Pralhad Joshi : `ಮೊಟ್ಟೆ ಎಸೆದಿದ್ದು ಸರಿಯಲ್ಲ : ಈಗ ಇರೋದು ಡುಪ್ಲಿಕೆಟ್, ನಕಲಿ ಕಾಂಗ್ರೆಸ್`
ಸಿದ್ದರಾಮಯ್ಯ ಆಗಲಿ, ಬೇರೆಯವರಿಗೆ ಆಗಲಿ ಮೊಟ್ಟೆ ಎಸೆಯೋದು, ಕಪ್ಪು ಧ್ವಜ ಪ್ರದರ್ಶನ ಮಾಡೋದರ ಪರವಾಗಿ ನಾನು ಇಲ್ಲ. ಮೊಟ್ಟೆ ಎಸೆದಿದ್ದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡೀದ್ದಾರೆ.
ಧಾರವಾಡ : ಸಿದ್ದರಾಮಯ್ಯ ಆಗಲಿ, ಬೇರೆಯವರಿಗೆ ಆಗಲಿ ಮೊಟ್ಟೆ ಎಸೆಯೋದು, ಕಪ್ಪು ಧ್ವಜ ಪ್ರದರ್ಶನ ಮಾಡೋದರ ಪರವಾಗಿ ನಾನು ಇಲ್ಲ. ಮೊಟ್ಟೆ ಎಸೆದಿದ್ದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡೀದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಹ್ಲಾದ ಜೋಶಿ, ಮೊಟ್ಟೆ ಎಸೆದಿದ್ದು ಯಾವ ರೀತಿಯಲ್ಲಿಯೂ ಸಮರ್ಥನೀಯವಲ್ಲ. ಆದರೆ ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಹೇಳಿದ್ದು ಇಲ್ಲಿ ಗಮನಿಸಬೇಕು. ಸಾವರ್ಕರ್ ಬಗ್ಗೆ ನಿಮ್ಮ ಅಭಿಪ್ರಾಯ ಬೇರೆ ಇರಬಹುದು. ಆದರೆ ಸಾವರ್ಕರ್ ಬಗ್ಗೆ ವಿಶ್ವಾಸ, ಶ್ರದ್ಧೆ ಇದ್ದವರಿಗೆ ಅಪಮಾನವಾಗೋ ರೀತಿಯಲ್ಲಿ ಮಾತನಾಡಿದ್ದೀರಿ. ಇದು ಸರಿಯಲ್ಲ. ಸ್ವಂತಹ ಇಂದಿರಾ ಗಾಂಧಿಯವರು ಸಾವರ್ಕರ್ ಬಗ್ಗೆ ಪತ್ರ ಬರೆದಿದ್ದರು. ಅವರು ಭಾರತದ ಸುಪುತ್ರ ಅಂತಾ ಹೊಗಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ದೊಡ್ಡದಿದೆ ಅಂದಿದ್ದರು. ಮಹಾತ್ಮ ಗಾಂಧಿಯವರು ಸಾವರ್ಕರ್ ಹೋರಾಟ ನೆನಪಿಸಿದ್ದರು. ಬ್ರಿಟಿಷರಿಗೆ ಸಾವರ್ಕರ್ ಅವರನ್ನು ಜೈಲಿನಿಂದ ಬಿಡುವಂತೆ ಕೇಳಿದ್ದರು. ಅವರೆಲ್ಲ ಆಗ ಇದ್ದವರು ಓರಿಜಿನಲ್ ಕಾಂಗ್ರೆಸ್‌ಗರು. ವಿಚಾರ ಬೇಧವಿದ್ದರೂ ಸಾವರ್ಕರ್ ಬಗ್ಗೆ ಗೌರವ ಹೊಂದಿದ್ದರು. ಆದರೆ ಈಗ ಇರೋದು ಡುಪ್ಲಿಕೆಟ್, ನಕಲಿ ಕಾಂಗ್ರೆಸ್, ಈ ನಕಲಿ ಕಾಂಗ್ರೆಸ್‌ನ್ನೇ ಸಿದ್ದರಾಮಯ್ಯ ವಿರೋಧಿಸುತ್ತ ಬಂದಿದ್ದರು. ಹಿಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಇವರೇ ಬೈದಿದ್ದರು. ಸ್ವಲ್ಪ ಸಿದ್ದರಾಮಯ್ಯನವರು ಹಳೆಯದನ್ನು ನೆನಪು ಮಾಡಿಕೊಳ್ಳಬೇಕಿದೆ. ಈಗ ಸಿದ್ದರಾಮಯ್ಯ ನಕಲಿ ಕಾಂಗ್ರೆಸ್‌ನ ನಕಲಿ ಗಾಂಧಿಗಳನ್ನು ಮಚ್ಚಿಸಲು ಹೊರಟಿದ್ದಾರೆ. ಈಗ ಇರೋದು ಓರಿಜನಲ್ ಕಾಂಗ್ರೆಸ್ ಅಲ್ಲ. ಅದರಲ್ಲಿ ಸಿದ್ದರಾಮಯ್ಯ ಸಹ ಓರಿಜನಲ್ ಅಲ್ಲ. ಸಿದ್ದರಾಮಯ್ಯ ಆಕ್ರೋಶದಿಂದ ಮಾತನಾಡುವಾಗ ಕಾಂಗ್ರೆಸ್ ಕಿತ್ತೊಗೆಯಬೇಕು ಅಂತಾರೆ. ಬಳಿಕ ಅಲ್ಲಲ್ಲ ಬಿಜೆಪಿ ಅಂತಾ ಸಮಜಾಯಿಸಿ ನೀಡುತ್ತಾರೆ. ಹೀಗಾಗಿ ಅವರ ಮನಸ್ಸಿನಲ್ಲಿ ಇನ್ನೂ ಕಾಂಗ್ರೆಸ್ ಬಂದಿಲ್ಲ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ, ಡಿಕೆಶಿಗೆ ಕ್ಷಮೆ ಕೇಳುವ ಸೌಜನ್ಯ ಇಲ್ಲ : ಕೆ.ಎಸ್.ಈಶ್ವರಪ್ಪ
ಮುಸ್ಲಿಂ ತುಷ್ಟೀಕರಣಕ್ಕೆ ಈ ರೀತಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಂದಿರಾಗಾಂಧಿವರೆಗೆ ಎಲ್ಲರೂ ಸಾವರಕರ ಗೌರವಿಸಿದ್ದಾರೆ. ಹೀಗೆ ಇದ್ದಾಗಲೂ ಬಾಯಿಗೆ ಬಂದಂತೆ ಸಾವರ್ಕರ್ ಬಗ್ಗೆ ಮಾತನಾಡುವುದು ಖಂಡನೀಯ. ಸಿದ್ದರಾಮಯ್ಯಗೆ ಮೊಟ್ಟೆ ಎಸೆಯೋದು ಸರಿಯಲ್ಲ. ಅವರು ವಿರೋಧ ಪಕ್ಷರ ನಾಯಕರು. ಅವರು ಎಲ್ಲ ಕಡೆ ಹೋಗಲು ಸ್ವತಂತ್ರರು. ಯಾವ ಪಕ್ಷವಾದರೂ ಈ ರೀತಿ ಮಾಡಬಾರದು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಭದ್ರತಾ ವೈಫಲ್ಯ ಆರೋಪ ವಿಚಾರವಾಗಿ ಮಾತನಾಡಿದ ಪ್ರಹ್ಲಾದ ಜೋಶಿ, ಏನೇ ಭದ್ರತೆ ಯಾರಿಗೆ ಇದ್ದರೂ ಅದಕ್ಕೊಂದು ಇತಿ ಮೀತಿ ಇರುತ್ತದೆ. ಸಿಎಂ ಮಾಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುವುದು ಸರಿಯಲ್ಲ. ಅವರು ಐದು ವರ್ಷ ಕಾಲ ಸಿಎಂ ಇದ್ದವರು. ಅದಕ್ಕಿಂತ ಮೊದಲು ಮಂತ್ರಿ, ಡಿಸಿಎಂ ಆಗಿದ್ದವರು. ಪೊಲೀಸರು ಯಾರ ಸರ್ಕಾರ ಇದ್ದರೂ ಆ ರೀತಿ ವರ್ತಿಸುವುದಿಲ್ಲ. ನಮ್ಮ ಸರ್ಕಾರದಲ್ಲಿಯೂ ವರ್ತಿಸುವುದಿಲ್ಲ. ರಾಜಕೀಯ ಕಾರಣಕ್ಕೆ ಆ ರೀತಿ ಹೇಳುತ್ತಿದ್ದಾರೆ. ತುಷ್ಟೀಕರಣ ಮಾಡಿ ವೋಟ್ ಪಡೆಯಲು ಹೀಗೆ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳಡಿ ಆನ್‌ಲೈನ್ ಮುಖಾಂತರ ಅರ್ಜಿಗಳ ಆಹ್ವಾನ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.