ಕೊರೊನಾ 3ನೇ ಅಲೆಗೆ ‘ಕೇರಳದ ಯಶಸ್ವಿ ಮಾದರಿ’ ಕಾರಣ: ಸಿಟಿ ರವಿ ಟೀಕೆ

ಕೇರಳ ರಾಜ್ಯ ಒಂದರಲ್ಲಿಯೇ 31,445 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 215 ಮಂದಿ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ.

Written by - Puttaraj K Alur | Last Updated : Aug 26, 2021, 12:50 PM IST
  • ದೇಶದಲ್ಲಿ ಕೊರೊನಾ 3ನೇ ಅಲೆ ಬರಲು ‘ಕೇರಳದ ಯಶಸ್ವಿ ಮಾದರಿ’ ಕಾರಣವೆಂದ ಸಿಟಿ ರವಿ
  • ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸಂಖ್ಯೆಗೆ ಕೇರಳದ ಕೊಡುಗೆ ಹೆಚ್ಚಿದೆ ಎಂದು ಆರೋಪ
  • ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 31,445 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ
ಕೊರೊನಾ 3ನೇ ಅಲೆಗೆ ‘ಕೇರಳದ ಯಶಸ್ವಿ ಮಾದರಿ’ ಕಾರಣ: ಸಿಟಿ ರವಿ ಟೀಕೆ  title=
ಕೇರಳ ಮಾದರಿ ಟೀಕಿಸಿದ ಸಿಟಿ ರವಿ (Photo Courtesy: @Zee News)

ಬೆಂಗಳೂರು: ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ 3ನೇ ಅಲೆ ಬರಲು ಕೇರಳದ ಯಶಸ್ವಿ ಮಾದರಿ(Successful Kerala Model) ಕಾರಣವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಟೀಕಿಸಿದ್ದಾರೆ.

ಗುರುವಾರ ಟ್ವೀಟ್ ಮಾಡಿರುವ ಅವರು, ಯಶಸ್ವಿ ‘ಕೇರಳ ಮಾದರಿ’ಯ ಬಗ್ಗೆ ವ್ಯಂಗ್ಯವಾಡಿದ್ದಾರೆ.  ತಮ್ಮ ಟ್ವಿಟರ್ ಖಾತೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಫೋಟೋ ಹಂಚಿಕೊಂಡಿರುವ ಸಿಟಿ ರವಿ, ‘ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 31,445 ಹೊಸ ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಭಾರತದಲ್ಲಿ ಕೊರೊನಾ 3ನೇ ಅಲೆ(Corona 3rd Wave) ಬರಲು ಯಶಸ್ವಿ ಕೇರಳ ಮಾದರಿಯೇ ಕಾರಣವಾಗಲಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಒಳಜಗಳ: ಮೈಸೂರು ಪಾಲಿಕೆಯಲ್ಲಿ ಮೊದಲ ಬಾರಿ ಅರಳಿದ ‘ಕಮಲ’   

ಕೇರಳದಲ್ಲಿ ಕೊರೊನಾ ರಣಕೇಕೆ..!

ಕೊರೊನಾ 3ನೇ ಅಲೆ(Corona 3rd Wave) ಹಾಗೂ ಡೆಲ್ಟಾ ರೂಪಾಂತರಿ ವೈರಸ್ ನ ಭೀತಿ ಎದುರಾಗಿರುವಾಗಲೇ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 46,164 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ದೇಶದಾದ್ಯಂತ 607 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,33,725ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಈ ಪೈಕಿ ಕೇರಳ ರಾಜ್ಯ ಒಂದರಲ್ಲಿಯೇ 31,445 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 215 ಮಂದಿ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ. ಇದು ದೇಶದ ದೈನಂದಿನ ಕೋವಿಡ್ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ದೇಶದಲ್ಲಿ ಕೋವಿಡ್-19(COVID-19) ಸೋಂಕಿತರ ಸಂಖ್ಯೆ 3,25,58,530ಕ್ಕೆ ಏರಿಕೆಯಾಗಿದ್ದು, ಒಟ್ಟು 4,36,365 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 80,40,407 ಡೋಸ್ ಕೊರೊನಾ ಲಸಿಕೆ ನೀಡಲಾಗಿದ್ದು, ಇದುವರೆಗೆ ದೇಶದಲ್ಲಿ 60,38,46,475 ಡೋಸ್ ಲಸಿಕೆ ವಿತರಿಸಲಾಗಿದೆ.

ಇದನ್ನೂ ಓದಿ: ಬಡಮಕ್ಕಳ ಪಾಲಿನ ಸ್ವೆಟರ್‌, ಮೊಟ್ಟೆ ಎಲ್ಲವನ್ನೂ ತಿನ್ನುತ್ತಿದ್ದಾರೆ: ಕಾಂಗ್ರೆಸ್ ಆರೋಪ 

ಇನ್ನು ದೇಶದಲ್ಲಿ ಕೊರೊನಾ ವೈರಸ್(CoronaVirus) 3ನೇ ಅಲೆ ಯಾವಾಗ ವಕ್ಕರಿಸುತ್ತದೋ ಅಂತಾ ಜನಸಾಮಾನ್ಯರು ಭೀತಿಯಲ್ಲಿದ್ದಾರೆ. ತಜ್ಞರು ಕೂಡ ಕೊರೊನಾ 3ನೇ ಅಲೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ವೈರಸ್ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News