ಕೆಲವೇ ದಿನಗಳಲ್ಲಿ ರದ್ದಾಗಲಿದೆ ಇಂತವರ ರೇಷನ್ ಕಾರ್ಡ್, ಸರ್ಕಾರದಿಂದ ಬಂತು ಹೊಸ ರೂಲ್ಸ್

Rationcard New Update : ಕಾಂಗ್ರೆಸ್‌ ತನ್ನ ಐದು ಗ್ಯಾರಂಟಿಗಳನ್ನು ಪರಿಚಯಿಸಿದೆ. ಆ ಎಲ್ಲ ಯೋಜನೆಗಳಿಗೂ ರೇಷನ್‌ ಕಾರ್ಡ್‌ ಮುಖ್ಯವಾಗಿದೆ. ಸದ್ಯ ರೇಷನ್‌ ಕಾರ್ಡ್‌ ಕುರಿತಾಗಿ ಹೊಸ ಅಪ್ಡೇಟ್‌ ಒಂದು ಹೊರಬಿದ್ದಿದೆ. ಏನದು ಅಂತೀರಾ..? ಮುಂದೆ ಓದಿ...  

Written by - Savita M B | Last Updated : Aug 8, 2023, 06:46 PM IST
  • ಬಿಪಿಎಲ್‌ ಕಾರ್ಡ್‌ ಪಡೆಯಲು ಜನ ಹಂಬಲಿಸುತ್ತಿದ್ದಾರೆ.
  • ಸರ್ಕಾರದ ಯೋಜನೆಗಳ ಲಾಭ ಪಡೆಯಲು ಲಕ್ಷಾಂತರ ಜನರು ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
  • ಇದೀಗ ಬಿಪಿಎಲ್‌ ಕಾರ್ಡ್‌ ಹೊಂದಿರುವ ಅನೇಕ ಕುಟುಂಬಗಳಿಗೆ ಸರ್ಕಾರ ಬಿಗ್‌ ಶಾಕ್‌ ನೀಡಿದೆ
ಕೆಲವೇ ದಿನಗಳಲ್ಲಿ ರದ್ದಾಗಲಿದೆ ಇಂತವರ ರೇಷನ್ ಕಾರ್ಡ್, ಸರ್ಕಾರದಿಂದ ಬಂತು ಹೊಸ ರೂಲ್ಸ್  title=

Rationcard : ರಾಜ್ಯಸರ್ಕಾರ ಬಿಪಿಎಲ್‌ ಪಡಿತರ ಚೀಟಿಯನ್ನು ಹೊಂದಿರುವವರಿಗೆ ವಿಶೇಷ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಬಿಪಿಎಲ್‌ ಕಾರ್ಡ್‌ ಪಡೆಯಲು ಜನ ಹಂಬಲಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಲಕ್ಷಾಂತರ ಜನರು ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. 

ಬಡ ಜನರಿಗಾಗಿ ಸರ್ಕಾರ ಉಚಿತ ಪಡಿತರನ್ನು ನೀಡುತ್ತಿದೆ. ಆದರೆ ಕೆಲವರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್‌ ಕಾರ್ಡ್‌ ಪಡೆಯುತ್ತಿದ್ದಾರೆ. ಸರ್ಕಾರದ ಸಕಲ ಲಾಭಕ್ಕಾಗಿ ಬಿಪಿಎಲ್‌ ಕಾರ್ಡ್‌ ಅರ್ಜಿ ಸಲ್ಲಿಕೆಗಳು ಹೆಚ್ಚುತ್ತಿವೆ. 

ಇದನ್ನೂ ಓದಿ- ನಾಲಿಗೆ ಹರಿಬಿಟ್ಟ ಕಲಬುರಗಿ BJP ಜಿಲ್ಲಾಧ್ಯಕ್ಷ

ಇನ್ನು ರಾಜದಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳಿಗೆ ರೇಷನ್‌ ಕಾರ್ಡ್‌ ಮುಖ್ಯವಾಗಿದೆ. ಇದೀಗ ಸರ್ಕಾರ ಬಿಪಿಎಲ್‌ ಕಾರ್ಡ್‌ ಅನರ್ಹರಿಗೆ ಸಿಗಬಾರದೆನ್ನುವ ಕಾರಣಕ್ಕೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನುಮುಂದೆ ಇಂತವರ ಬಿಪಿಎಲ್‌ ಕಾರ್ಡ್‌ ರದ್ದಾಗಲಿದೆ.

ಇದೀಗ ಬಿಪಿಎಲ್‌ ಕಾರ್ಡ್‌ ಹೊಂದಿರುವ ಅನೇಕ ಕುಟುಂಬಗಳಿಗೆ ಸರ್ಕಾರ ಬಿಗ್‌ ಶಾಕ್‌ ನೀಡಿದ್ದು, ಸ್ವಂತ ಕಾರ್‌ ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್‌ ರದ್ದಾಗುವ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ ಎಚ್‌ ಮುನಿಯಪ್ಪ ಘೋಷಿಸಿದ್ದಾರೆ. 

ಹೊಸ ಬಿಪಿಎಲ್‌ ಕಾರ್ಡ್‌ ನೀಡುವುದಿಲ್ಲ ಜೊತೆಗೆ ಇರುವ ಬಿಪಿಎಲ್‌ ಕಾರ್ಡನ್ನು ರದ್ದು ಮಾಡುವ ಕುರಿತಾಗಿ ತಿಳಿಸಲಾಗಿದೆ. ಇನ್ನು ವೈಟ್‌ ಬೋರ್ಡ್‌ ಕಾರನ್ನು ಹೊಂದಿರುವವರ ಕಾರ್ಡನ್ನು ರದ್ದು ಮಾಡಲಾಗುವುದಿಲ್ಲ. ಸ್ವಂತ ಕಾರನ್ನು ಹೊಂದಿರುವವರ ಬಿಪಿಎಲ್‌ ಕಾರ್ಡ್‌ ರದ್ದಾಗಲಿದೆ ಎಂದು ಮಾಹಿತಿ ನೀಡಲಾಗಿದೆ. 

ಇದನ್ನೂ ಓದಿ- ಕೃಷಿ ಸಚಿವರ ವಿರುದ್ಧ ಅಧಿಕಾರಿಗಳ ದೂರು ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News