ಬೆಂಗಳೂರು : ಕೇವಲ ಶಾಲೆಗಳಲ್ಲೂ ಮಾತ್ರವಲ್ಲ ಬೇರೆ ಕಡೆಯಲ್ಲೂ "ಬುರ್ಖಾ ಬ್ಯಾನ್" ಬಗ್ಗೆ ಚರ್ಚೆ ನಡೆಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಬುರ್ಖಾ ಬ್ಯಾನ್ ವಿವಾದ ಸೃಷ್ಟಿಸಿದ ಸಿಟಿ ರವಿ:


ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ಮುನ್ನ ಮಾತನ್ನಾಡಿದ ಸಿಟಿ ರವಿ(CT Ravi), ಭದ್ರತೆಯ ದೃಷ್ಟಿಯಿಂದ 11 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬುರಕ ಬ್ಯಾನ್ ಮಾಡಿದ್ದಾರೆ.


ಇದನ್ನೂ ಓದಿ : ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ಮಾರ್ಚ್ ನಲ್ಲಿ ತರಬೇತಿ ಶಿಬಿರ


ನಾನು ಬುರ್ಖಾ ನಿಷೇಧ(Burkha Ban) ಬಗ್ಗೆ ಹೇಳ್ತಿಲ್ಲ.. ಈ ವಿಷಯ ಚರ್ಚೆ ಆಗಬೇಕು, ಸರ್ಕಾರ ಸಂವಿಧಾನದ ಪ್ರಕಾರ ಆಡಳಿತ ನಡೆಸಬೇಕು.. ಅಥವಾ ಖುರಾನ್ ಪ್ರಕಾರ ನಡೆಸಬೇಕಾ? ಇದನ್ನ ಇಸ್ಲಾಮಿನ ಧರ್ಮದ ಗುರುಗಳು ಹೇಳಿಲಿ ಎಂದು ಪ್ರಶ್ನಿಸಿದರು.


ಶಾಲೆಗಳಲ್ಲಿ ಸಮವಸ್ತ್ರದ ಬಗ್ಗೆ ಬುದ್ದಿ ಜೀವಿಗಳು ಮಾತನಾಡಲಿ, ಶಾಲೆಗಳಲ್ಲಿ ಸಮವಸ್ತ್ರ ಇರಬೇಕು ಬೇಡವೋ ಎಂಬ ಸ್ಪಷ್ಟ ನಿಲುವನ್ನು ಬುದ್ದಿ ಜೀವಿಗಳು ಹೇಳಲ್ಲಿ.


ಅಂಬೇಡ್ಕರ್ ಬುರ್ಕಾ, ಹಿಜಾಬ್(Hijab) ಬಗ್ಗೆ ಹೇಳಿದ್ದಾರೆ, ಅಂಬೇಡ್ಕರ್ ಹೇಳಿಕೆಗಳ ಬಗ್ಗೆ ಬುದ್ಧಿಜೀವಿಗಳು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.


ಬುರ್ಕಾ(Burkha) ಒಂದು ಮಾನಸಿಕ ಗುಲಾಮಿತನ ಹೇರುವ ಪ್ರವೃತ್ತಿ ಅಂತ ಅಂಬೇಡ್ಕರ್ ಹೇಳಿದ್ದಾರೆ,ಸಮವಸ್ತ್ರ ಶಾಲೆಯಲ್ಲಿ ಇರ್ಬೇಕೇ ಬೇಡವೇ ಅಂತ ಅಷ್ಟೇ ಇಲ್ಲಿ ಪ್ರಶ್ನೆ.ಭದ್ರತೆ ದೃಷ್ಟಿಕೋನದಿಂದ ಇದನ್ನು ನೋಡಲಿಹಿಜಾಬ್, ಬುರ್ಕಾ ದುರ್ಬಳಕೆ ಮಾಡ್ಕೊಂಡು ಯಾರೋ ಒಬ್ಬ ಬಾಂಬ್ ಹಾಕಿದ್ರೆ ಏನ್ ಮಾಡ್ಬೇಕು?ಇದನ್ನು ಪತ್ತೆ ಹಚ್ಚೋದು ಹೇಗೆ?ಕಳ್ಳತನ ಮಾಡಿದ್ರೆ ಪತ್ತೆ ಹಚ್ವೋದು ಹೇಗೆ? ಎಂದರು.


ಶಿವಮೊಗ್ಗ(shivamogga)ದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ನಡೆದಿದೆ.ಕೊಲೆಗೂ ಮುನ್ನ ನಾನು ಏನೂ ಹೇಳಲ್ಲ,ಕೊಲೆಗೆ ಕಾರಣ ಗೊತ್ತಾಗಲಿ.ತನೆಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿ ಎಂದರು.ಇನ್ನು ಗೃಹ ಸಚಿವರ ಕರ್ತವ್ಯ ವಿಫಲ ಕಾಂಗ್ರೆಸ್ ಅವ್ರ ಆರೋಪ ಸಿಟಿ ರವಿ ಪ್ರತಿಕ್ರಿಯೆ ನೀಡಿ,ಯಾರು ವಿಫಲರು ಯಾರು ವಿಫಲರಲ್ಲವೊ ಸದ್ಯದಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.


ಇದನ್ನೂ ಓದಿ : ಭೂಕಬಳಿಕೆ ಆರೋಪ: ಜಮೀರ್ ಅಹಮದ್ ವಿರುದ್ಧ ದಾಖಲಾಯ್ತು ಎಫ್ಐಆರ್


ಇಸ್ಲಾಂ ಹೆಣ್ಣುಮಕ್ಕಳಿಕೆ ಶಿಕ್ಷಣ ಕಲಿಯಲು ಅವಕಾಶ ನೀಡಿಲ್ಲ:


ನಂತರ ಮಾತನ್ನಾಡಿದ ಇವರು, ಹೆಣ್ಣು ಮಕ್ಕಳಿಗೆ ಇಸ್ಲಾಮಿ(Islamic) ನಲ್ಲಿ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಇದ್ಯಾಹೆಣ್ಣುಮಕ್ಕಳಿಗೆ ಶಿಕ್ಷಣ ಅವಕಾಶ ಇದ್ರೆ ಯಾವ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಇದೆ?ಅಧುನಿಕ ಶಿಕ್ಷಣ ಪಡೆಯಲಿಕ್ಕೆ ಅವಕಾಶ ಇದ್ಯಾ?ಇಸ್ಲಾಮಿನಲ್ಲಿ ಹೆಣ್ಣಿಗೂ ಗಂಡಿನ ಅಷ್ಟೇ ಸಮಾನ ಹಕ್ಕು ಇದ್ಯಿ..?ನನ್ನ ತಿಳಿವಳಿಕೆ ಪ್ರಕರ ಇಸ್ಲಾಮಿ ನಲ್ಲಿ ಶಿಕ್ಷಣದಲ್ಲಿ ಅವಕಾಶ ಇಲ್ಲ ಎಂದರು.


ಪಾಕಿಸ್ತಾನದಲ್ಲಿ ವಿದ್ಯಾರ್ಥಿಗಳಿಗೆ ಗುಂಡು ಹಾರಿಸಿದ್ದು ಇದೇ ಕಾರಣಕ್ಕೆ. ಅವ್ರಿಗೆ ಕಲಿಯುವ ಹಕ್ಕುಇಲ್ಲ, ನಾನು ಈ ವಿಷಯದಲ್ಲಿ ಅಜ್ಞಾನಿ ಇದಕ್ಕೆ ಸಂಬಂಧ ಪಟ್ಟವರು ಆಧಾರ ಸಹಿತವಾಗಿ ತಿಳಿ ಹೇಳಲ್ಲಿ ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.