‘ಬಿಜೆಪಿಗೆ ಸುಮಲತಾ ಬರಲಿ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ ಇದ್ದೀವಿ’

ಯಾರನ್ನು ಪಕ್ಷಕ್ಕೆ ಸ್ವಾಗತಿಸಬೇಕು ಅನ್ನೋದನ್ನು ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡ್ತಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

Last Updated : May 14, 2022, 05:48 PM IST
  • ಬಿಜೆಪಿಗೆ ಸುಮಲತಾ ಬರಲಿ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ ಇದ್ದೀವಿ
  • ಪಕ್ಷವು ಬಲಿಷ್ಠವಾಗಿದ್ದಾಗ ಎಲ್ಲರೂ ಬರುವುದಕ್ಕೆ ಪ್ರಯತ್ನ ಮಾಡುತ್ತಾರೆ
  • ಮಂಡ್ಯ ಹಾಗೂ ರಾಜ್ಯದಲ್ಲಿ ಬಿಜೆಪಿ ಭದ್ರವಾಗಿದೆ ಎಂದ ಸಚಿವ ಕೆ.ಸಿ.ನಾರಾಯಣಗೌಡ
‘ಬಿಜೆಪಿಗೆ ಸುಮಲತಾ ಬರಲಿ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ ಇದ್ದೀವಿ’ title=
'ಮಂಡ್ಯ ಹಾಗೂ ರಾಜ್ಯದಲ್ಲಿ ಬಿಜೆಪಿ ಭದ್ರವಾಗಿದೆ'

ಮಂಡ್ಯ: ಬಿಜೆಪಿಗೆ ಸುಮಲತಾ ಬರಲಿ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ ಇದ್ದೀವಿ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಾತನಾಡಿರುವ ಅವರು, ‘ಪಕ್ಷವು ಬಲಿಷ್ಠವಾಗಿದ್ದಾಗ ಎಲ್ಲರೂ ಬರುವುದಕ್ಕೆ ಪ್ರಯತ್ನ ಮಾಡುತ್ತಾರೆ’ ಎಂದು ಹೇಳಿದ್ದಾರೆ.

‘ನಮ್ಮ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿ ಇದ್ದೇವೆ. ರಮ್ಯಾ ಬಿಜೆಪಿ ಸಂಪರ್ಕದಲ್ಲಿ ಇದ್ದಾರೊ, ಇಲ್ವೊ ಎಂದು ಬಿಡಿಸಿ ಹೇಳಲು ಸಾಧ್ಯವಿಲ್ಲ. ಪಕ್ಷದಲ್ಲಿ  ಏನೇನು ನಡೆಯತ್ತೆ ಅದನ್ನು ಹೇಳೋಕೆ ಆಗಲ್ಲ’ ಎಂದರು.

ಇದನ್ನೂ ಓದಿ: ಮದುವೆಯಲ್ಲಿ ಕುಮಾರಸ್ವಾಮಿಗೆ ಮತ ಹಾಕುವಂತೆ ವಧು-ವರರಿಂದ ಮನವಿ!

‘ನಮ್ಮ ಪಕ್ಷ ಮಂಡ್ಯದಲ್ಲಿ ಹಾಗೂ ರಾಜ್ಯದಲ್ಲಿ ಭದ್ರವಾಗಿದೆ. ಪಕ್ಷ ಸ್ಟ್ರಾಂಗ್ ಇದ್ದಾಗ ಪಕ್ಷಕ್ಕೆ ಬೇರೆಯವರು ಬರುವುದು ಸಹಜ. ಅವರು ಪಕ್ಷ ಸೇರ್ಪಡೆ ವಿಚಾರವಾಗಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಯಾರನ್ನು ಪಕ್ಷಕ್ಕೆ ಸ್ವಾಗತಿಸಬೇಕು ಅನ್ನೋದನ್ನು ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡ್ತಾರೆ’ ಎಂದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ 140 ರಿಂದ 150 ಸ್ಥಾನ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಈಗಾಗಲೇ ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸಿಎಂ ಬಸವರಾಜ್ ಬೊಮ್ಮಾಯಿಯವರ ನೇತೃತ್ವದಲ್ಲಿಯೇ ನಾವು ಚುನಾವಣೆ ಎದುರಿಸಲಿದ್ದೇವೆ. ನಮ್ಮದೇ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ: ಅಕ್ರಮ ಲ್ಯಾಪ್‌ಟ್ಯಾಪ್ ಖರೀದಿ ಸಿದ್ದರಾಮಯ್ಯ ಸರ್ಕಾರದ ಕೂಸು: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News