ಸಿಲಿಕಾನ್‌ಸಿಟಿಯಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ.. 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಕೇಸ್‌ ದಾಖಲು

Cyber crime: ರಾಜ್ಯದಲ್ಲೆಡೆ ದಿನಕ್ಕೆ ಹತ್ತಾರು ಸೈಬರ್‌ ವಂಚನೆಯ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಸಿಲಿಕಾನ್‌ ಸಿಟಿಯಲ್ಲಂತೂ ಸೈಬರ್‌ ಕ್ರೈಂ ಪ್ರಕರಣಗಳ ಹೆಚ್ಚುತ್ತಲೇ ಹೋಗುತ್ತಿದೆ. ಕಳೆದ 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಸೈಬರ್ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. 

Written by - VISHWANATH HARIHARA | Edited by - Chetana Devarmani | Last Updated : Jun 8, 2022, 12:16 PM IST
  • ರಾಜ್ಯದಲ್ಲೆಡೆ ದಿನಕ್ಕೆ ಹತ್ತಾರು ಸೈಬರ್‌ ವಂಚನೆಯ ಪ್ರಕರಣಗಳು ದಾಖಲಾಗುತ್ತಿವೆ
  • ಸಿಲಿಕಾನ್‌ ಸಿಟಿಯಲ್ಲಂತೂ ಸೈಬರ್‌ ಕ್ರೈಂ ಪ್ರಕರಣಗಳ ಹೆಚ್ಚುತ್ತಲೇ ಹೋಗುತ್ತಿದೆ
  • ಕಳೆದ 150 ದಿನಗಳಲ್ಲಿ 3500 ಕ್ಕೂ ಹೆಚ್ಚು ಸೈಬರ್ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ
ಸಿಲಿಕಾನ್‌ಸಿಟಿಯಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ.. 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಕೇಸ್‌ ದಾಖಲು  title=
ಸೈಬರ್‌ ಕ್ರೈಂ

ಬೆಂಗಳೂರು: ಆಧುನಿಕ ಯುಗದಲ್ಲಿ ಮೊಬೈಲ್‌ ಬಳಸುವವರ ಸಂಖ್ಯೆ ಹೆಚ್ಚು. ದಿನಗಳದಂತೆ ಎಲ್ಲವೂ ಬೆರಳ ತುದಿಯಲ್ಲಿಯೇ ಲಭ್ಯವಾಗುತ್ತಿದೆ. ತಂತ್ರಜ್ಞಾನದ ಬೆಳವಣಿಗೆ ಸಮಾಜಕ್ಕೆ ಎಷ್ಟು ಪೂರಕವೋ ಅಷ್ಟೇ ಮಾರಕವಾಗಿದೆ. ಸದ್ಯ ಎಲ್ಲವೂ ಆನ್‌ಲೈನ್‌ಮಯವಾಗಿ ಹೋಗಿದೆ. ಆನ್‌ಲೈನ್‌ ಪೇಮೆಂಟ್‌, ಆನ್‌ಲೈನ್‌ ಆರ್ಡರ್‌ ಹೀಗೆ ಎಲ್ಲವನ್ನೂ ಕುಳಿತ ಜಾಗದಲ್ಲಿಯೇ ಮಾಡಬಹುದಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವು ಖದೀಮರು ಜನಸಾಮಾನ್ಯರನ್ನು ದೋಚುತ್ತಿದ್ದಾರೆ. ಸೈಬರ್‌ ವಂಚನೆಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಪ್ರಯೋಜನವಾಗುತ್ತಿಲ್ಲ.

ಇದನ್ನೂ ಓದಿ:  ಇಸ್ಲಾಂ & ಕ್ರೈಸ್ತ ಧರ್ಮದ ವೈಭವೀಕರಣವೇ ಶಿಕ್ಷಣ ವಿರೋಧಿ ಕಾಂಗ್ರೆಸ್​ನ ಸಾಧನೆ: ಬಿಜೆಪಿ

ರಾಜ್ಯದಲ್ಲೆಡೆ ದಿನಕ್ಕೆ ಹತ್ತಾರು ಸೈಬರ್‌ ವಂಚನೆಯ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಸಿಲಿಕಾನ್‌ ಸಿಟಿಯಲ್ಲಂತೂ ಸೈಬರ್‌ ಕ್ರೈಂ ಪ್ರಕರಣಗಳ ಹೆಚ್ಚುತ್ತಲೇ ಹೋಗುತ್ತಿದೆ. ಕಳೆದ 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಸೈಬರ್ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ದಿನವೊಂದಕ್ಕೆ ಸುಮಾರು 26 ಪ್ರಕರಣಗಳು ಬೆಳಕಿಗೆ ಬರುತ್ತಿವೆ. 

ಕಳೆದ ಐದು ತಿಂಗಳಲ್ಲಿ ನಗರದಲ್ಲಿರುವ 9 ಸೈಬರ್ ಕ್ರೈಂ, ಸಿಇಎನ್ ಪೊಲೀಸ್ ಠಾಣೆಗಳಲ್ಲಿ 3500ಕ್ಕಿಂತ ಹೆಚ್ಚು ಕೇಸ್ ದಾಖಲಾಗಿವೆ. ಖದೀಮರು ತಂತ್ರಜ್ಞಾನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ದರೋಡೆ ಮಾಡುತ್ತಿದ್ದಾರೆ. 

150 ದಿನಗಳಲ್ಲಿ‌ 200 ಕೋಟಿ ಎಗರಿಸಿದ ಆನ್‌ಲೈನ್ ಖದೀಮರು: 

150 ದಿನಗಳಲ್ಲಿ‌ ಆನ್‌ಲೈನ್ ಖದೀಮರು 200 ಕೋಟಿ ಎಗರಿಸಿದ್ದಾರೆ. ಇದು ಬೆಂಗಳೂರಿನ ಜನರನ್ನು ಬೆಚ್ಚಿ ಬೀಳಿಸಿದೆ. ಇಷ್ಟು ಕೇಸ್ ದಾಖಲಾದ್ರೂ ಶೇ.10 ರಷ್ಟು ಸಹ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿಲ್ಲ ಎಂಬುದು ವಿಷಾದನೀಯ. ಶೇ.20 ರಷ್ಟು ಕೇಸ್ ಸಹ ವಿಲೇವಾರಿಯಾಗುತ್ತಿಲ್ಲ. ಸಿಬ್ಬಂದಿ ಕೊರತೆ, ತಾಂತ್ರಿಕ ಕೌಶಲ್ಯದ ಬಗ್ಗೆ ಸಿಬ್ಬಂದಿಗೆ ತರಬೇತಿ ಇಲ್ಲದಿರುವುದು, ಸೂಕ್ತ ಮೂಲಭೂತ ಸೌರ್ಕಯವಿಲ್ಲದಿರುವುದು ತ್ವರಿತಗತಿಯಲ್ಲಿ ಕೇಸ್ ವಿಲೇವಾರಿಯಾಗದಿರುವುದಕ್ಕೆ‌ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬೀದಿನಾಯಿಗಳಿಗೆ ಹಿಂಸೆ ಕೊಟ್ಟರೆ ಸೇರಬೇಕಾಗುತ್ತದೆ ಜೈಲು, ಬೀಳಲಿದೆ ಭಾರೀ ದಂಡ ..!

ನಗರದ ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಪಶ್ಚಿಮ ವಿಭಾಗದಲ್ಲಿ 875 ಸೈಬರ್‌ ಪ್ರಕರಣಗಳು ದಾಖಲಾಗಿವೆ. ಇನ್ನೂ ಈಶಾನ್ಯ ವಿಭಾಗದಲ್ಲಿ 626, ಆಗ್ನೇಯ ವಿಭಾಗದಲ್ಲಿ 366, ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ 357 ಪ್ರಕರಣ, ದಕ್ಷಿಣ ವಿಭಾಗ 456,  ಪೂರ್ವ ವಿಭಾಗದಲ್ಲಿ 305, ಉತ್ತರ ವಿಭಾಗದಲ್ಲಿ 333, ವೈಟ್ ಫೀಲ್ಡ್ ವಿಭಾಗದಲ್ಲಿ 341 ಪ್ರಕರಣ ದಾಖಲಾಗಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News