"ಸಂಚಾರಯುಕ್ತ ಬೆಂಗಳೂರು" ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ

Sancharayukta Bangalore : ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ "ಸಂಚಾರಯುಕ್ತ ಬೆಂಗಳೂರು” ವಿಷಯಕ್ಕೆ ಸಂಬಂಧಿಸಿದಂತೆ ಬಂದಿರುವ 10479 ಸಲಹೆಗಳನ್ನು ಅಧ್ಯಯನ ನಡೆಸಿ ಒಂದೇ ರೀತಿಯ ಸಲಹೆಗಳನ್ನು ತೆಗೆದ ಬಳಿಕ ಒಟ್ಟಾರೆ 8412 ಸಲಹೆಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿ ಅದನ್ನೆಲ್ಲಾ ಕ್ರೋಢೀಕರಿಸಿ ವರದಿಯನ್ನು ಸಿದ್ದಪಡಿಸಲಾಗುತ್ತದೆ.

Written by - Savita M B | Last Updated : Aug 8, 2023, 07:18 PM IST
  • ಮೊಬಿಲಿಟಿ" ವಿಷಯಕ್ಕೆ ಸಾರ್ವಜನಿಕರಿಂದ ಬಂದ ಸಲಹೆ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವರದಿಯನ್ನು ತಯಾರಿಸಲಾಗುತ್ತದೆ.
  • ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿ ತರುವುದು.
  • ರಸ್ತೆ ಸಂಪರ್ಕ ಸರಿಯಾಗಿರುವಂತೆ ಮಾಸ್ಟರ್ ಪ್ಲಾನ್ ಮಾಡಬೇಕು.
"ಸಂಚಾರಯುಕ್ತ ಬೆಂಗಳೂರು" ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ title=

ಬೆಂಗಳೂರು : ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ "ಸಂಚಾರಯುಕ್ತ/ಸಾರಿಗೆ ಬೆಂಗಳೂರು/ಮೊಬಿಲಿಟಿ" ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಾರ್ವಜನಿಕರಿಂದ ಬಂದ ಸಲಹೆ ಅಭಿಪ್ರಾಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ವೀಕ್ಷಿಸಲಾಯಿತು. 

ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಸುಸ್ಥಿರತೆಯ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪಾಲುದಾರಿಕೆಯಲ್ಲಿ "ಸಂಚಾರಯುಕ್ತ/ಸಾರಿಗೆ ಬೆಂಗಳೂರು/ಮೊಬಿಲಿಟಿ" ವಿಷಯಕ್ಕೆ ಸಾರ್ವಜನಿಕರಿಂದ ಬಂದ ಸಲಹೆ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವರದಿಯನ್ನು ತಯಾರಿಸಲಾಗುತ್ತದೆ.

ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಧಾನ ಅಭಿಯಂತರರಾದ ಬಿ.ಎಸ್. ಪ್ರಹ್ಲಾದ್ ಮಾತನಾಡಿ, ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಷಯಗಳಲ್ಲಿ ನಾಗರಿಕರಿಂದ ಬಂದಿರುವ ಸಲಹೆಗಳನ್ನು ಬೇರ್ಪಡಿಸಿ ಪಾಲುದಾರಿಕೆಯ ಶೈಕ್ಷಣಿಕ ಸಂಸ್ಥೆಯಿಂದ ಕ್ರೋಢೀಕರಿಸಿ ವರದಿಯನ್ನು ತಯಾರಿಸಲಾಗುತ್ತದೆ. ಈ ಸಂಬಂಧ ಸಂಚಾರಯುಕ್ತರ ಬೆಂಗಳೂರು ವಿಷಯವಾಗಿಯೂ ಸಾಕಷ್ಟು ಸಲಹೆಗಳು ಬಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು. 

ಇದನ್ನೂ ಓದಿ-ನಾಲಿಗೆ ಹರಿಬಿಟ್ಟ ಕಲಬುರಗಿ BJP ಜಿಲ್ಲಾಧ್ಯಕ್ಷ

ಟ್ರಾಫಿಕ್ ಇಂಡೆಕ್ಸ್ 2022ರ ಶ್ರೇಯಾಂಕ ಪ್ರಕಾರ ಬೆಂಗಳೂರನ್ನು ವಿಶ್ವದ ಎರಡನೇ ಅತಿ ಹೆಚ್ಚು ದಟ್ಟಣೆಯ ನಗರ ಎಂದು ಪರಿಗಣಿಸಿದ್ದು, 1985 ರಲ್ಲಿ ಕೇವಲ 1.7 ಲಕ್ಷ ಇದ್ದ ವಾಹನ ಸಂಖ್ಯೆಯು 2022ರ ಅಂತ್ಯದ ವೇಳೆಗೆ 1.09 ಕೋಟಿಗೆ ತಲುಪಿದೆ. 2022ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತದಿಂದಾಗಿ 247 ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದೆಲವನ್ನೂ ನಾವು ತಡೆಯಬೇಕಿದೆ ಎಂದು ಹೇಳಿದರು.

ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ, ಜಂಕ್ಷನ್‌ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವುದು, ಪಾದಚಾರಿಗಳಿಗೆ ವಿಶಿಷ್ಟವಾದ ಒತ್ತು ನೀಡುವುದು ನಾಗರಿಕ ಕರ್ತವ್ಯ ಮಾತ್ರವಲ್ಲದೆ ಮೂಲಭೂತ ಮಾನವ ಹಕ್ಕು ಕೂಡ ಆಗಿದೆ. ಈ ನಿಟ್ಟಿನಲ್ಲಿ ಪಾದಚಾರಿ ಮಾರ್ಗಗಳನ್ನು ಮರು ವಿನ್ಯಾಸಗೊಳಿಸಿ ಸುರಕ್ಷಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.

ಸಂಚಾರಯುಕ್ತ ಬೆಂಗಳೂರಿಗೆ ವಿಚಾರ ಸಂಕಿರಣದಲ್ಲಿ ಬಂದಂತಹ ಸಲಹೆಗಳು:

• ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸೆ ಕಲ್ಪಿಸುವುದು.

• ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿ ತರುವುದು.
 
• ರಸ್ತೆ ಸಂಪರ್ಕ ಸರಿಯಾಗಿರುವಂತೆ ಮಾಸ್ಟರ್ ಪ್ಲಾನ್ ಮಾಡಬೇಕು.

• ನಗರದ ರಸ್ತೆಗಳಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ಮಾಡುವುದನ್ನು ತಡೆಯುವುದು.

• ನಗರದಾದ್ಯಂತ ನಾಗರಿಕರ ಅನುಕೂಲಕ್ಕಾಗಿ ಸೈನೇಜ್ ಗಳನ್ನು ಅಳವಡಿಸಬೇಕು.

• ನಗರದಾದ್ಯಂತ ಪಾದಚಾರಿ ಮಾರ್ಗಗಳಲ್ಲಿ ಪ್ರತ್ಯೆಕವಾಗಿ ಸೈಕಲ್ ಲೈನ್ ಗಳನ್ನು ನಿರ್ಮಿಸುವುದು.

• ಟನಲ್ ರಸ್ತೆಗಳನ್ನು ನಿರ್ಮಿಸುವುದು.

• ಮುಂದಿನ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀಲನಕ್ಷೆ ರಚಿಸಿ ಅದನ್ನು ಕಾರ್ಯರೂಪಕ್ಕೆ ತರುವುದು.

• ನಗರದಲ್ಲಿ ಮೆಟ್ರೋ ಮಾರ್ಗವನ್ನು ಹೆಚ್ಚಿಸುವ ಜೊತೆಗೆ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವುದು.

• ನಾಗರಿಕರು ಸ್ವಂತ ವಾಹನಗಳನ್ನು ಬಳಸುವ ಬದಲು ಸಾರ್ವಜನಿಕ ಸಾರಿಗೆಗಳನ್ನು ಬಳಸುವುದು.

• ಸಮಗ್ರ ಮೊಬಿಲಿಟಿ ಯೋಜನೆ ಜಾರಿಗೊಳಿಸುವುದು.

• ನಗರದಲ್ಲಿರುವ ರಸ್ತೆ ಜಾಲ, ಜಂಕ್ಷನ್ಸ್ ಗಳು, ತಿರುವು ರಸ್ತೆ, ರಸ್ತೆ ಹುಬ್ಬುಗಳು, ಯು-ಟರ್ನ್, ರಸ್ತೆ ಮಧ್ಯಭಾಗ ಡಿವೈಡರ್ ಅಳವಡಿಕೆ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯಗಳ ಜೊತೆಗೆ ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದು.

• ರಸ್ತೆಬದಿಗಳಲ್ಲಿ ನಿರ್ಮಿಸಿರುವ ಚರಂಡಿಗಳು/ಕಾಲುವೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.

• ಇಡೀ ಬೆಂಗಳೂರನ್ನು ನಡೆಯಲು ಅರ್ಹವಾದ ನಗರವನ್ನಾಗಿ ಬದಲಾಯಿಸಬೇಕು ಹಾಗೂ ಪಾದಚಾರಿ ವಿನ್ಯಾಸಗಳನ್ನು ಒಂದೇ ಮಾದರಿಯಲ್ಲಿ ಮಾಡುವುದು.

• ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು, ಪಾರ್ಕಿಂಗ್ ಮಾಡದಂತೆ ಕ್ರಮವಹಿಸುವುದು.

ಈ ವೇಳೆ ನಗರ ಭೂ ಸಾರಿಗೆ ನಿರ್ದೇಶನಾಲಯ(DULT)ದ ಐಟಿ ಮುಖ್ಯಸ್ಥರಾದ ಶಮಂತ್, ಟಿಇಸಿ ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ಬಾಲಾಜಿ, ಮೆಟ್ರೊ, ಬಿಎಂಟಿಸಿ ಅಧಿಕಾರಿಗಳು, ಕಾಲೇಜು ಮುಖ್ಯಸ್ಥರು. ಎಂ.ಎಸ್ ರಾಮಯ್ಯ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ತಜ್ಞರು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ-ಕೃಷಿ ಸಚಿವರ ವಿರುದ್ಧ ಅಧಿಕಾರಿಗಳ ದೂರು ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News