ಬೆಂಗಳೂರು: ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಬೇಡದ ಕೂಸಾಗಿದ್ದಾರೆ, ಅವರನ್ನು ಕಿತ್ತುಹಾಕಲು ಹೈಕಮಾಂಡ್ ಸಿದ್ಧ ಇದೆ, ಮತ್ತು ರಾಜ್ಯದ ನಾಯಕರು ಕೂಡಾ ಕೊಡವಿಕೊಳ್ಳಲು ಸಿದ್ಧ ಇದ್ದಾರೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರ ಚರ್ಚೆ ನಡೆದಿರುವ ಬೆನ್ನಲ್ಲೇ ಈಗ ಸಿದ್ಧರಾಮಯ್ಯ (Siddaramaiah) ನವರ ಹೇಳಿಕೆ ಬಂದಿದೆ."ಯಡಿಯೂರಪ್ಪ ನಿರ್ಗಮನದ ನಂತರ ಪಕ್ಷದ ಸ್ಥಿತಿ ಏನಾಗಬಹುದೆಂಬ ಚಿಂತೆ ಹೈಕಮಾಂಡಿಗೆ ಇದೆ. ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ, ನಾಯಕತ್ವ ದಿವಾಳಿಯಾಗಿದೆ. ಅದಕ್ಕೆ ಒದ್ದಾಡುತ್ತಿದ್ದಾರೆ. ಎಂದು ಅವರು ಹೇಳಿದರು.


ಇದನ್ನೂ ಓದಿ: ರಾಜ್ಯದ ಗಮನ ಸೆಳೆದ ಗ್ರಾಮ ಪಂಚಾಯತಿ ಚುನಾವಣಾ ಪ್ರಣಾಳಿಕೆ


ಇದೆ ವೇಳೆ ರಾಜ್ಯದ ಹಿತವನ್ನು ಕಾಪಾಡಲು ಯಡಿಯೂರಪ್ಪ(BS Yadiyurappa)ನವರು ವಿಫಲರಾಗಿದ್ದಾರೆ.ಅವರೊಬ್ಬ ಅಸಮರ್ಥ ಮುಖ್ಯಮಂತ್ರಿ, ಆದ್ದರಿಂದ ಅವರನ್ನು ಈಗ ಬದಲಾವಣೆ ಮಾಡುವುದರ ಮೂಲಕ ಪಾಪವನ್ನು ತೊಳೆದುಕೊಳ್ಳಬಹುದು ಎಂದು ಬಿಜೆಪಿ ಹೈಕಮಾಂಡ್ ತಿಳಿದುಕೊಂಡಿದೆ.ಆದ್ರೆ ಈಗ ಇಡಿಯಾಗಿ ಬಸ್ ಕೆಟ್ಟಿರುವ ಸಂದರ್ಭದಲ್ಲಿ ಬದಲಾವಣೆ ಮಾಡುವುದರಿಂದ ಬಿಜೆಪಿ ಹೈಕಮಾಂಡ್ ಪಾಪವನ್ನು ತೊಳೆದುಕೊಳ್ಳಬಹುದು ಎಂದು ತಿಳಿದುಕೊಂಡಿದೆ, ಇದರಿಂದ ಈಗ ಡ್ರೈವರ್ ಬದಲಾವಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.


ಇದನ್ನೂ ಓದಿ: ತಜ್ಞ ವೈದ್ಯರು, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳ ಭತ್ಯೆಗಳ ಪರಿಷ್ಕರಣೆ


ಈಗ ಸಿಎಂ ಯಡಿಯೂರಪ್ಪನವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೆ ಹಲವು ಬಗೆಯ ಕಸರತ್ತನ್ನು ನಡೆಸಿದ್ದಾರೆ.ಅದರ ಭಾಗವಾಗಿ ಈಗ ಹೈಕಮಾಂಡ್ ಹೇಳಿದರೆ ಈಗ ರಾಜೀನಾಮೆ ನೀಡುವುದಾಗಿ ಹೇಳುತ್ತಾರೆ.ಇನ್ನೊಂದು ಕಡೆಗೆ ಈಗ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕವಾಗಿ ಶಾಸಕರ ಸಹಿಯನ್ನು ಸಂಗ್ರಹಿಸುತ್ತಿದ್ದಾರೆ.ಅವರಿಗೆ ಈಗ ಬರಿ ಕುರ್ಚಿಯದ್ದೆ ಚಿಂತೆಯಾಗಿದೆ ಹೊರತು ರಾಜ್ಯದ್ದಲ್ಲ ಎಂದು ಸಿದ್ಧರಾಮಯ್ಯ ಕಿಡಿ ಕಾರಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.