ಕೊಪ್ಪಳ : ಶ್ರೇಷ್ಠತೆಯ ವ್ಯಸನದಿಂದ 58 ಲಕ್ಷ ಯಹೂದಿಗಳನ್ನು ಹತ್ಯೆ ಮಾಡಿದ ಹಿಟ್ಲರ್ ಕೊನೆಗೆ ಒಬ್ಬ ಹೇಡಿಯಂತೆ ಗುಂಡು ಹಾರಿಸಿಕೊಂಡು ಸತ್ತ. ಇಂಥಾ ಪರಿಸ್ಥಿತಿ ನಮ್ಮ ದೇಶದಲ್ಲಿ ಬರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 


COMMERCIAL BREAK
SCROLL TO CONTINUE READING

ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕನಕಗಿರಿ ಉತ್ಸವವನ್ನು ಭವ್ಯವಾದ "ರಾಜಾ ಉಡಚಪ್ಪ ನಾಯಕ" ವೇದಿಕೆಯಲ್ಲಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಇಲ್ಲಿ ಶ್ರೇಷ್ಠರು, ಕನಿಷ್ಠರು ಇಲ್ಲವೇ ಇಲ್ಲ. ತಮ್ಮನ್ನು ತಾವು ಶ್ರೇಷ್ಠರು ಎನ್ನುವವರು, ಮತ್ತೊಬ್ಬರನ್ನು ಕನಿಷ್ಠರು ಎನ್ನುವವರು ಮನುಷ್ಯರೇ ಅಲ್ಲ. ಈ ರೀತಿಯ ಶ್ರೇಷ್ಠತೆಯ ವ್ಯಸನವನ್ನು ಹೋಗಲಾಡಿಸಲು ಬಸವಣ್ಣ, ಅಂಬೇಡ್ಕರ್ ಹೋರಾಟ ಮಾಡಿದರು ಎಂದು ವಿವರಿಸಿದರು.‌


ಸಮಾಜದಲ್ಲಿ ಅಸಮಾನತೆ ಇದೆ. ಇದನ್ನು ಹೋಗಲಾಡಿಸಲು ಏನಾದ್ರೂ ಪ್ರಯತ್ನ ಮಾಡಿದ್ವಾ ಎನ್ನುವ ಕುರಿತು ಪ್ರತಿಯೊಬ್ಬರೂ ತಮ್ಮನ್ನು ಪ್ರಶ್ನಿಸಿಕೊಳ್ಳಬೇಕು ಎಂದರು. ಚತುವರ್ಣವ್ಯವಸ್ಥೆ ರೂಪಿಸಿ ಒಬ್ಬರನ್ನು ಶ್ರೇಷ್ಠರು ಉಳಿದವರನ್ನು ಕನಿಷ್ಠರು ಎನ್ನುವ ವ್ಯವಸ್ಥೆ ರೂಪಿಸಿದರು. ಇದನ್ನೇ ಹಿಟ್ಲರ್ ಮತ್ತು ಮುಸಲೋನಿ ಜರ್ಮನಿಯಲ್ಲಿ ಮಾಡಿದ್ದು. ಕೊನೆಗೆ    ಅವರಿಗೆ ಯಾವ ಗತಿ ಆಯ್ತು ಎಂದು ಇಡಿ ಮನುಕುಲ ನೋಡಿದೆ ಎಂದರು. 


ಇದನ್ನೂ ಓದಿ: ರಾಮೇಶ್ವರ ಕೆಫೆ ಪ್ರಕರಣ: ಘಟನೆಯ ಸಂಪೂರ್ಣ ಸತ್ಯ ಹೊರಗೆ ಬರಲಿ- ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಸೂಚನೆ 


ನಾವು ಅಂಬೇಡ್ಕರ್, ಬುದ್ದ, ಬಸವ, ಕುವೆಂಪು ಮುಂತಾದವರ ವಿಚಾರಗಳನ್ನು ಹೆಚ್ಚೆಚ್ಚು ಪಾಲಿಸುತ್ತಾ ತಾರತಮ್ಯದ ಸಮಾಜವನ್ನು ಹೋಗಲಾಡಿಸಬೇಕು. ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು, ಶೂದ್ರರಿಗೆ ಶಿಕ್ಷಣ ಸಿಕ್ಕಿದ್ದು ಇವರೆಲ್ಲಾ ಮಹನೀಯರ ಹೋರಾಟದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  


ಈ ಚರಿತ್ರೆಯನ್ನು ನೆನಪಿಸುವುದಕ್ಕೇ ನಾವು ವಿಶ್ವ ವಿದ್ಯಾಲಯಕ್ಕೆ ಅಕ್ಕಮಹದೇವಿ ಹೆಸರು ಇಟ್ಟೆ. ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ ಎನ್ನುತ್ತಾ ಸಮಾನತೆಯ ಹಾದಿಯಲ್ಲಿ ಸರ್ಕಾರ ಜಾರಿಗೆ ತಂದ ಹಲವು ಭಾಗ್ಯಗಳನ್ನು ವಿವರಿಸಿದರು. 


ನಾವು ಯಾವತ್ತೂ ಸೀತಾರಾಮನ ಸಂಸ್ಕೃತಿಯವರು. ಸೀತೆ, ಲಕ್ಷ್ಮಣನನ್ನು ಬಿಟ್ಟು ರಾಮ ಯಾವತ್ತೂ ಒಂಟಿ ಅಲ್ಲ. ರಾಮನನ್ನು ಒಂಟಿ ಮಾಡುವುದಲ್ಲ.  ಸಕುಂಟುಂಬ ಸಮೇತನಾದ ಸೀತಾರಾಮ ನಮ್ಮವ ಎಂದರು. 


ಇದನ್ನೂ ಓದಿ: Rameshwaram Cafe Blast : ಪ್ರಾಣ ಉಳಿಸಿತು ಅಮ್ಮನ ಆ ಕರೆ ! ತಾಯಿ ಹೃದಯಕ್ಕೆ ತಿಳಿಯಿತೇ ಮಗನಿಗೆ ಎದುರಾಗಿದ್ದ ಕಂಟಕ


ಮುಂದಿನ ವರ್ಷ ಕನಕಗಿರಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದು  ಸಿಎಂ ಇದೇ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡಿದರು. ಕನಕಗಿರಿ ಉತ್ಸವವನ್ನು ನಿರಂತರವಾಗಿ ನಡೆಸಲು, ಕನಕಗಿರಿಯ ಸರ್ವತೋಮುಖ ಅಭಿವೃದ್ಧಿಗೆ ನಾನು ಮತ್ತು ನಮ್ಮ ಸರ್ಕಾರ ಸದಾ ಬದ್ದವಾಗಿದೆ ಎಂದರು. 


ಸರ್ವೋದಯ, ಸರ್ವದರ್ಮ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಈ ದಿಕ್ಕಿನಲ್ಲೇ ನಮ್ಮ ಸರ್ಕಾರ ಮುನ್ನಡೆಯಲಿದೆ. ಕೊಪ್ಪಳ ನನ್ನದೇ ಕ್ಷೇತ್ರ. ಈ ಜಿಲ್ಲೆಯ ಜನರ ಪ್ರೀತಿಗೆ ನಾನು ಸದಾ ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.  


&https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.