River Linking Project: ಕೇಂದ್ರ ಸರ್ಕಾರದ ನದಿ ಜೋಡಣೆಗೆ ರಾಜ್ಯ ಸರ್ಕಾರ ಹಿಂದೇಟು; ನ್ಯಾಯವಾಗಿ ನೀರು ಹಂಚಿಕೆ ಆದರೆ ಮಾತ್ರ ಒಪ್ಪಿಗೆ
ನದಿ ಜೋಡಣೆ ವಿಚಾರದಲ್ಲಿ ರಾಜ್ಯಕ್ಕೆ ನೀರು ಹಂಚಿಕೆ ಪಾಲು ಪ್ರಮಾಣದಲ್ಲಿ ಯಾವುದೇ ಅನ್ಯಾಯ ಆಗಬಾರದು. ನಮ್ಮ ರಾಜ್ಯದ ನೀರಿನ ಪಾಲು ಸರಿಯಾಗಿ ನಿರ್ಧಾರ ಆಗಬೇಕು. ಹೊಸ ವಿಸ್ತೃತ ಯೋಜನಾ ವರದಿ (DPR) ತಯಾರು ಆಗುವ ಹಂತದಲ್ಲೇ ರಾಜ್ಯದ ಪಾಲು ನಿರ್ಧಾರ ಆಗಬೇಕು ಎಂಬ ನಿಲುವನ್ನ ಸರ್ಕಾರ ಅನುಸರಿಸಲು ನಿರ್ಧರಿಸಿದೆ.
ಬೆಂಗಳೂರು: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ನಾಲ್ಕನೇ ಬಜೆಟ್ ನಲ್ಲಿ ನದಿ ಜೋಡಣೆ ಯೋಜನೆ ಕುರಿತು ಕರ್ನಾಟಕ ಸರ್ಕಾರ ಕಾದು ನೋಡುವ ತಂತ್ರ ಅವಲಂಬಿಸಿದೆ. ನದಿ ಜೋಡಣೆಯ ನಂತರ ನೀರು ಹಂಚಿಕೆ ಪ್ರಮಾಣ ಸಮಾಧಾನ ಆಗುವವರೆಗೆ ಸರ್ಕಾರ ಈ ಯೋಜನೆಗೆ ಸಮ್ಮತಿ ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದೆ.
ನದಿ ಜೋಡಣೆ ಯೋಜನೆ ವಿಚಾರವಾಗಿ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕಾವೇರಿ, ಕೃಷ್ಣಾ ಹಾಗೂ ಪೆನ್ನಾರ್ ನದಿ ಜೋಡಣೆ ಯೋಜನೆಗೆ ಎಲ್ಲ ರಾಜ್ಯಗಳ ಒಪ್ಪಿಗೆ ಸಿಕ್ಕ ಬಳಿಕ ಡಿಪಿಆರ್ ಮಾಡಲಾಗುತ್ತದೆ ಎಂದಿದೆ. ಅದು ಚರ್ಚೆಯ ಹಂತದಲ್ಲಿದೆ. ಯೋಜನೆ ಜಾರಿಗೆ ಡಿಪಿಆರ್ (Detail Project Report) ಮಾಡುವ ಸಂದರ್ಭದಲ್ಲಿ ನಮ್ಮ ರಾಜ್ಯದ ಪಾಲು ಸರಿಯಾದ ರೀತಿಯಲ್ಲಿ ನಿರ್ಧಾರ ಆಗಬೇಕು ಎಂದರು.
ಇದನ್ನೂ ಓದಿ- ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್: ಸಚಿವ ಮುರುಗೇಶ್ ನಿರಾಣಿ
ಹೊಸ ಡಿಪಿಆರ್ ಮಾಡುವಾಗ ನಮ್ಮ ಜೊತೆ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ನಮ್ಮ ಪಾಲು ನಿರ್ಧಾರ ಆಗುವವರೆಗೂ ಡಿಪಿಆರ್ ಆಗಬಾರದು ಎಂಬ ನಿಲುವು. ಕೇವಲ ಕಾವೇರಿ ಅಷ್ಟೇ ಅಲ್ಲ ಕೃಷ್ಣಾನೂ ಇದೆ. ಕೃಷ್ಣಾ ಹಾಗೂ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ನಮ್ಮ ರಾಜ್ಯದ ಪಾಲು ಇನ್ನೂ ಹೆಚ್ಚಾಗಬೇಕು. ನಮ್ಮ ಪ್ರದೇಶದಲ್ಲಿ ಎಷ್ಟು ನೀರು ಉತ್ಪಾದನೆ ಆಗುತ್ತದೆ ಅದರ ಆಧಾರದಲ್ಲಿ ಹಂಚಿಕೆ ಆಗಬೇಕು ಎಂದವರು ತಿಳಿಸಿದರು.
ನದಿಗಳ ನೀರಿನ ಪ್ರಮಾಣ ಹಾಗೂ ರಾಜ್ಯದ ಅವಶ್ಯಕತೆ ಬಗ್ಗೆ ವರದಿ ತಯಾರಿಗೆ ಸೂಚನೆ:
ನದಿ ಜೋಡಣೆ (River Linking) ವಿಚಾರದಲ್ಲಿ ರಾಜ್ಯಕ್ಕೆ ನೀರು ಹಂಚಿಕೆ ಪಾಲು ಪ್ರಮಾಣದಲ್ಲಿ ಯಾವುದೇ ಅನ್ಯಾಯ ಆಗಬಾರದು. ನಮ್ಮ ರಾಜ್ಯದ ನೀರಿನ ಪಾಲು ಸರಿಯಾಗಿ ನಿರ್ಧಾರ ಆಗಬೇಕು. ಹೊಸ ವಿಸ್ತೃತ ಯೋಜನಾ ವರದಿ (DPR) ತಯಾರು ಆಗುವ ಹಂತದಲ್ಲೇ ರಾಜ್ಯದ ಪಾಲು ನಿರ್ಧಾರ ಆಗಬೇಕು ಎಂಬ ನಿಲುವನ್ನ ಸರ್ಕಾರ ಅನುಸರಿಸಲು ನಿರ್ಧರಿಸಿದೆ.
ಇದನ್ನೂ ಓದಿ- Shashikala Jolle : 'ವಿಜಯನಗರವನ್ನ ಆದರ್ಶಜಿಲ್ಲೆಯಾಗಿ ಅಭಿವೃದ್ದಿಗೊಳಿಸಲು ಒಗ್ಗಟ್ಟಿನ ಪ್ರಯತ್ನ'
ಕಾವೇರಿ, ಕೃಷ್ಣಾ, ಗೋದಾವರಿ ಹಾಗೂ ಪೆನ್ನಾರ್ ನದಿಗಳ ವಿವರಗಳನ್ನು ತಯಾರು ಮಾಡಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.ಈಗಾಗಲೇ ದೊಡ್ಡ ನೀರಾವರಿ ನದಿ ಯೋಜನೆ ಕುರಿತು ಕೆಲಸ ಆರಂಭವಾಗಿದ್ದು, ನದಿಗಳ ನೀರಿನ ಪ್ರಮಾಣ ಹಾಗೂ ಪ್ರಾದೇಶಿಕವಾಗಿ ಇರುವ ಅವಶ್ಯಕತೆ ಪಟ್ಟಿ ಮಾಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.