ಬೆಂಗಳೂರು: ಬೇಕಾದಾಗಲೆಲ್ಲ ಸುದ್ದಿಗೋಷ್ಠಿ, ಆಡಿಯೋ ಟೇಪ್ ಬಿಡುಗಡೆ, ತನಿಖಾಧಿಕಾರಿಗಳಂತೆ ವರ್ತನೆ. ಇಷ್ಟೆಲ್ಲ ಮಾಡಿದವರು ಪೊಲೀಸ್ ನೋಟಿಸ್‌ಗೆ ಬೆಚ್ಚಿ ಬೀಳುವುದೇಕೆ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಪ್ರಶ್ನಿಸಿದ.


COMMERCIAL BREAK
SCROLL TO CONTINUE READING

545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಆಡಿಯೋ ಬಿಡುಗಡೆ ಮಾಡಿದ್ದ ಪ್ರಿಯಾಂಕ್ ಖರ್ಗೆಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಆದರೆ, ಸಿಐಡಿ ನೋಟಿಸ್‍ಗೆ ಪ್ರಿಯಾಂಕ್ ಖರ್ಗೆ ಕ್ಯಾರೆ ಎಂದಿರಲಿಲ್ಲ. ಏಪ್ರಿಲ್ 22ರಂದು ಮೊದಲ ನೋಟಿಸ್, ಏ.24ಕ್ಕೆ 2ನೇ ನೋಟಿಸ್ ಮತ್ತು ಮೇ 4ಕ್ಕೆ 3ನೇ ನೋಟಿಸ್ ಹೀಗೆ ನೋಟಿಸ್ ಜಾರಿ ಮಾಡಿದರೂ ಪದೇ ಪದೇ ವಿಚಾರಣೆಗೆ ಗೈರಾಗಿರುವ ಕಾಂಗ್ರೆಸ್ ನಾಯಕನ ವಿರುದ್ಧ ಬಿಜೆಪಿ ಕಿಡಿಕಾರಿದೆ.


ಕ್ರೀಡಾಂಗಣದಲ್ಲಿ ಕುಸಿಯಲು 40% ಕಮಿಷನ್ ಕಾರಣ: ಆಪ್ ಆರೋಪ


‘ಸಿಐಡಿ ಪೊಲೀಸರು ಪ್ರಿಯಾಂಕ್‌ ಖರ್ಗೆ ಅವರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅನ್ವಯ ನೋಟಿಸ್ ನೀಡಿದ್ದಾರೆ. ಇದಕ್ಕೆ ಉತ್ತರಿಸುವುದು ಖರ್ಗೆ ಅವರ ಸಂವಿಧಾನ ಬದ್ಧ ಕರ್ತವ್ಯ‌. ಖರ್ಗೆ ಕುಟುಂಬದವರು ಸಂವಿಧಾನಕ್ಕೆ ಅತೀತರೇ? ಅಥವಾ ಹಕ್ಕುಗಳಿಗೆ ಮಾತ್ರ ಭಾಜನರೇ?’ ಎಂದು ಬಿಜೆಪಿ ಪ್ರಶ್ನಿಸಿದೆ.


ಬಿಜೆಪಿ ಸರ್ಕಾರದ 40% ಕಮೀಷನ್ ಭ್ರಷ್ಟಾಚಾರ ನಿಸರ್ಗದಿಂದಲೇ ಬಯಲು: ಕಾಂಗ್ರೆಸ್


‘ಆಡಳಿತ ಪಕ್ಷದಿಂದ ಸಿಐಡಿ ತನಿಖೆಗೆ ಆದೇಶ, 40ಕ್ಕೂ ಅಧಿಕ ಆರೋಪಿಗಳ ಬಂಧನ ಮತ್ತು ಶಾಮಿಲಾದ ಪೊಲೀಸರ ಬಂಧನ. ಆದರೆ, ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿತು, ನೋಟಿಸ್‌ ನೀಡಿದರೂ ನಿರ್ಲಕ್ಷಿಸಿತು ಮತ್ತು ತಮ್ಮ ಆಪ್ತರನ್ನು ರಕ್ಷಿಸಿತ. ನ್ಯಾಯ, ಅನ್ಯಾಯ ರಾಜ್ಯದ ಜನತೆ ನಿರ್ಧರಿಸಲಿ’ ಎಂದು ಬಿಜೆಪಿ ಹೇಳಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.