ಬಿಎಸ್‍ವೈಗೆ ಐಟಿ, ಇಡಿ, ಸಿಬಿಐ ಬೆದರಿಕೆಯೊಡ್ಡಿ ರಾಜೀನಾಮೆ ಕೊಡಿಸಲಾಗಿದೆ: ಕಾಂಗ್ರೆಸ್ ಆರೋಪ

ಕಾಂಗ್ರೆಸ್ #BlackMailJanataParty ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Aug 8, 2021, 04:05 PM IST
  • ಬಿಎಸ್‍ವೈಗೆ ಬಿಜೆಪಿ ಹೈಕಮಾಂಡ್ ಐಟಿ, ಇಡಿ, ಸಿಬಿಐ ಮೂಲಕ ದಾಳಿ ನಡೆಸುವ ಬೆದರಿಕೆ ಹಾಕಿದೆ
  • ಪುತ್ರ ಬಿ.ವೈ.ವಿಜಯೇಂದ್ರರನ್ನು ಜೈಲಿಗೆ ಕಳಿಸುತ್ತೇವೆ ಎಂದೂ ಸಹ ಬೆದರಿಕೆ ಹಾಕಲಾಗಿದೆ
  • ಕಣ್ಣೀರಿಟ್ಟ ಬಿಎಸ್‍ವೈ ರಾಜ್ಯದಲ್ಲಿ ಬಿಜೆಪಿ ನಿರ್ನಾಮ ಮಾಡುವ ಬೆದರಿಕೆಯೊಡ್ಡಿ ಹೈಕಮಾಂಡ್‌ ಮಣಿಸಿದ್ದಾರೆ
ಬಿಎಸ್‍ವೈಗೆ ಐಟಿ, ಇಡಿ, ಸಿಬಿಐ ಬೆದರಿಕೆಯೊಡ್ಡಿ ರಾಜೀನಾಮೆ ಕೊಡಿಸಲಾಗಿದೆ: ಕಾಂಗ್ರೆಸ್ ಆರೋಪ title=
ಬಿಎಸ್‍ವೈ ರಾಜೀನಾಮೆಗೆ ಕಾರಣ ತಿಳಿಸಿದ ಕಾಂಗ್ರೆಸ್

ಬೆಂಗಳೂರು: ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಐಟಿ, ಇಡಿ, ಸಿಬಿಐಗಳ ಬೆದರಿಕೆಯೊಡ್ಡಿ ಬಿ.ಎಸ್.ಯಡಿಯೂರಪ್ಪ(BS Yediyurappa)ನವರ ರಾಜೀನಾಮೆ ಕೊಡಿಸಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. #BlackMailJanataParty ಎಂಬ ಹ್ಯಾಶ್ ಟ್ಯಾಗ್ ಬಳಸಿ ಭಾನುವಾರ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

‘ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa)ನವರಿಗೆ ಬಿಜೆಪಿ ಹೈಕಮಾಂಡ್ ಐಟಿ, ಇಡಿ, ಸಿಬಿಐ ಮೂಲಕ ದಾಳಿ ನಡೆಸುವ ಬೆದರಿಕೆ ಹಾಕಿದೆ. ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರರನ್ನು ಜೈಲಿಗೆ ಕಳಿಸುತ್ತೇವೆ ಎಂದೂ ಸಹ ಬೆದರಿಕೆ ಹಾಕಲಾಗಿದೆ. ಇದಕ್ಕೆ ಹೆದರಿದ ಬಿಎಸ್‍ವೈ ಬೇರೆ ವಿಧಿ ಇಲ್ಲದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ’ ಅಂತಾ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಎಲ್ಲರಿಗೂ ಅವರಿಷ್ಟದ ಖಾತೆ ನೀಡಲು ಸಾಧ್ಯವಿಲ್ಲ: ಬಸವರಾಜ್ ಬೊಮ್ಮಾಯಿ

‘ಕಣ್ಣೀರಿಟ್ಟ ಬಿ.ಎಸ್.ಯಡಿಯೂರಪ್ಪನವರೂ ಸಹ ರಾಜ್ಯದಲ್ಲಿ ಬಿಜೆಪಿ(BJP)ಯನ್ನು ನಿರ್ನಾಮ ಮಾಡುವ ಬೆದರಿಕೆಯೊಡ್ಡಿ ಹೈಕಮಾಂಡ್‌ನ್ನು ಮಣಿಸಿದ್ದಾರೆ ಎಂಬ ಸುದ್ದಿ ಇದೆ’ ಅಂತಾ ಕಾಂಗ್ರೆಸ್ ಟೀಕಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಬಿಎಸ್‍ವೈ ಹಿಂದೇಟು ಹಾಕಿದ್ದರು. ಲಿಂಗಾಯತ-ವೀರಶೈವ ಮಠಾಧೀಶರು, ನಾಯಕರು ಸೇರಿದಂತೆ ಅನೇಕರು ಬಿಎಸ್‍ವೈ ಬೆನ್ನಿಗೆ ನಿಂತಿದ್ದರು. ಲಿಂಗಾಯತ ನಾಯಕನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಪರಿಣಾಮ ನೆಟ್ಟಗಿರಲ್ಲವೆಂದು ಬಿಜೆಪಿ ಹೈಕಮಾಂಡ್(BJP Hicommand)ಗೆ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಅಂತಿಮವಾಗಿ ಬಿಎಸ್‍ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಾಯಿತು.

ಇದನ್ನೂ ಓದಿ: BIG NEWS: ನೂತನ ಸಚಿವರಿಗೆ ಖಾತೆ ಹಂಚಿಕೆ, ಯಾರ್ಯಾರಿಗೆ ಯಾವ ಖಾತೆ ಸಿಕ್ಕಿದೆ ಗೊತ್ತಾ..?

ತನ್ನ ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್(Congress), ಮಹಿಳೆಯರ ಸುರಕ್ಷತೆಯ ಬಗ್ಗೆ ಧ್ವನಿ ಎತ್ತಬೇಕಿದೆ ಎಂದು ಬಿಜೆಪಿಗೆ ಒತ್ತಾಯಿಸಿದೆ. ‘ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಸಿಂಹಪಾಲು ಬಿಜೆಪಿ ಆಡಳಿತದ ಉತ್ತರ ಪ್ರದೇಶದ್ದು. ಮಹಿಳೆಯರ ಸುರಕ್ಷತೆಯ ಬಗ್ಗೆ ಚಿಂತಿಸದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರಗಳು ಅತ್ಯಾಚಾರ ಆರೋಪಿಗಳ ಪರವಾಗಿ ನಿಲ್ಲುವಂತಹ ಕ್ರಮ ಕೈಗೊಂಡಿವೆ’ ಅಂತಾ ಆರೋಪಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News