ಬಿಜೆಪಿ ಆಡಳಿತದಲ್ಲಿ ಸಾವು ಖಚಿತ, ಶವಸಂಸ್ಕಾರ ಉಚಿತ!: ಕಾಂಗ್ರೆಸ್ ವ್ಯಂಗ್ಯ
`5 ಕೆಜಿ ಅಷ್ಟೇ ತಿನ್ನಿ ಎನ್ನುವ ಮೂಲಕ ಜನರ ಹಸಿವನ್ನು ಅಣಕಿಸುವ ಬಿಜೆಪಿ ಸರ್ಕಾರ ಜನರಿಗೆ ‘ಸಾವಿನಭಾಗ್ಯ ಕೊಡಲು ಮುಂದಾಗಿದೆ’
ಬೆಂಗಳೂರು: ಬಿಜೆಪಿ ಆಡಳಿತ(BJP Govt.)ದಲ್ಲಿ ಸಾವು ಖಚಿತ, ಶವಸಂಸ್ಕಾರ ಉಚಿತವೆಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಶವ ಸಂಸ್ಕಾರದ ಭರವಸೆ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ಟ್ವೀಟ್ ಮೂಲಕ ಕಾಂಗ್ರೆಸ್ ಖಂಡಿಸಿದೆ.
‘ದುಬಾರಿ ತೆರಿಗೆ, ನಿರುದ್ಯೋಗ, ಆರ್ಥಿಕ ಕುಸಿತ, ಬೆಲೆ ಏರಿಕೆಯಂತಹ ತನ್ನ ದುರಾಡಳಿತದಲ್ಲಿ ಜನರು ಬದುಕಲಾರರು ಎಂದು ಬಿಜೆಪಿ(BJP) ಪಕ್ಷಕ್ಕೂ ಖಾತ್ರಿಯಾಗಿದೆ! ಹಾಗಾಗಿಯೇ ಬೆಳಗಾವಿ ಪಾಲಿಕೆ ಚುನಾವಣೆಯ ಪ್ರಣಾಳಿಕೆಯಲ್ಲಿ ಉಚಿತ ಶವ ಸಂಸ್ಕಾರದ ಭರವಸೆ ನೀಡಿದೆ’ ಅಂತಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: CM Basavaraj Bommai : ಸೆ.5 ರಂದು ರಾಜ್ಯ ಸರ್ಕಾರದ 'ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ' ಯೋಜನೆಗೆ ಚಾಲನೆ
BJP Govt.) ಜನರಿಗೆ ‘ಸಾವಿನಭಾಗ್ಯ ಕೊಡಲು ಮುಂದಾಗಿದೆ’ ಎಂದು #ಸಾಯಿಸುವಸರ್ಕಾರ ಹ್ಯಾಶ್ ಟ್ಯಾಗ್ ಬಳಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಕಾಂಗ್ರೆಸ್(Congress) ಜನರ ಬದುಕನ್ನು ಹಸನಾಗಿಸಲು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ನೀಡಿತು. ಬಿಜೆಪಿ ಭರವಸೆಯ ಬದುಕು ನೀಡಲಾಗದೆ ಉಚಿತ ಸಾವಿನ ಭಾಗ್ಯ ನೀಡುತ್ತಿದೆ! ಉದ್ಯೋಗ, ಅಕ್ಕಿ ನೀಡಲಾಗದೆ, ಬೆಲೆ ಏರಿಕೆ ತಡೆಯದೆ, ವೈದ್ಯಕೀಯ ವ್ಯವಸ್ಥೆ ನಿರ್ಮಿಸದೆ, ರಕ್ಷಣೆ ನೀಡದೆ ಜನತೆಗೆ ಸಾವು ಒಂದೇ ದಾರಿ ಎನ್ನುತ್ತಿದೆ ರಾಜ್ಯ ಬಿಜೆಪಿ ಸರ್ಕಾರ’ ಎಂದು ಕಾಂಗ್ರೆಸ್ ಕುಟುಕಿದೆ.
ಇದನ್ನೂ ಓದಿ: ಕೊರೊನಾ 3ನೇ ಅಲೆಗೆ ‘ಕೇರಳದ ಯಶಸ್ವಿ ಮಾದರಿ’ ಕಾರಣ: ಸಿಟಿ ರವಿ ಟೀಕೆ
Belagavi City Corporation Election)ಯ ಕಾವು ಜೋರಾಗಿದೆ. ಸೆಪ್ಟೆಂಬರ್ 3ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗೆ ಮಾಡಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭರ್ಜರಿ ಭರವಸೆಗಳ ಜೊತೆಗೆ ಕೆಲವೊಂದು ಅಂಶಗಳು ಮತದಾರ ಪ್ರಭು ಹುಬ್ಬೇರುವಂತೆ ಮಾಡಿವೆ. ಈ ಪೈಕಿ ‘ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಶವಸಂಸ್ಕಾರಕ್ಕೆ ಉಚಿತ(Free Cremation) ವ್ಯವಸ್ಥೆಗೆ ಕ್ರಮ’ ಎನ್ನುವ ಬಿಜೆಪಿ ಭರವಸೆ ಕೇಳಿ ಇಲ್ಲಿನ ಜನರು ಗಾಬರಿಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ