ಮೈಸೂರಲ್ಲಿ ಮರ್ಯಾದಾ ಹತ್ಯೆ: ಅನ್ಯ ಜಾತಿಯವನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ!

ಅನ್ಯ ಸಮುದಾಯದ ಯುವಕನನ್ನು ಪ್ರೀತಿಸಿದ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಣಪಟ್ಟಣದ ಕಗ್ಗುಂಡಿ ಗ್ರಾಮದ 17 ವರ್ಷದ ಯುವತಿಯನ್ನು ಆಕೆಯ ತಂದೆಯೇ ಕೊಲೆಗೈದಿದ್ದಾರೆ. 

Written by - Chetana Devarmani | Last Updated : Jun 8, 2022, 12:45 PM IST
  • ಮೈಸೂರಲ್ಲಿ ಮರ್ಯಾದಾ ಹತ್ಯೆ
  • ಅನ್ಯ ಜಾತಿಯವನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ
  • ಮೈಸೂರು ಜಿಲ್ಲೆಯ ಪಿರಿಯಾಣಪಟ್ಟಣದಲ್ಲಿ ಘಟನೆ
ಮೈಸೂರಲ್ಲಿ ಮರ್ಯಾದಾ ಹತ್ಯೆ: ಅನ್ಯ ಜಾತಿಯವನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ! title=
ಮರ್ಯಾದಾ ಹತ್ಯೆ

ಮೈಸೂರು: ಅನ್ಯ ಸಮುದಾಯದ ಯುವಕನನ್ನು ಪ್ರೀತಿಸಿದ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಣಪಟ್ಟಣದ ಕಗ್ಗುಂಡಿ ಗ್ರಾಮದ 17 ವರ್ಷದ ಯುವತಿಯನ್ನು ಆಕೆಯ ತಂದೆಯೇ ಕೊಲೆಗೈದಿದ್ದಾರೆ. 

ಇದನ್ನೂ ಓದಿ: ಸಿಲಿಕಾನ್‌ಸಿಟಿಯಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ.. 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಕೇಸ್‌ ದಾಖಲು

ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ಪಕ್ಕದ ಗ್ರಾಮದ ಅನ್ಯ ಸಮುದಾಯದ ಯುವಕನ ಜೊತೆಗೆ ಪ್ರೇಮಾಂಕುರವಾಗಿತ್ತು. ಇದಕ್ಕೆ ಈಕೆಯ ಪೋಷಕರು ಆಕ್ಷೇಪಿಸಿದ್ದರು. ಆದರೆ ಯುವತಿ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು ಎನ್ನಲಾಗಿದೆ. ಜೂನ್ 6 ರಂದು ರಾತ್ರಿ ತಾನು ಪ್ರಿಯಕರನ ಮನೆಗೆ ಹೋಗುವುದಾಗಿ ಬಾಗಿಲು ತೆಗೆದು ಹೋಗುತ್ತಿದ್ದ ವೇಳೆ ತಡೆದ ಅಪ್ಪ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬೆಳಗ್ಗೆ 6.30 ರ ಸುಮಾರಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೂ ಮುನ್ನ ಯುವತಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ತಂದೆ ಮತ್ತು ಪ್ರೇಮಿಯ ನಡುವೆ ಗಲಾಟೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ತನ್ನ ತಂದೆ-ತಾಯಿಗೆ ಉಲ್ಟಾ ಹೊಡೆದ ಯುವತಿ, ತಂದೆ-ತಾಯಿ ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು. ಈ ಬಗ್ಗೆ ಸಿಡಿಪಿಒ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಸಿ ತಾನು ತಂದೆ-ತಾಯಿಯೊಂದಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಳು. ಇದರಿಂದ ಅಧಿಕಾರಿಗಳು ಯುವತಿಯನ್ನು ಮೈಸೂರಿನ ಬಾಲ ಮಂದಿರಕ್ಕೆ ಕಳುಹಿಸಿದ್ದರು.

ಬಳಿಕ ಕಳೆದ ಮೇ.18 ರಂದು ತಂದೆ-ತಾಯಿ ಬಾಲ ಮಂದಿರಕ್ಕೆ ಹೋಗಿ ಮಗಳ ಮನವೊಲಿಸಿ ಆಕೆಯ ಭವಿಷ್ಯದ ದೃಷ್ಟಿಯಿಂದ ಒಪ್ಪಿಗೆ ಪತ್ರ ಬರೆದುಕೊಟ್ಟು ಮನೆಗೆ ಕರೆದುಕೊಂಡು ಬಂದಿದ್ದರು. ಬಂದ ನಂತರ ಹುಡುಗನ ಜೊತೆಗೆ ಹೋಗದಂತೆ ಅನೇಕ ದಿನಗಳು ಬುದ್ಧಿವಾದ ಹೇಳಿದರೂ, ಕೇಳದ ಯುವತಿ ಪ್ರೇಮಿಯೊಂದಿಗೆ ಸಂಪರ್ಕ ಮುಂದುವರಿಸಿದ್ದಾಳೆ.

ಇದನ್ನೂ ಓದಿ: ಬೀದಿನಾಯಿಗಳಿಗೆ ಹಿಂಸೆ ಕೊಟ್ಟರೆ ಸೇರಬೇಕಾಗುತ್ತದೆ ಜೈಲು, ಬೀಳಲಿದೆ ಭಾರೀ ದಂಡ ..!

ಈ ಪ್ರಕರಣ ಸಂಬಂಧ ಪೊಲೀಸರು ಯುವತಿಯ ತಂದೆ-ತಾಯಿ ಇಬ್ಬರನ್ನೂ ಬಂಧಿಸಿದ್ದಾರೆ. ದಂಪತಿಗಳಿಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ. ತಂದೆ, ತಾಯಿ ಜೈಲು ಪಾಲಾದ ಕಾರಣ ಅವರೀಗ ಅನಾಥರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News