ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸ್ ನಿಮ್ಮ ಸರ್ಕಾರಕ್ಕೆ ಹೆದರುತ್ತಾ ಮೋದಿಜೀ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. #FakeGandhisBachaoToolKit ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ, ಕಾಂಗ್ರೆಸ್‌ ಪಕ್ಷ‌ ದೇಶದ ಸ್ವಾತಂತ್ರ್ಯಕ್ಕಾಗಿ  ಹೋರಾಡಿಯೇ ಇಲ್ಲ. ಕಾಂಗ್ರೆಸ್‌ ಅನ್ನುವುದೊಂದು ಸ್ವಾತಂತ್ರ್ಯ ಚಳುವಳಿ ಅಷ್ಟೇ. ರಾಜಕೀಯ ಕಾಂಗ್ರೆಸ್‌ ಪಕ್ಷಕ್ಕೂ, ಕಾಂಗ್ರೆಸ್‌ ಚಳುವಳಿಗೂ ಸಂಬಂಧವೇ ಇಲ್ಲ. ಎಲ್ಲವನ್ನೂ ಹೈಜಾಕ್ ಮಾಡಿದ್ದೀರಿ ಅಷ್ಟೇ, ಅಸಲಿ ಗಾಂಧಿಯನ್ನೂ’ ಎಂದು ಟೀಕಿಸಿದೆ.


COMMERCIAL BREAK
SCROLL TO CONTINUE READING

‘ಸರ್ಕಾರಕ್ಕೆ ಕಾಂಗ್ರೆಸ್‌ ಹೆದರುವುದು ಬೇಡ, ಅದರ ಅಗತ್ಯವೂ ಇಲ್ಲ. ಏಕೆಂದರೆ ಕಾಂಗ್ರೆಸ್‌ ಅಸ್ತಿತ್ವವೇ ಶೂನ್ಯ. ನೀವು ಈ ನೆಲದ ಕಾನೂನಿನ ಬಗ್ಗೆ, ಈ ನೆಲದ ಸಂವಿಧಾನ ಮೇಲೆ ಭಯ ಇಟ್ಟುಕೊಂಡರೆ ಸಾಕು. ಆದರೆ, ನಕಲಿ ಗಾಂಧಿ ಕುಟುಂಬ ಮೆಚ್ಚಿಸಲು ನೀವಿಂದು ಸಂವಿಧಾನವನ್ನು ಕಾಲಡಿಗೆ ಹಾಕುತ್ತಿದ್ದೀರಿ, ಅಕ್ಷಮ್ಯವಿದು ಎಂದು ಬಿಜೆಪಿ ಟ್ವೀಟ್ ಮಾಡಿದೆ.


ರಾಹುಲ್ ಗಾಂಧಿ ED ವಿಚಾರಣೆ ಅಂತ್ಯ: ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ


ಬಿಜೆಪಿ ಶೂನ್ಯದಿಂದ ಬೆಳೆದಿರುವ ಪಕ್ಷ, ಯಾರದ್ದೋ ಶ್ರೇಯವನ್ನು ಬೆನ್ನಿಗೆ ಅಂಟಿಸಿಕೊಂಡು ಬಂದಿಲ್ಲ. ಸಿದ್ದರಾಮಯ್ಯ ಪಕ್ಷಾಂತರದ ಇತಿಹಾಸ ನೋಡಿದರೆ, ಕಾಂಗ್ರೆಸ್ಸಿನಲ್ಲಿ ಅವರ ಆಯಸ್ಸು ಮುಗಿದಂತೆ ಭಾಸವಾಗುತ್ತಿದೆ. ಸಿಎಂ ಅಭ್ಯರ್ಥಿಯೆಂದು ಘೋಷಿಸದಿದ್ದರೆ ಮುಂದುವರಿಯುತ್ತೀರಾ?’ ಎಂದು ಬಿಜೆಪಿ ಪ್ರಶ್ನಿಸಿದೆ.


ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಆರಂಭದಿಂದಲೂ ಸುಳ್ಳನ್ನೇ ಹೇಳುತ್ತಾ ಬರುತ್ತಿದೆ. ಕಾಂಗ್ರೆಸ್ ಸತ್ಯ ಹೇಳಿದ್ದರೆ, ಪ್ರಕರಣ ವಜಾಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನ್ಯಾಯವಾದಿಗಳು ಮಾಡಿದ ವಾದವನ್ನು ನ್ಯಾಯಾಲಯ ವಜಾಗೊಳಿಸುತ್ತಿತ್ತೇ? ಕಾಂಗ್ರೆಸ್ ಪೋಣಿಸಿದ ಸುಳ್ಳಿನ ಮಣಿ ಭಗ್ನವಾಗಿದೆ’ ಎಂದು ಬಿಜೆಪಿ ಕುಟುಕಿದೆ.  


ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ನಡೆಸಿದ್ದು ಅಕ್ಷರಶಃ ಮನೆಗಳ್ಳತನ!: ಬಿಜೆಪಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.