ವಿಕೇಂಡ್ ನಲ್ಲಿ ಯುವಕನ ಹುಚ್ಚಾಟ: ಅಪಘಾತದ ರಭಸಕ್ಕೆ ಕಾರು ಪೀಸ್ ಪೀಸ್..!
ಕಾರಿನಲ್ಲಿ ಬೇರೆ ಯಾರು ಇರಲಿಲ್ಲ. ಅಪಘಾತದ ಬಳಿಕ ಕಾರಿನ ಪರಿಸ್ಥಿತಿ ನೋಡಿದವರೇ ಶಾಕ್ ಅಗಿದ್ರೂ. ಗುದ್ದಿದ ರಭಸಕ್ಕೆ ಕಾರು ಎರಡು ಭಾಗವಾಗಿ ಬಿದ್ದಿತ್ತು. ಕಾರಿನ ಇಂಜಿನ್ ಭಾಗ ಬೇರೆ ಕಡೆ ಬಿದ್ದಿದ್ರೆ ಹಿಂಭಾಗ ಇನ್ನೊಂದು ಕಡೆ ಬಿದ್ದಿತ್ತು..
ಬೆಂಗಳೂರು: ವೀಕೆಂಡ್ ಬಂದ್ರೆ ಸಾಕು ಯುವಕರಿಗೆ ಅದೇನಾಗುತ್ತೋ ಗೊತ್ತಿಲ್ಲ.ರಸ್ತೆಯಲ್ಲಿ ಕಾರು ಓಡಿಸ್ತಾರೋ, ಏರೋಪ್ಲೇನ್ ಓಡಿಸುತ್ತಿದ್ದರಾ ಅನ್ನೋ ಕನ್ಪೂಷನ್ ಅಲ್ಲಿ ಇದ್ದಾರೆ ಅಂತಾ ಕಾಣಿಸುತ್ತೆ. ಯಾರದ್ದೋ ಹುಡುಗಾಟಕ್ಕೆ ಇನ್ಯಾರೋದ್ದೋ ಪ್ರಾಣ ಹೋಗಿದ್ರೆ ಏನ್ ಗತಿ ಅಲ್ವಾ. ಅಬ್ಬಾ ಅದೆಂಥಾ ವೇಗವಾಗಿ ಕಾರು ಓಡಿಸಿದ್ದಾನೆ ಅಂದ್ರೆ ಈ ಸ್ಪೀಡ್ ನಲ್ಲಿ ಬಂದ ಕಾರು ಮೊದಲು ಡಿವೈಡರ್ ಗೆ ಗುದ್ದಿದೆ. ಅದೇ ಸ್ಪೀಡ್ ನಲ್ಲಿ ಮರಕ್ಕೆ ಗುದ್ದಿ ಪಕ್ಕಕ್ಕೆ ಹಾರಿ ನಿಂತಿದೆ.
ಈ ಘಟನೆ ನಡೆದಿದ್ದು ಪಾಪರೆಡ್ಡಿ ಪಾಳ್ಯದ ಬಸ್ ನಿಲ್ದಾಣದ ಬಳಿ. ರಾತ್ರಿ 12:40 ರ ಸಮಯ ಖಾಸಗಿ ಕಂಪನಿಯ ಇಂಜಿನಿಯರ್ ಯಶಸ್ ನಾಗರಬಾವಿ ಕಡೆಯಿಂದ ಕೆಂಗೇರಿ ಕಡೆಗೆ ಹೋಗ್ತಾ ಇದ್ದ. ಕಾರು ಗುದ್ದಿದ ರಭಸದ ಶಬ್ಧಕ್ಕೆ ಅಕ್ಕಪಕ್ಕದವರೆಲ್ಲ ಓಡಿ ಬಂದಿದ್ರೂ. ತಕ್ಷಣ ಕಾರಲ್ಲಿದ್ದ ಯಶಸ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ. ಕಾರಿನಲ್ಲಿ 24 ವರ್ಷದ ಯಶಸ್ ಮಾತ್ರ ಪ್ರಯಾಣಿಸ್ತಿದ್ದ.
ಇದನ್ನೂ ಓದಿ: ಕಾರ್ಯಪಾಲನ ವರದಿ ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ..!
ಕಾರಿನಲ್ಲಿ ಬೇರೆ ಯಾರು ಇರಲಿಲ್ಲ. ಅಪಘಾತದ ಬಳಿಕ ಕಾರಿನ ಪರಿಸ್ಥಿತಿ ನೋಡಿದವರೇ ಶಾಕ್ ಅಗಿದ್ರೂ. ಗುದ್ದಿದ ರಭಸಕ್ಕೆ ಕಾರು ಎರಡು ಭಾಗವಾಗಿ ಬಿದ್ದಿತ್ತು. ಕಾರಿನ ಇಂಜಿನ್ ಭಾಗ ಬೇರೆ ಕಡೆ ಬಿದ್ದಿದ್ರೆ ಹಿಂಭಾಗ ಇನ್ನೊಂದು ಕಡೆ ಬಿದ್ದಿತ್ತು.. ಕಾರನ್ನ ನೋಡಿದವರು ಇದರಲ್ಲಿದ್ದವರು ಯಾರು ಕೂಡ ಉಳಿದಿಲ್ಲ ಅನ್ನೋ ಮಾತಾಡ್ತಿದ್ರೂ. ಕಾರು ಯಶಸ್ಸನ್ನ ಆಸ್ಪತ್ರೆಗೆ ದಾಖಲಿಸುವಾಗ ಆತ ನಶೆಯಲ್ಲಿದ್ದ ಅಂತಾ ಹೇಳಲಾಗ್ತಿದೆ.
ಸ್ಥಳಕ್ಕೆ ಬಂದ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರು ಕಾರನ್ನ ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ರೂ. ಅದೃಷ್ಟಕ್ಕೆ ಆ ಸಮಯದಲ್ಲಿ ವಾಹನ ಸಂಚಾರ ಕೂಡ ಕಡಿಮೆಯಿತ್ತು. ಒಂದೊಮ್ಮೆ ಬೇರೆ ಯಾವುದಾದ್ರೂ ವಾಹನ ಆ ಸಮಯದಲ್ಲಿ ಬಂದಿದ್ರೆ ದೊಡ್ಡ ದುರಂತವೊಂದು ಸಂಭವಿಸುತಿತ್ತು. ಸದ್ಯ ಯಶಸ್ ನ ರಕ್ತದ ಮಾದರಿಯನ್ನ ಪಡೆದಿರುವ ಪೊಲೀಸರು ಪರೀಕ್ಷೆಗೆ ಕಳಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 13,415 ಹುದ್ದೆಗಳ ಭರ್ತಿ: ಸಚಿವ ರಾಮಲಿಂಗಾರೆಡ್ಡಿ
ಪರೀಕ್ಷೆ ವರದಿ ಬಂದ ನಂತರ ಮದ್ಯಪಾನ ಅಥವಾ ಡ್ರಗ್ಸ್ ಸೇವಿಸಿದ್ನಾ ಎನ್ನುವುದು ನಂತರದಲ್ಲಿ ತಿಳಿದು ಬರಲಿದೆ. ಸದ್ಯ ಯಶಸ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಅತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇಷ್ಟುದೊಡ್ಡ ಪ್ರಮಾಣದ ಅಪಘಾತವಾಗಿದ್ರೂ ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ ಅನ್ನೋದೇ ದೊಡ್ಡ ಸಮಾಧಾನ. ಅದ್ರೂ ಕಾರನ್ನ ಚಲಾಯಿಸುವಾಗ ಅದಷ್ಟು ಎಚ್ಚರಿಕೆಯಿರಲಿ. ನಿಮ್ಮಂತೆಯೇ ಇತರರು ಸಂಚರಿಸ್ತಾರೆ ಅವರಿಗೂ ಕುಟುಂಬವಿದೆ ಅನ್ನೋ ಕಾಳಜಿಯೂ ಅಷ್ಟೇ ಮುಖ್ಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.