯಾಗಿರುವ ಫೋಟೋ ಶೇರ್ ಮಾಡಿಕೊಂಡಿರುವ ಎಲ್ಲಿಸ್, ‘ನಮಸ್ಕಾರ ಮುಖ್ಯಮಂತ್ರಿ ಅವರೆ’ ಅಂತಾ ಕನ್ನಡದಲ್ಲಿಯೇ ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ