ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ‘ಸೀಡ್ಲೆಸ್ ಕಡಲೆಬೀಜ’ದಂತಾಗಿದೆ!: ಕಾಂಗ್ರೆಸ್

ನಮ್ಮಲ್ಲಿ ವಂಶರಾಜಕಾರಣವೇ ಇಲ್ಲ ಎನ್ನುವ ಹಸಿಸುಳ್ಳನ್ನು ಹೇಳುವ ಬಿಜೆಪಿಯೇ ಕುಟುಂಬ ರಾಜಕಾರಣದ 'ಮಹಾಪೋಷಕ'ವಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Written by - Zee Kannada News Desk | Last Updated : May 14, 2022, 07:58 PM IST
  • ಗೃಹಸಚಿವರಿಗೆ ಜನರ ರಕ್ಷಣೆಗಿಂತ #PSIScam ಆರೋಪಿಗಳ ರಕ್ಷಣೆಯೇ ಮುಖ್ಯವಾಗಿದೆ
  • ವಿಜಯೇಂದ್ರರಿಗೆ ಮಂತ್ರಿಗಿರಿ & ಪರಿಷತ್ ಸದಸ್ಯ ಸ್ಥಾನ ನೀಡುತ್ತಿರುವುದು ಕುಟುಂಬ ರಾಜಕಾರಣವಲ್ಲವೇ?
  • ಬಾಯಲ್ಲಿ ವೇದ, ಮಂತ್ರ, ಹೊಟ್ಟೆಯಲ್ಲಿ ಚಿಕನ್ ಬಿರಿಯಾನಿ ಬಿಜೆಪಿಯ ವರಸೆಯಾಗಿದೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ‘ಸೀಡ್ಲೆಸ್ ಕಡಲೆಬೀಜ’ದಂತಾಗಿದೆ!: ಕಾಂಗ್ರೆಸ್ title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಸೀಡ್‌ಲೆಸ್ ಕಡಲೆಬೀಜ’ದಂತಾಗಿದೆ! ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಬಾಗಲಕೋಟೆಯಲ್ಲಿ ವಕೀಲೆ ಮೇಲೆ ಹಾಡಹಗಲೇ ಸಾರ್ವಜನಿಕರ ಎದುರು ಹಲ್ಲೆ ನಡೆದಿರುವ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಗೃಹಸಚಿವರ ತವರೂರಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ, ಬಾಗಲಕೋಟೆಯಲ್ಲಿ ಹಾಡಹಗಲೇ ಸಾರ್ವಜನಿಕವಾಗಿ ಮಹಿಳಾ ವಕೀಲೆಯನ್ನು ಅಮಾನುಷವಾಗಿ ಥಳಿಸಲಾಗಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ‘ಸೀಡ್‌ಲೆಸ್ ಕಡಲೆಬೀಜದಂತಾಗಿದೆ! ‘ನಾನೀಗ ಎಕ್ಸ್‌ಪರ್ಟ್’ ಎನ್ನುವ ಗೃಹಸಚಿವರಿಗೆ ಜನರ ರಕ್ಷಣೆಗಿಂತ #PSIScam ಆರೋಪಿಗಳ ರಕ್ಷಣೆಯೇ ಮುಖ್ಯವಾಗಿದೆ’ ಎಂದು ಕುಟುಕಿದೆ.

ಇದನ್ನೂ ಓದಿ: ಯುವತಿ ಮೇಲೆ ಆಸಿಡ್‌ ದಾಳಿ ಮಾಡಿದ ನಾಗೇಶ್‌ ಬಾಯಿಬಿಟ್ಟ ಸ್ಪೋಟಕ ಸತ್ಯ

 ‘ಬಿ.ವೈ.ವಿಜಯೇಂದ್ರರಿಗೆ ಮಂತ್ರಿಗಿರಿ ಹಾಗೂ ಪರಿಷತ್ ಸದಸ್ಯ ಸ್ಥಾನ ನೀಡಲು ಮುಂದಾಗಿರುವ ಬಿಜೆಪಿ ಉತ್ತರಿಸಲಿ.ಇದು ಕುಟುಂಬ ರಾಜಕಾರಣ ಅಲ್ಲವೇ? ವಿಜಯೇಂದ್ರರಿಗೆ ಸಿಗುತ್ತಿರುವ ಈ ಮನ್ನಣೆ BSY ಪುತ್ರ ಎನ್ನುವ ಒಂದೇ ಕಾರಣಕ್ಕೆ ಅಲ್ಲವೇ?. 'ವಂಶವಾದ'ವನ್ನು ಪ್ರಭಲವಾಗಿ ಪ್ರತಿಪಾದಿಸುತ್ತಿರುವುದು ಬಿಜೆಪಿಯೇ ಅಲ್ಲವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಾಯಲ್ಲಿ ವೇದ, ಮಂತ್ರ, ಹೊಟ್ಟೆಯಲ್ಲಿ ಚಿಕನ್ ಬಿರಿಯಾನಿ. ಇದು ಬಿಜೆಪಿಯ ವರಸೆ. ನಮ್ಮಲ್ಲಿ ವಂಶರಾಜಕಾರಣವೇ ಇಲ್ಲ ಎನ್ನುವ ಹಸಿಸುಳ್ಳನ್ನು ಹೇಳುವ ಬಿಜೆಪಿಯೇ ಕುಟುಂಬ ರಾಜಕಾರಣದ 'ಮಹಾಪೋಷಕ'ವಾಗಿದೆ. ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿಗೆ ವಿರೋಧ ಇದೆ ಎಂದಾದರೆ ವಿಜಯೇಂದ್ರರಿಗೆ ಮಣೆ ಹಾಕುತ್ತಿರುವುದೇಕೆ? ಉತ್ತರಿಸುವ ನೈತಿಕತೆ ಇದೆಯೇ?’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News