ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆಯನ್ನು ಇನ್ನೂ ಬಿಟ್ಟಿಲ್ಲ: ಬಿಜೆಪಿ
ಹೋದ ಕಡೆಯಲ್ಲೆಲ್ಲಾ ಚಹಾ ಕುಡಿಸಿ `ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ` ಎಂದು ಜೈಕಾರ ಹಾಕಿಸುತ್ತಿದ್ದ ಸಿದ್ದರಾಮಯ್ಯ ಈಗ ಮತ್ತೊಂದು ತಂತ್ರ ಪ್ರಯೋಗಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಇದೇ ನನ್ನ ಕೊನೆಯ ಚುನಾವಣೆ ಎಂದು ಹತ್ತಾರು ವರ್ಷಗಳಿಂದ ಹೇಳಿಕೊಂಡೇ ಬಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆ ಇನ್ನೂ ಬಿಟ್ಟಿಲ್ಲವೆಂದು ಬಿಜೆಪಿ ಟೀಕಿಸಿದೆ. #ಅಸಹಾಯಕಡಿಕೆಶಿ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಶನಿವಾರ ಸರಣಿ ಟ್ವೀಟ್ ಮಾಡಿದೆ.
‘ಹೋದ ಕಡೆಯಲ್ಲೆಲ್ಲಾ ಚಹಾ ಕುಡಿಸಿ "ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ" ಎಂದು ಜೈಕಾರ ಹಾಕಿಸುತ್ತಿದ್ದ ಸಿದ್ದರಾಮಯ್ಯ ಈಗ ಮತ್ತೊಂದು ತಂತ್ರ ಪ್ರಯೋಗಿಸಿದ್ದಾರೆ. ಮುಂದಿನ ಸಿಎಂ ಎಂದು ಈಗಲೇ ಘೋಷಿಸುವಂತೆ ಸಿದ್ದರಾಮಯ್ಯ ಬಣ ಕೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ, ಹಾಗಾದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೆಕ್ಕಕ್ಕಿಲ್ಲವೇ?’ ಎಂದು ವ್ಯಂಗ್ಯವಾಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ‘ಸೀಡ್ಲೆಸ್ ಕಡಲೆಬೀಜ’ದಂತಾಗಿದೆ!: ಕಾಂಗ್ರೆಸ್
‘ಇದೇ ನನ್ನ ಕೊನೆಯ ಚುನಾವಣೆ ಎಂದು ಹತ್ತಾರು ವರ್ಷಗಳಿಂದ ಹೇಳಿಕೊಂಡೇ ಬಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆ ಇನ್ನೂ ಬಿಟ್ಟಿಲ್ಲ. ಡಿಕೆಶಿ ಆಸೆಗೆ ಈಗಿಂದೀಗಲೇ ತಣ್ಣೀರೆರಚುವ ಕೆಲಸ ಸಿದ್ದರಾಮಯ್ಯ ಬಣದಿಂದ ನಡೆಯುತ್ತಿದೆ. ಕಾಂಗ್ರೆಸ್ ಲಾಟರಿ ಎತ್ತಿ ಸಿಎಂ ಅಭ್ಯರ್ಥಿಯನ್ನು ಅಂತಿಮಗೊಳಿಸುವಿರಾ?’ ಅಂತಾ ಪ್ರಶ್ನಿಸಿದೆ.
ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ..!
ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷರನ್ನು ಗಣನೆಗೆ ತೆಗೆದುಕೊಳ್ಳದೆ ತಾನೇ ಮುಂದಿನ ಸಿಎಂ ಎಂದು ಪಕ್ಷದೊಳಗೆ ಪ್ರಭಾವಿಯಾಗುತ್ತಿದ್ದಾರೆ. ಡಿಕೆಶಿ ಲೆಕ್ಕಕ್ಕಿಲ್ಲವೇ?’ ಎಂದು ಟೀಕಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.