ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಕೆಲ ದಿನಗಳ ಹಿಂದೆ ರವೀಶ್​ ನರೇಶ್​ ಎಂಬುವವರು ಮಾಡಿದ್ದ ಟ್ವೀಟ್(Tweet)​ಗೆ ಪ್ರತಿಕ್ರಿಯಿಸಿದ್ದ ತೆಲಂಗಾಣದ ಸಚಿವ ಕೆ.ಟಿ.ರಾಮರಾವ್  ಬೆಂಗಳೂರು ಬಿಟ್ಟು ಹೈದರಾಬಾದ್​​ಗೆ ಬನ್ನಿ ಎಂದು ಹೇಳಿಕೆ ನೀಡಿದ್ದರು.​ ಈ ಟ್ವೀಟ್‌ ಕಂಡ ಕರ್ನಾಟಕದ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ತಿರುಗೇಟು ನೀಡಿದ್ದರು. ಇದೀಗ ಬಿಜೆಪಿ ಕರ್ನಾಟಕ(BJP Karnataka) ಸಹ ಟ್ವೀಟ್‌ ಮೂಲಕ ತೆಲಂಗಾಣ ಸರ್ಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ರೋಬೋಟಿಕ್ಸ್ ಪಕ್ಷಿಗಳ ಕಲವರ- ಮಕ್ಕಳ ಪಾಲಿಗೆ ಭರ್ಜರಿ ಖುಷಿ


"ಕೆ.ಟಿ.ಆರ್ ಗಾರು (ಕೆ.ಟಿ.ಆರ್‌ ಅವರೇ) ನಮ್ಮ ಬೆಂಗಳೂರಿನೊಂದಿಗೆ ಸ್ಪರ್ಧೆ ಮಾಡುವುದನ್ನು ಬಿಟ್ಟು ಬಿಡಿ. ಕರಾಚಿ ಅಥವಾ ಲಾಹೋರ್‌ನೊಂದಿಗೆ ನೀವು ಸ್ಪರ್ಧಿಸಬಹುದು' ಎಂದು ಕರ್ನಾಟಕ ಬಿಜೆಪಿ ಟ್ವೀಟ್​​ ಮಾಡಿ ಟಾಂಗ್​ ಕೊಟ್ಟಿದೆ.


"ನಿಮ್ಮ ತುಷ್ಟೀಕರಣ ನೀತಿ ನಿಲ್ಲಿಸಿ ಮತ್ತು ಈ ಜಿಹಾದಿಗಳಿಗೆ ಕಾನೂನಿನ ನಿಜವಾದ ಶಕ್ತಿಯನ್ನು ತೋರಿಸಿ. ನೀವು ನಮ್ಮ ಸವಾಲನ್ನು ಸ್ವೀಕರಿಸುತ್ತೀರಾ" ಎಂದು ಟ್ವೀಟ್​ ಮೂಲಕ ತೆಲಂಗಾಣದ ಸಚಿವರಿಗೆ ಮರು ಸವಾಲು ಹಾಕಿದೆ.


ಇದನ್ನು ಓದಿ: Russia:ಸ್ನೇಹಪರವಲ್ಲದ ದೇಶಗಳ ನಾಗರಿಕರಿಗೆ ವೀಸಾ ನಿರ್ಬಂಧ: ಸುಗ್ರೀವಾಜ್ಞೆಗೆ ಸಹಿ ರಷ್ಯಾ ಅಧ್ಯಕ್ಷ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.