ಬೆಂಗಳೂರು: ಕೆಲಸ‌ ಮುಗಿಸಿಕೊಂಡು  ರಾತ್ರಿ ಬೈಕ್‌ನಲ್ಲಿ‌ ಮನೆಗೆ ಹಿಂದಿರುಗುವಾಗ ವ್ಯಕ್ತಿಯನ್ನು ಅಡ್ಡಗಟ್ಟಿ ಕೊಲೆ ಮಾಡಲಾಗಿದೆ.  ದಿನೇಶ್ ಕೊಲೆಯಾದ ದುದೈರ್ವಿಯಾಗಿದ್ದು, ನೈಸ್ ರಸ್ತೆ ಸಂಪರ್ಕಿಸುವ ಮಂಗನಹಳ್ಳಿಯಲ್ಲಿ‌ ಕುಟುಂಬ ಸಮೇತ ವಾಸವಾಗಿದ್ದರು.


COMMERCIAL BREAK
SCROLL TO CONTINUE READING

ಮೂಲತಃ ಆಂಧ್ರದವರಾಗಿದ್ದ ದಿನೇಶ್ ಕಾರ್ಪೇಂಟರ್ ಆಗಿ ಕೆಲಸ‌ ಮಾಡಿಕೊಂಡು ಜೀವನ‌‌ ನಡೆಸುತ್ತಿದ್ದ.‌ ಹೆಂಡತಿ-ಮಕ್ಕಳೊಂದಿಗೆ ವಾಸವಾಗಿದ್ದ ದಿನೇಶ್ ತಾನಾಯಿತು-ತನ್ನ ಕೆಲಸವಾಯಿತು ಅಂದುಕೊಂಡಿದ್ದ. ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುವಾಗ ಅಪರಿಚಿತರು ಅಡ್ಡಗಟ್ಟಿ ಮಾರಕಾಸ್ತ್ರ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದಾರೆ. 


ಇದನ್ನೂ ಓದಿ- ನಿಮ್ಮ ಹೆಸರಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂದು ಬೆದರಿಕೆ ಹಾಕಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ಖದೀಮರು


ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಎಫ್ ಎಸ್ ಎಲ್ ಹಾಗೂ ಶ್ವಾನದಳವನ್ನ ಕರೆಯಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ದಿನೇಶ್ ಹತ್ಯೆ  ಯಾರು ಮಾಡಿದ್ದಾರೆ ಮತ್ತು ಯಾಕೆ ಮಾಡಿದ್ದಾರೆ ಎಂಬುದರ ಬಗ್ಗೆ‌ ನಿಖರವಾಗಿ ತಿಳಿದುಬಂದಿಲ್ಲ.  


ಇದನ್ನೂ ಓದಿ- ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ: ಯುವಕರೇ ಎಚ್ಚರ! ಎಚ್ಚರ! ಎಚ್ಚರ!


ಸ್ಥಳೀಯರು ಹೇಳುವ ಪ್ರಕಾರ ದಿನೇಶ್ ಯಾರ ಸಹವಾಹಸಕ್ಕೂ ಹೋಗುವ ಸ್ವಭಾವದವನು. ಆತನನ್ನ‌‌‌ ಕೊಲೆ‌‌ ಮಾಡಿದ್ದಾರೆ ಎಂಬುದನ್ನು ನಂಬುದಕ್ಕೆ ಆಗುತ್ತಿಲ್ಲ ಎಂದಿದ್ದಾರೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.