ಕೊಪ್ಪಳ: ಗಂಗಾವತಿ ತಾಲೂಕಿನ ಮಾಜಿ ಎಂಎಲ್‌ಸಿ ಹೆಚ್.ಆರ್ ಶ್ರೀನಾಥ್ ಜೆಡಿಎಸ್ ಪಕ್ಷದಿಂದ ಹೊರನಡೆದಿದ್ದು, ಇದೀಗ ಕಾಂಗ್ರೆಸ್ ಪಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಇದನ್ನು ಓದಿ: Reliance jio: ಅಗ್ಗದ ದರದಲ್ಲಿ ನಿತ್ಯ 1GB ಡೇಟಾ, ಅನಿಯಮಿತ ಕರೆ ಜೊತೆಗೆ ಸಿಗುತ್ತೆ ಹಲವು ಪ್ರಯೋಜನ
ಮಾಜಿ ಸಂಸದ ಹೆಚ್.ಜಿ ರಾಮುಲು ಅವರ ಪುತ್ರ ಹೆಚ್ ಆರ್ ಶ್ರೀನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ರನ್ನು ಭೇಟಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್ ಪಕ್ಷ ಸೇರಿದ್ದ ಶ್ರೀನಾಥ್ ಇದೀಗ ಮರಳಿ ಗೂಡಿಗೆ ಕಾಲಿಟ್ಟಿದ್ದಾರೆ.
ಗಂಗಾವತಿ ವಿಧಾನಸಭೆ ಟಿಕೆಟ್ ಆಕಾಂಕ್ಷಿ ಆಗಿರುವ ಶ್ರೀನಾಥ್ ಶೀಘ್ರವೇ ಕಾಂಗ್ರೆಸ್ ಮರು ಸೇರ್ಪಡೆಗೊಳ್ಳಲಿದ್ದಾರೆ. ಇನ್ನು ಶ್ರೀನಾಥ್ ಸೇರ್ಪಡೆಗೆ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಡಿಕೆಶಿಯನ್ನು ಶ್ರೀನಾಥ್ ಭೇಟಿ ಮಾಡಿದ ಬಳಿಕ ಅನ್ಸಾರಿಯವರಿಗೂ ಟೆನ್ಶನ್ ಶುರುವಾಗಿದೆ.
ಇದನ್ನು ಓದಿ: ಪ್ರಯಾಗ್ ರಾಜ್ ಹಿಂಸಾಚಾರ: ಮಾಸ್ಟರ್ ಮೈಂಡ್ ಜಾವೇದ್ ಪುತ್ರಿ ಬಗ್ಗೆ ಆಘಾತಕಾರಿ ಮಾಹಿತಿ ರಿವೀಲ್
ಕಳೆದ ಬಾರಿ ಚುನಾವಣೆಯಲ್ಲಿ ಅನ್ಸಾರಿಯನ್ನು ವಿರೋಧಿಸಿ ಶ್ರೀನಾಥ್ ಜೆಡಿಎಸ್ ಪಕ್ಷಕ್ಕೆ ಸೇರಿದ್ದರು. ಇನ್ನು ಕಳೆದ ಕೆಲ ದಿನಗಳ ಹಿಂದೆ ಬಿಕೆ ಹರಿಪ್ರಸಾದ್ ಗಂಗಾವತಿಗೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಈ ಬಾರಿ ಹಿಂದೂಗಳಿಗೆ ಚುನಾವಣಾ ಟಿಕೆಟ್ ನೀಡೋದಾಗಿ ಘೋಷಣೆ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.