ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಶಾಸಕರಿಗೆ ವಿದೇಶ ಪ್ರವಾಸ ಭಾಗ್ಯ ನೀಡಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಸುಳಿವು ನೀಡಿದ್ದಾರೆ. ಇದೇ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು" ಎಂಬ ವರಸೆಯನ್ನು #ATMSarkara ತೋರುತ್ತಿದೆ. ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ, ಶಾಲಾ ಮಕ್ಕಳ ಬಿಸಿಯೂಟಕ್ಕೆ ಸರಿಯಾಗಿ ತರಕಾರಿಗಳನ್ನು ಪೂರೈಸುತ್ತಿಲ್ಲ, ಅಭಿವೃದ್ಧಿಗೆ ಬೊಕ್ಕಸದಲ್ಲಿ ಹಣವಿಲ್ಲ ಎಂದು ಉಪ ಮುಖ್ಯಮಂತ್ರಿಗಳೇ ಸ್ಪಷ್ಟೀಕರಣ ನೀಡಿದ್ದಾರೆ. ರಾಜ್ಯ ಇಷ್ಟೆಲ್ಲಾ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ, ಯಾವ ಪುರುಷಾರ್ಥಕ್ಕೆ ಜನರ ತೆರಿಗೆ ಹಣದಲ್ಲಿ ಶಾಸಕರನ್ನು ವಿದೇಶಕ್ಕೆ ಕಳಿಸುತ್ತಿದ್ದೀರಿ..?’ ಎಂದು ಬಿಜೆಪಿ ಪ್ರಶ್ನಿಸಿದೆ.


ಅನ್ನದಾತರ ಕೈಹಿಡಿದ ಕಪ್ಪು ಬಂಗಾರ.. ಕಾಳುಮೆಣಸಿಗೆ ಡಿಮ್ಯಾಂಡಪ್ಪೋ..ಡಿಮ್ಯಾಂಡ್‌..!


‘ರಾಜ್ಯದ ಭವಿಷ್ಯವನ್ನು ಅಡಮಾನ ಇಟ್ಟು ಕಾಂಗ್ರೆಸ್ ನೀಡಿದ ಅವೈಜ್ಞಾನಿಕ ಯೋಜನೆಗಳಿಂದ ಇಂದು ಕರ್ನಾಟಕದಾದ್ಯಂತ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಅನುಭವಿಸಬೇಕಾಗಿ ಬಂದಿದೆ. ಅಂಗನವಾಡಿ ಮಕ್ಕಳಿಗೆ ತರಕಾರಿಗೂ ದುಡ್ಡು ಕೊಡದ #ATMSarkara ಅಧಿಕಾರಕ್ಕೆ ಬಂದ ಮೇಲೆ ಕಟ್ಟಡಗಳ ಬಾಡಿಗೆಯೇ ನೀಡಿಲ್ಲ. ಅಲ್ಲದೆ ಮಾತೃವಂದನೆ ಕಾರ್ಯಕ್ರಮದಡಿ ಬಾಣಂತಿಯರಿಗೆ ಸಿಗಬೇಕಾದ ₹5,000 ನೀಡಲು ಸಿಎಂ ಸಿದ್ದರಾಮಯ್ಯನವರ ಅಸಮರ್ಥ ಸರ್ಕಾರ ಹೆಣಗಾಡುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.


ಬಿಜೆಪಿ ಕುಟುಕಿದೆ.


ಇದನ್ನೂ ಓದಿ: ಸೋಲಿನಿಂದ ಎಚ್.ಡಿ.ಕುಮಾರಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ಕಾಣುತ್ತಿದೆ: ಸಿದ್ದರಾಮಯ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.