Karnataka Congress Controversial Tweet: ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಟ್ವೀಟ್ ಡಿಲೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್ ಘಟಕ

Karnataka Congress Controversial Tweet - ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾಗಿ ಟೀಕಿಸಿದ್ದ ಕರ್ನಾಟಕ ಕಾಂಗ್ರೆಸ್ (Karnataka Congress) ಘಟಕ ಅವರನ್ನು '#ಹೆಬ್ಬೆಟ್ಟುಗಿರಾಕಿಮೋದಿ' ಅಂದರೆ ಅನಕ್ಷರಸ್ಥ ಎಂದು ಹೇಳಿ ಟ್ವೀಟ್ ಮಾಡಿತ್ತು.  

Written by - Nitin Tabib | Last Updated : Oct 19, 2021, 01:52 PM IST
  • ಮೋದಿ ವಿರುದ್ಧದ ಅವಹೇಳನಕಾರಿ ಟ್ವೀಟ್ ಡಿಲೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್ ಘಟಕ.
  • ಅನುಭವವಿಲ್ಲದ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರ ಅನೈತಿಕ ಟ್ವೀಟ್ ಗೆ ವಿಷಾಧ ಎಂದ ಡಿಕೆಶಿ.
  • ನಾಗರೀಕ ಹಾಗೂ ಸಂಸದೀಯ ಭಾಷೆಯ ಮಾನದಂಡಗಳಿಗೆ ಇದರಿಂದ ಧಕ್ಕೆ ಎಂದ ಡಿಕೆಶಿ
Karnataka Congress Controversial Tweet: ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಟ್ವೀಟ್ ಡಿಲೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್ ಘಟಕ  title=
Karnataka Congress Controversial Tweet (File Photo)

ಬೆಂಗಳೂರು: Karnataka Congress Controversial Tweet - ಕರ್ನಾಟಕ ಕಾಂಗ್ರೆಸ್ ಘಟಕ (Karnataka Congress) ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧದ ಅವಹೇಳನಕಾರಿ ಟ್ವೀಟ್ ಅನ್ನು ಅಳಿಸಿ ಹಾಕಿದೆ. ಕಾಂಗ್ರೆಸ್ ಮಾಡಿದ್ದ ಈ ಟ್ವೀಟ್ ಗೆ (Controversial Tweet) ಭಾರಿ ಅಸಮಾಧಾನ ಭುಗಿಲೆದ್ದ ಕಾರಣ 'ಅನುಭವವಿಲ್ಲದ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ ಈ ಅನೈತಿಕ ಟ್ವೀಟ್ ಗೆ ಕಾರಣ' ಎಂದು ಹೇಳಿ ಪಕ್ಷ ಟ್ವೀಟ್ ಅನ್ನು ತೆಗೆದು ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ದಾಳಿ ನಡೆಸಿದ್ದ ಕರ್ನಾಟಕ ಕಾಂಗ್ರೆಸ್ ಘಟಕ ಪ್ರಧಾನಿ ಅವರನ್ನು '#ಹೆಬ್ಬೆಟ್ಟುಗಿರಾಕಿಮೋದಿ' ಅಂದರೆ ಅನಕ್ಷರಸ್ಥ ಎಂದು ಹೇಳಿ ಟ್ವೀಟ್ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.

ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದ್ದ ಕಾಂಗ್ರೆಸ್ ಪಕ್ಷ,  "ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ @narendramodi ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನಯನ್ನು ಮಾಡಿತ್ತು ಆದರೂ ಓದಲಿಲ್ಲ,  ಭಿಕ್ಷಾಟನೆಗೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ.  #ಹೆಬ್ಬೆಟ್ಟುಗಿರಾಕಿಮೋದಿ ಯಿಂದ ದೇಶ ನರಳುತ್ತಿದೆ" ಎಂದು ಹೇಳಿತ್ತು. 

ಭಾರಿ ವಿವಾದಕ್ಕೆ ಕಾರಣವಾಗಿದ್ದ ಈ ಟ್ವೀಟ್ ಅನ್ನು ಹಲವುರು ಪ್ರಧಾನಿ ಮೋದಿ ಅವರ ವಿರುದ್ಧ ವಯಕ್ತಿಕ ದಾಳಿ ಎಂಬಂತೆ ನೋಡಿದ್ದಾರೆ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ವಾಗ್ದಾಳಿ ನಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಬಿಜೆಪಿ ಘಟಕದ ವಕ್ತಾರೆ ಮಾಳವಿಕಾ ಅವಿನಾಶ್, "ಕೇವಲ ಕಾಂಗ್ರೆಸ್ ಮಾತ್ರ ಇಷ್ಟೊಂದು ಕೀಳಮಟ್ಟಕ್ಕೆ ಇಳಿಯಲು ಸಾಧ್ಯ' ಎಂದು ಹೇಳಿ ಕಾಮೆಂಟ್ ಪ್ರತಿಕ್ರಿಯೆಗೆ ಅರ್ಹವಾಗಿಲ್ಲ ಎಂದು ಹೇಳಿದ್ದರು.

ಇನ್ನೊಂದೆಡೆ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ್ದ ಕರ್ನಾಟಕ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ ಬಳಸಲಾಗಿರುವ ಭಾಷೆ ದುರದೃಷ್ಟಕರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಕುರಿತು ತನಿಖೆಯಾಗಬೇಕು ಎಂದಿದ್ದರು. ಇನ್ನೊಂದೆಡೆ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಲು ಅಥವಾ ಕ್ಷಮೆಯಾಚಿಸಲು ತಮ್ಮ ಬಳಿ ಯಾವುದೇ ಕಾರಣ ಇಲ್ಲ ಎಂದೂ ಕೂಡ ಅವರು ಹೇಳಿದ್ದರು.

ಆದರೆ ಇದೀಗ ಹಲವು ಗಂಟೆಗಳ ಬಳಿಕ ಕರ್ನಾಟಕ ಕಾಂಗ್ರೆಸ್ ಘಟಕ ಈ ವಿವಾದಾತ್ಮಕ ಟ್ವೀಟ್ ಅನ್ನು ಅಳಸಿ ಹಾಕಿದೆ. ಅಷ್ಟೇ ಅಲ್ಲ ಇದು 'ಅನುಭವ ವಿಲ್ಲದ ಸಾಮಾಜಿಕ ಮಾಧ್ಯಮ ನಿರ್ವಾಹಕರಿಂದ ಮಾಡಲ್ಪಟ್ಟ ಅನೈತಿಕ ಟ್ವೀಟ್' ಆಗಿದೆ ಎಂದು ಹೇಳಿ ವಿಷಾಧ ವ್ಯಕ್ತಪಡಿಸಿದೆ.

ಇದನ್ನೂ ಓದಿ-ಚುನಾವಣೆ, ಉಪಚುನಾವಣೆ ಬಂದಾಗಲೆಲ್ಲ ವರಸೆ ಬದಲಾಯಿಸುವ ಸಿದ್ದರಾಮಯ್ಯ: ಬಿಜೆಪಿ

ಈ ವಿವಾದಾತ್ಮಕ ಟ್ವೀಟ್ ಅನ್ನು ಹಿಂಪಡೆದ ಬಳಿಕ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಘಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ (DK Shivakumar) 'ನಾಗರೀಕ ಹಾಗೂ ಸಂಸದೀಯ ಭಾಷೆಯ ಮಾನದಂಡಗಳಿಗೆ' ಇದು ಚ್ಯುತಿ ತರುತ್ತದೆ ಎಂದು ಒಪ್ಪಿಕೊಂಡಿದ್ದಾರೆ. 

'ನಾಗರಿಕ ಹಾಗೂ ಸಂಸದೀಯ ಭಾಷೆಯು ರಾಜಕೀಯ ಮಾತುಕತೆಗೆ ಇರಬೇಕಾದ ಪೂರ್ವ ಅವಶ್ಯಕತೆ ಎಂದು ನಾನು ನಂಬುತ್ತೇನೆ. ಅನುಭವವಿಲ್ಲದ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು ಕರ್ನಾಟಕ ಕಾಂಗ್ರೆಸ್ ಘಟಕದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಡಿದ್ದ ಅನೈತಿಕ ಟ್ವೀಟ್ ವಿಷಾಧನೀಯ ಮತ್ತು ಅದನ್ನು ಹಿಂಪಡೆಯಲಾಗಿದೆ' ಎಂದು ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ-ರೈತರು ಹಾಗೂ ದೇಶದ ಹಿತಾಭಿವೃದ್ಧಿಗೆ ಪರಿಣಾಮಕಾರಿ ಕೊಡುಗೆ ನೀಡುವಂತಾಗಬೇಕು-ಡಾ.ಹರೀಶ ಹಂದೆ

ಅಕ್ಟೋಬರ್ 30 ರಂದು ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ನಡೆಯುವ ಹಿನ್ನೆಲೆ ಈ  ವಿವಾದಾತ್ಮಕ ಟ್ವೀಟ್ ಬಂದಿದೆ. ಅಕ್ಟೋಬರ್ 30 ರಂದು ಕರ್ನಾಟಕದ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.

ಹಿರಿಯ ಜನತಾದಳ (ಜಾತ್ಯತೀತ) ನಾಯಕ ಎಂ ಸಿ ಮನಗುಳಿ ಮತ್ತು ಬಿಜೆಪಿಯ ಸಿ ಎಂ ಉದಾಸಿ ಸಾವಿನ ನಂತರ ಈ ಸ್ಥಾನಗಳು ಖಾಲಿ ಉಳಿದಿದ್ದವು. ಬಿಎಸ್ ಯಡಿಯೂರಪ್ಪ ನಂತರ ಮುಖ್ಯಮಂತ್ರಿಯಾಗಿ ನೇಮಕಗೊಂಡ ಬಸವರಾಜ ಬೊಮ್ಮಾಯಿ ಅವರಿಗೆ ಉಪಚುನಾವಣೆ ಅಗ್ನಿಪರೀಕ್ಷೆಯಾಗಿದೆ. 

ಇದನ್ನೂ ಓದಿ-ನೈತಿಕ ಪೊಲೀಸ್‌ಗಿರಿ ಸಮರ್ಥನೆ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News