ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬುಧವಾರ ಸರಣಿ ಟ್ವೀಟ್ ಮಾಡುವ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ. #ಚಡ್ಡಿರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ, ನೀವು ಗಾಜಿನ ಮನೆಯಲ್ಲಿ‌ ನಿಂತು ಇನ್ನೊಬ್ಬರತ್ತ ಕಲ್ಲು ಎಸೆಯುವುದು ಎಷ್ಟು ಸರಿ?  1998ರಿಂದ ಇಲ್ಲಿಯವರೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಥಿತಿ ಹೇಗಿದೆ ಎಂದು ನೋಡಿದ್ದೀರಾ? ಅದನ್ನು ನೋಡಿಯೂ ಕಾಂಗ್ರೆಸ್‌ ಪಕ್ಷ ಒಬ್ಬರ ಸ್ವತ್ತಾ ಎಂದು ಪ್ರಶ್ನಿಸಿಲ್ಲವೇಕೆ?’ ಎಂದು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

‘ಸಂಘದ ಪದಾಧಿಕಾರಿಗಳ ಸ್ಥಾನದಲ್ಲಿ ಒಂದೇ ಜಾತಿಯವರು ಇದ್ದಾರೆ ಎಂದು ವೃಥಾರೋಪ ಮಾಡುವ ಸಿದ್ದರಾಮಯ್ಯನವರೇ ಎಐಸಿಸಿ ಅಧ್ಯಕ್ಷ ಸ್ಥಾನ ಯಾವ ಜಾತಿಯವರಿಗೆಲ್ಲಾ ನೀಡಿದ್ದೀರಿ? ‘ಅವ್ವ-ಮಗʼ ನ ಜಾತಿಯವರಿಗೋ? ಕಾಂಗ್ರೆಸ್‌ ಪಕ್ಷಕ್ಕೆ ಅಷ್ಟೊಂದು ಬದ್ಧತೆ ಇದ್ದರೆ ಎಐಸಿಸಿ ಅಧ್ಯಕ್ಷ ಸ್ಥಾನ ದಲಿತರಿಗೆ ಬಿಟ್ಟು ಕೊಡಬಹುದಿತ್ತಲ್ಲವೇ?’ ಎಂದು ತಿರುಗೇಟು ನೀಡಿದೆ.


ಸಿಲಿಕಾನ್‌ಸಿಟಿಯಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ.. 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಕೇಸ್‌ ದಾಖಲು


‘ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಹೊರತಾಗಿ ಅಧ್ಯಕ್ಷರು ನೇಮಕವಾಗಲಿ ಎಂಬ ವಾದ ಮುಂಚೂಣಿಗೆ ಬಂದಾಗ ಸಿದ್ದರಾಮಯ್ಯ ಮಾಡಿದ್ದೇನು? ಗಾಂಧಿ ಕುಟುಂಬ ಹೊರತುಪಡಿಸಿ ಅನ್ಯರಿಗೆ ಪಕ್ಷ ಮುನ್ನಡೆಸಲು ಸಾಧ್ಯವಿಲ್ಲ ಎಂದು ನೀವು ಪತ್ರ ಬರೆದಿದ್ದೇಕೆ? ಆಗ ಸಿದ್ದರಾಮಯ್ಯ ಅವರಿಗೇಕೆ ದಲಿತ ನಾಯಕರ ಹೆಸರು ನೆನಪಾಗಲಿಲ್ಲ?’ ಎಂದು ಬಿಜೆಪಿ ಕುಟುಕಿದೆ.


ಸಿದ್ದರಾಮಯ್ಯನವರೇ, ರಾಷ್ಟ್ರದ ಕತೆ ಬಿಡಿ, ರಾಜ್ಯದಲ್ಲಿ ನೀವು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು? ದಲಿತ ಮುಖ್ಯಮಂತ್ರಿ ವಾದ ಮುನ್ನೆಲೆಗೆ ಬಂದಾಗ ಅಧಿಕಾರ ತ್ಯಾಗದ ಬದಲು ನಾನೇ ದಲಿತ ಎಂದು ಸಬೂಬು ನೀಡಿರಲಿಲ್ಲವೇ ? ಇದೆಂತ ಅನುಕೂಲಸಿಂಧು ರಾಜಕಾರಣ ನಿಮ್ಮದು!!?’ ಎಂದು ಬಿಜೆಪಿ ಪ್ರಶ್ನಿಸಿದೆ.


ಇದನ್ನೂ ಓದಿ: ಮೈಸೂರಲ್ಲಿ ಮರ್ಯಾದಾ ಹತ್ಯೆ: ಅನ್ಯ ಜಾತಿಯವನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.