ಬೆಂಗಳೂರು: ನಿಯಮ 69ರ ಅಡಿಯಲ್ಲಿ ಪಿಎಸ್ಐ (ಪೊಲೀಸ್ ) ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಬಗ್ಗೆ ಚರ್ಚೆ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ರಾಜಕೀಯ ಕೊನೆಯ ಹಂತ ಎಂದು ಹೇಳಿ ಎಷ್ಟು ಜನರನ್ನ ಕಳುಹಿಸಿದ್ದಿರಿ ಎಂದು ಕಾಲೆಳೆದರು.


COMMERCIAL BREAK
SCROLL TO CONTINUE READING

ವಿಧಾನಸಭೆ ಕಲಾಪದಲ್ಲಿ ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು, ‘ಮಧ್ಯೆ ಎದ್ದು ನಿಂತ್ರೆ ನಾನು ಏನ್ ಹೇಳಬೇಕು ಅದು ಮರೆತುಹೋಯ್ತು’ ಎಂದರು. ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ ಅವರು ,ನೀವು ಮರೆಯುವವರ ಎಂದು ಕೇಳಿದರು. ಆಗ ಸಿದ್ದರಾಮಯ್ಯ ಮಾತಾನ್ನಾಡಿ, ನಮ್ಮಲ್ಲಿ ಒಂದು ಗಾದೆ ಇದೆ. ಇದ್ದದ್ದು ಇದಂಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ರು ಅಂತ ಎಂದು ತಮಾಷೆ ಮಾಡಿದರು.


ಇದನ್ನೂ ಓದಿ: ಇಡ್ಲಿ ವಿಚಾರಕ್ಕೆ ಗುಂಪುಗಳ ನಡುವೆ ಗ್ಯಾಂಗ್ವಾರ್: ದಾಳಿಗೆ ಕಾರು ಜಖಂ!


ಬಸವರಾಜ ನೀವು ನಮ್ಮ ಜೊತೆಗೆ ಇದ್ದವರು ಈಗ ಸಿಎಂ ಆಗಿದ್ದೀರ, ಯಾವ ಸ್ಥಾನ ಶಾಶ್ವತ ಅಲ್ಲ. ನಾನು 1983 ರಲ್ಲಿ ಸದನಕ್ಕೆ ಬಂದಿದ್ದೇನೆ. ಅನೇಕ ಜನ ಸಿಎಂಗಳನ್ನು‌ ನೋಡಿದ್ದೇನೆ. ಅವರ ಜೊತೆಗೆ ಕೆಲಸ ಮಾಡಿದ್ದೇನೆ. ನಾನು 39 ವರ್ಷಗಳಿಂದ ಇದ್ದೇನೆ. ರೂಲ್ಸ್ ಮರೆತು ಹೋಗಿದೆ ಅಂತ ಅನುಮಾನ ಬಂತು. ಬಸವರಾಜ ನೀವು ಇನ್ನೂ ರಾಜಕೀಯ ಮಾಡಬೇಕಾದವರು. ನಾನು ಕೊನೆ ಹಂತದಲ್ಲಿ ಇದ್ದೇನೆ ಎಂದರು. 


ಇದನ್ನೂ ಓದಿ: ಭಯೋತ್ಪಾದಕ ಸಂಘಟನೆ ಜೊತೆ ನಂಟು: ಶಿವಮೊಗ್ಗ-ಮಂಗಳೂರಿನ ಇಬ್ಬರು ಶಂಕಿತ ಉಗ್ರರ ಬಂಧನ!


ಮಧ್ಯೆ ಎದ್ದ ಸಿಎಂ ಬೊಮ್ಮಾಯಿ, ನನ್ನದು ಲಾಸ್ಟ್ ಚುನಾವಣೆ ಎಂದು ಬಹಳ ಜನರನ್ನು ಕಳಿಸಿಬಿಟ್ರು. ಇವರು ಮಾತ್ರ ಹಂಗೇ ಉಳಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಕಾಲೆಳೆದರು. ಆಡಳಿತ ಪಕ್ಷದಲ್ಲಿ ಇದ್ದಾಗ ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದರು. ಆಮೇಲೆ ಬಿಜೆಪಿ ಮೇಲೆ ಹಾಕಿ, ಬಿಜೆಪಿ ಸೋಲಿಸಲು ನಾನು ಚುನಾವಣೆ ನಿಲ್ಲುತ್ತೇನೆ ಎಂದಿದ್ದರು. ಇವಾಗ ಮತ್ತೊಮ್ಮೆ ಇದೇ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ, ಮೂರ್ನಾಲ್ಕು ಚುನಾವಣೆಯಲ್ಲಿ ಇವರು ಎಲ್ಲಿದ್ದಾರೆ ಅಲ್ಲೇ ಇದ್ದಾರೆ. ಬೇರೆಯವರು ಎಲ್ಲೆಲ್ಲಿ ಹೋಗಬೇಕು ಅಲ್ಲಿ ಹೋಗಿದ್ದಾರೆ ಎಂದರು. ಈ ವೇಳೆ ಸದನದಲ್ಲಿದ್ದವರು ಸಿಎಂ ಹೇಳಿಕೆಗೆ ಎಲ್ಲರು ನಗೆ ಕಡಲಿನಲ್ಲಿ ತೇಲಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.