ಬೆಂಗಳೂರು: ಐಸಿಸ್‌ ಉಗ್ರ ಸಂಘಟನೆಯ ನೇಮಕಾತಿಗೆ ಕಾಂಗ್ರೆಸ್ ಹೊರಗುತ್ತಿಗೆ ಪಡೆದಂತಿದೆ ಎಂದು ಬಿಜೆಪಿ ಆರೋಪಿಸಿದೆ. #CommunalCongress ಹ್ಯಾಶ್‍ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಉಗ್ರರಿಗೆ ಸೇರಿದ ಕಟ್ಟಡದಲ್ಲೇ ಪಕ್ಷದ ಕಚೇರಿ ತೆರೆಯುವಷ್ಟು ನಿಕಟವಾಗಿದೆ ಇವರ ಸಂಬಂಧ. ಭಯೋತ್ಪಾದನೆಗೆ ಈ ಮೂಲಕ 'ಫಂಡ್‌' ಮಾಡುವ ಕರಾರು ಜಗತ್ತಿಗೆ ಇಂದು ಗೊತ್ತಾಗಿದೆ’ ಎಂದು ಟೀಕಿಸಿದೆ.


COMMERCIAL BREAK
SCROLL TO CONTINUE READING

ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಉಗ್ರ ಶಾರಿಕ್‌ಗೂ ‘ಕೈ’ ಪಕ್ಷಕ್ಕೂ ಹತ್ತಿರದ ನಂಟಿರುವುದು ಮತ್ತೊಮ್ಮೆ ಸಾಬೀತಾಗಿದೆ. ಶಾರಿಕ್ ಅಜ್ಜನಿಗೆ ಸೇರಿದ ಕಟ್ಟಡದಲ್ಲಿಯೇ ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿ ಇದೆ. ಕಿಮ್ಮನೆ ರತ್ನಾಕರ್‌ ಸಂಬಂಧಿ ಹೆಸರಲ್ಲೇ ಒಪ್ಪಂದವೂ ಆಗಿದೆ. ಉಗ್ರರ ಜೊತೆಗಿನ ನಂಟಿಗೆ ಇದಕ್ಕಿಂತ ಸಾಕ್ಷಿ ಬೇಕೇ?’ ಎಂದು ಬಿಜೆಪಿ ಪ್ರಶ್ನಿಸಿದೆ.


ಮೆಟ್ರೋ ಪಿಲ್ಲರ್ ದುರಂತ: ನಿರ್ಮಾಣ ಕಂಪನಿ ಸೇರಿ BMRCLನ 8 ಜನರ ವಿರುದ್ಧ FIR!


‘ಬಾಂಬ್ ಸ್ಫೋಟದ ಬಗ್ಗೆ ಲೇವಡಿ ಮಾಡುತ್ತಾ ಶಾರಿಕ್‌ ಪರ ವಕಾಲತ್ತು ವಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂದು ಪತ್ರಿಕಾಗೋಷ್ಠಿ ನಡೆಸಿದ್ದು ಯಾಕೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರತ್ನಾಕರ್‌ ಮನೆ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ ದಾಳಿ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷರು ನೀಡಲಿರುವ  ಹೇಳಿಕೆಯನ್ನು ಊಹಿಸುವುದು ಕಷ್ಟವೇನಲ್ಲ. ಮತಾಂಧ ಟಿಪ್ಪು ಸುಲ್ತಾನನನ್ನು ಆರಾಧಿಸುವ ಮೂಲಕ ಉಗ್ರ ವರ್ಗವನ್ನು ಓಲೈಸುವುದು ಹೇಗೆ ಅಂತ ಮೊದಲು ತೋರಿಸಿಕೊಟ್ಟವರೇ ಸಿದ್ದರಾಮಯ್ಯ. ಹಿರಿಯಣ್ಣನ ಚಾಳಿ ಮನೆ ಮಂದಿಗೆ ಬರದಿರುವುದೇ? ಅವರಿಗಿಂತ ನಾನೇನು ಕಮ್ಮಿಯಿಲ್ಲವೆಂದು ತೋರಿಸಿಕೊಳ್ಳಲು ಡಿಕೆಶಿ ಶಾರಿಕ್ ಪರ ಬ್ಯಾಟ್ ಬೀಸಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.


ಕಾಂಗ್ರೆಸ್‌ ನಾಯಕರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.


"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ".!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.