ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳಡಿಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.
1. ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ರೂ. 5.00 ಲಕ್ಷಗಳ ಸಹಾಯಧನ
2. ಪದವಿ ಪೂರ್ವ, ಪದವಿ ಹಾಗೂ ಸ್ನಾತಕೊತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲವಾಗಲು ಉಚಿತ ಲ್ಯಾಪ್‌ಟಾಪ್
3. ಅಂಧರಿಗೆ ಸ್ಮಾರ್ಟ್ ಸ್ಟಿಕ್
4. ಅಂಧ ವಿದ್ಯಾರ್ಥಿಗಳಿಗೆ ಎಜುಕೇಷನಲ್ ಲ್ಯಾಪ್‌ಟಾಪ್
5. ಹಿರಿಯ ನಾಗರೀಕರಿಗೆ ಮಡಚುಬಹುದಾದ ವೀಲ್ ಚೇರ್
ಇದನ್ನೂ ಓದಿ : Breaking News : ಬಿಜೆಪಿ ಸಂಸದೀಯ ಮಂಡಳಿಯನ್ನು ಘೋಷಿಸಿದ ನಡ್ಡಾ : ಸಚಿವ ಗಡ್ಕರಿ ಔಟ್
ಸೂಚನೆ:
• ಮೇಲ್ಕಂಡ ಕಾರ್ಯಕ್ರಮಗಳಡಿ ಅರ್ಜಿ ಸಲ್ಲಿಸಲು ಆಸಕ್ತರು ಪಾಲಿಕೆಯ ವೆಬ್ ಜಾಲತಾಣವಾದ https://accounts.bbmpgov.in/welfare ಮುಖಾಂತರ ಅಥವಾ ಆಯ್ದ 92 ಬೆಂಗಳೂರು ಒನ್ ಕೇಂದ್ರಗಳಲ್ಲಿ ರೂ . 30/ -ಗಳನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದು.
• ಅರ್ಜಿದಾರರ ಅರ್ಹತೆಗಳ ಬಗ್ಗೆ ಪಾಲಿಕೆಯ ಅಂತರ್ಜಾಲದಲ್ಲಿ ಮಾರ್ಗಸೂಚಿಗಳನ್ನು ಅಳವಡಿಸಲಾಗಿರುತ್ತದೆ.
• ಹೆಚ್ಚಿನ ಮಾಹಿತಿಗೆ ತಮ್ಮ ವ್ಯಾಪ್ತಿಯ ಪಾಲಿಕೆಯ ವಲಯ ಕಛೇರಿಯ ಸಹಾಯಕ ಕಂದಾಯ ಅಧಿಕಾರಿ(ಕಲ್ಯಾಣ) ರವರನ್ನು ಸಂಪರ್ಕಿಸುವುದು.
• ದಿನಾಂಕ : 20-08-2022 ರಿಂದ ದಿನಾಂಕ: 19-09-2022 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
• ತಾಂತ್ರಿಕ ಸಮಸ್ಯೆಗಳಿಗೆ ಸಂಪರ್ಕ:*
ಶ್ರೀಮತಿ. ಗೀತ – 9880197998
ಶ್ರೀ . ಆದರ್ಶ - 9845763451