APMC ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯಲ್ಲ : ಸಚಿವ ಎಸ್.ಟಿ ಸೋಮಶೇಖರ್

ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ವಾಪಸ್‌ ಪಡೆಯುವುದಿಲ್ಲ. ಇದು ಜಾರಿಯಲ್ಲಿರುತ್ತದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ವಿಧಾನ ಪರಿಷತ್ ಸದನದಲ್ಲಿ ತಿಳಿಸಿದರು. 

Written by - Sowmyashree Marnad | Edited by - Chetana Devarmani | Last Updated : Sep 20, 2022, 01:53 PM IST
  • ಎಪಿಎಂಸಿ ತಿದ್ದುಪಡಿ ಕಾಯ್ದೆ
  • APMC ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯಲ್ಲ
  • ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ
APMC ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯಲ್ಲ : ಸಚಿವ ಎಸ್.ಟಿ ಸೋಮಶೇಖರ್  title=
ಸಚಿವ ಎಸ್.ಟಿ ಸೋಮಶೇಖರ್

ಬೆಂಗಳೂರು : ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ವಾಪಸ್‌ ಪಡೆಯುವುದಿಲ್ಲ. ಇದು ಜಾರಿಯಲ್ಲಿರುತ್ತದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ವಿಧಾನ ಪರಿಷತ್ ಸದನದಲ್ಲಿ ತಿಳಿಸಿದರು. ರೈತರ ಬೇಡಿಕೆಯಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂಬುದನ್ನು ಪರಿಷತ್ ಸದಸ್ಯ ನಾಗರಾಜ್ ಆಗ್ರಹಿಸಿದರು. 

ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ ಅತಿಹೆಚ್ಚು ಶಾಲಾ ಕೊಠಡಿ ನಿರ್ಮಾಣ, ರಾಜ್ಯದ ಇತಿಹಾಸದಲ್ಲೇ ಮೊದಲು!

ಇದಕ್ಕೆ ಉತ್ತರಿಸಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಮಾಜಿ ಸಚಿವರಾದ ಯಡಿಯೂರಪ್ಪ ಅವರು ಎಲ್ಲಾ ರೈತರ ಸಭೆ ಮಾಡಿದ್ದಾರೆ. ಎಪಿಎಂಸಿ ಕಾಯ್ದೆಗೆ ಎರಡು ತಿದ್ದುಪಡಿ ಮಾಡಿದ್ದಾರೆ.  ರೈತರ ಬೆಳೆಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು, ಹೊರಗಡೆ ಮಾರಾಟ ಮಾಡಿದರೆ ದಂಡ ಹಾಕುವ ನಿಯಮ ರದ್ದು ಮಾಡಲಾಗಿದೆ. ಹೊಸ ತಿದ್ದುಪಡಿ ಪ್ರಕಾರ ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ, ಯಾವ ಸಮಯದಲ್ಲಾದರೂ, ಯಾವ ಬೆಲೆಗಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಸಿಕ್ಕಿದೆ ಎಂದರು. 

ಎಪಿಎಂಸಿ ಬಿಟ್ಟು ಹೊರಗಡೆ ಮಾರಾಟ ಮಾಡಿದರೆ ದಂಡ ಹಾಕುವ ಕ್ರಮ ಇತ್ತು. ಇದರಿಂದ 25 ಕೋಟಿ ಹಣ ಕಲೆಕ್ಷನ್ ಮಾಡಿದ್ದರು.  ಆದರೆ ಈಗ ಇದನ್ನು ರದ್ದು ಮಾಡಲಾಗಿದೆ. ಇದು ರೈತರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡುತ್ತದೆ. ಹೀಗಾಗಿ ಈ ಕಾನೂನನ್ನು ವಾಪಾಸು ಪಡೆಯೋದಿಲ್ಲ ಎಂದು ಹೇಳಿದರು. 

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ: ಡಿಕೆಶಿ-ಸಿದ್ದರಾಮಯ್ಯ ಆಂತರಿಕ ಕಲಹ ಮುಗಿಲು ಮುಟ್ಟಿದೆ ಎಂದ ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News