ಹುಬ್ಬಳ್ಳಿ : ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳಿಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಂದ ಪುಲ್ ಡ್ರೀಲ್ ನಡೆದಿದೆ. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಒಂದೊದೇ  ಸತ್ಯವನ್ನು ಬಾಯಿ ಬಿಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಭೀಕರವಾಗಿ ಹತ್ಯೆಗೀಡಾದ  ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ನಡೆದಿದೆ. ಅವರ ಕುಟುಂಬಸ್ಥರು, ಅನುಯಾಯಿಯಿಗಳು ಗುರೂಜಿಯನ್ನು ಕಳೆದು ಕೊಂಡ ನೋವಿನಿಂದ ಹೊರ ಬಂದಿಲ್ಲ. ಈ ನಡುವೆ ಪ್ರಕರಣದ ಆರೋಪಿಗಳಾದ  ಮಹಾಂತೇಶ ಶಿರೂರ, ಮತ್ತು ಮಂಜುನಾಥ ಮರೆವಾಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಕೊಲೆಗೆ ಏನು ಕಾರಣ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ : 07-07-2022 Today Vegetable Price: ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ


ಇಬ್ಬರೂ ಹಂತಕರು ಹತ್ತರಿಂದ ಹನ್ನೆರಡು ವರ್ಷ ಚಂದ್ರಶೇಖರ ಗುರೂಜಿ ಬಳಿಯೇ ಕೆಲಸ ಮಾಡಿದ್ದು, 2016ರಲ್ಲೇ ಕೆಲಸ ಬಿಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲಿಂದ ಹೊರಬಂದ ಬಳಿಕ ಸ್ವಂತ ಉದ್ಯೋಗ ಆರಂಭಿಸಿ ಜೀವನ ಸಾಗಿಸುತ್ತಿದ್ದುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಚಂದ್ರಶೇಖರ ಗುರೂಜಿ ಬಳಿಯ ಕೆಲಸ ಬಿಟ್ಟ ನಂತರ ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದ್ದರು ಎನ್ನಲಾಗಿದೆ. 


 ಮೂಲಗಳ ಪ್ರಕಾರ ಆರೋಪಿಗ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು ಎಂದು  ಅವರು ಆರೋಪಿಸಿದ್ದಾರೆ. ತಮ್ಮನ್ನು ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಕೂಡಾ ಬಿಡಲಿಲ್ಲ. ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಗಳು ಆಪಾದಿಸಿದ್ದಾರೆ. ಎಲ್ಲೇ ಬಿಜಿನೆಸ್ ಮಾಡಿದರೂ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು ಎಂದಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ : ಬೀದಿ ಬದಿಯಲ್ಲಿಯೂ ಸಿಗಲಿದೆ ಉತ್ತಮ ಗುಣಮಟ್ಟದ ಆಹಾರ : ಬಿಬಿಎಂಪಿ ತಂದಿದೆ ಹೊಸ ಯೋಜನೆ


ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ಗುರೂಜಿಯನ್ನು ಹಂತಕರು ಸಂಧಾನಕ್ಕೆಂದು ಕರೆದಿದ್ದರು ಎನ್ನಲಾಗಿದೆ.  ಈ ನಿಟ್ಟಿನಲ್ಲಿ ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಹೋಟೆಲ್ ಗೆ ಬಂದಿದ್ದರು. ಚಾಕು ತಂದಿದ್ದು ಗೊತ್ತಾಗಬಾರದು ಎಂದು ದಾಖಲೆ ಪತ್ರಗಳ‌ ಮಧ್ಯೆ ಚಾಕು ಇಟ್ಟುಕೊಂಡಿದ್ದರು ಎನ್ನಲಾಗಿದೆ. ಆದರೆ ಕೊಲೆ ಮಾಡಿ ಓದಿ ಹೋಗುತ್ತಿರುವಾಗ ದಾಖಲೆ ಪತ್ರಗಳನ್ನು ಹೋಟೆಲ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಹೀಗೆ ಪರಾರಿಯಾಗುವ ವೇಳೆ ಕೊಲೆಗೆ ಬಳಸಿದ್ದ ಚಾಕುವನ್ನು ಹೋಟೆಲ್ ಮುಂಭಾಗದ ಕಸದ ರಾಶಿಗೆ ಎಸೆದಿದ್ದಾರೆ. ಹೀಗೆ ಕಸದ ರಾಶಿಯಲ್ಲಿ ಎಸೆದ ಚಾಕುವನ್ನ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಮಾರ್ಗ ಮಧ್ಯೆ ಎಸೆದ ಇನ್ನೊಂದು ಚಾಕುವಿಗಾಗಿ  ಪೊಲೀಸರು ಹುಡುಕಾಟ  ನಡೆಸುತ್ತಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ