ಬೆಂಗಳೂರು: ಪಕ್ಷಾಂತರ ಹಾಗೂ ಕುದುರೆ ವ್ಯಾಪಾರದ ವಿಚಾರ ಬಂದರೆ ವಲಸೆ ನಾಯಕ ಸಿದ್ದರಾಮಯ್ಯ ಅವರೇ ನಿಜವಾದ ಕಿಂಗ್ ಎಂದು ಬಿಜೆಪಿ ಟೀಕಿಸಿದೆ. #ಪಕ್ಷಾಂತರಿಕುದುರೆವ್ಯಾಪಾರಿ ಹ್ಯಾಶ್ ಟ್ಯಾಗ್ ಬಳಸಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅತಿಯಾಗಿ ಮಾತನಾಡುವ ಸಿದ್ದರಾಮಯ್ಯನವರು ಅತಿಹೆಚ್ಚು ಬಾರಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕೊಳ್ಳಿ ಇಟ್ಟಿದ್ದಾರೆ’ ಎಂದು ಕುಟುಕಿದೆ.


COMMERCIAL BREAK
SCROLL TO CONTINUE READING

‘1983ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಸಿದ್ದರಾಮಯ್ಯ ತಮ್ಮ ಸಮಕಾಲೀನ ರಾಜಕಾರಣಿಗಳಿಗಿಂತ ಅತಿ ಹೆಚ್ಚು ಬಾರಿ ಪಕ್ಷಾಂತರ ಮಾಡಿದ್ದಾರೆ. ಜನತಾ ದಳ, ಜನತಾ ದಳ ಸಂಯುಕ್ತ, ಜೆಡಿಎಸ್, ಅಖಿಲ ಭಾರತ ಪ್ರಗತಿಪರ ಜನತಾ ದಳ ಕೊನೆಗೆ ಅಲ್ಲಿಂದ ಕಾಂಗ್ರೆಸ್ ಪಕ್ಷಕ್ಕೆ ಹಾರಿದ್ದಾರೆ. #ಪಕ್ಷಾಂತರಿಕುದುರೆವ್ಯಾಪಾರಿ ನಿಮ್ಮ ಮುಂದಿನ ಪ್ರಯಾಣ ಎತ್ತ?’ ಎಂದು ಬಿಜೆಪಿ ವ್ಯಂಗ್ಯವಾಗಿ ಪ್ರಶ್ನಿಸಿದೆ.


ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ರಾ ಮಾಜಿ ಸಂಸದ ಶಿವರಾಮೇಗೌಡ!?


‘ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಸುವ ವಿಚಾರದಲ್ಲಿ ಸಿದ್ದರಾಮಯ್ಯ ಅತ್ಯುತ್ತಮ ದಲ್ಲಾಳಿ. ಸಿದ್ದರಾಮಯ್ಯನವರೇ, 2012ರಲ್ಲಿ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಸೋಲಿಸಿ ಬೈರತಿ ಸುರೇಶ್ ಅವರನ್ನು ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಿದ್ದು ನೀವಲ್ಲವೇ?’ ಎಂದು ಪ್ರಶ್ನಿಸಿದೆ.


"ಅಲ್ಪಸಂಖ್ಯಾತರು, ದಲಿತರನ್ನು ಬಳಸಿಕೊಂಡು ಸಿದ್ದರಾಮಯ್ಯ ಸಿಎಂ ಆದರು"


‘ಸಿದ್ದರಾಮಯ್ಯನವರೇ ಕಾಂಗ್ರೆಸ್ ಮುಕ್ತ ಕರ್ನಾಟಕದ ನೈಜ ರೂವಾರಿ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೇರಾನೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮತ್ತೊಂದು ಸುತ್ತಿನ ಪಕ್ಷಾಂತರಕ್ಕೆ ಮುನ್ನುಡಿಯೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.