ಬೆಂಗಳೂರು: ಸಂಖ್ಯಾ ಬಲ ಇದ್ದಾಗಲೂ ಮುಖ್ಯಮಂತ್ರಿ ಆಗಲು, ಬಳಿಕ ಸಂಪುಟ ರಚನೆ ಮಾಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಅನುಮತಿ ಸಿಗದೆ ಪರಿತಪಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ (BS Yadiyurappa) ಈಗ ಅತ್ತೂ ಕರೆದು ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆದಿದ್ದಾರೆ ಎನ್ಬಲಾಗುತ್ತಿದೆ.


COMMERCIAL BREAK
SCROLL TO CONTINUE READING

ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್ರಚಗೆ ಒಪ್ಪಿಗೆ ಪಡೆಯಲು ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿಯಾಗಬೇಕೆಂದು ಭಾರೀ ಪ್ರಯತ್ನ ನಡೆಸಿದ್ದರು. ದೆಹಲಿಗೆ ಬಂದು ದಿನವಿಡೀ ದೆಹಲಿಯಲ್ಲಿ ಅಮಿತ್ ಶಾಗಾಗಿ ಕಾದುಕುಳಿತಿದ್ದರು. ಎರಡು ಬಾರಿ ಅಮಿತ್ ಶಾ ಸಿಗದೆ ಬೆಂಗಳೂರಿಗೆ ಬರಿಗೈಯಲ್ಲಿ ತೆರಳಿದ್ದರು. ಈ ಸಲ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರಲ್ಲದೆ ಸಂಪುಟ ವಿಸ್ತರಣೆಗೆ ಅನುಮತಿಯನ್ನೂ ಗಿಟ್ಟಿಸಿಕಿಂಡಿದ್ದಾರೆ.


ವರಿಷ್ಠರ ಸೂಚನೆ ಮೇರೆಗೆ ಭಾನುವಾರ ದೆಹಲಿಗೆ ತೆರಳಿದ್ದ ಯಡಿಯೂರಪ್, ಒಂದೇ ಏಟಿಗೆ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಆದ್ಯಕ್ಷ ಜೆ.ಪಿ‌.ನಡ್ಡ (JP Nadda) ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗಂ ಅವರನ್ನು ಭೇಟಿ ಮಾಡಿದರು. ರಾತ್ರಿಯೇ ಬೆಂಗಳೂರಿಗೆ ಹಿಂತಿರುಗಿದ ಯಡಿಯೂರಪ್ಪ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ 'ಇದೇ 13ರಂದು ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಏಳು ಶಾಸಕರು ಸಂಪುಟ ಸೇರಲಿದ್ದಾರೆ' ಎಂದು ಹೇಳಿದ್ದರು.


ಇದನ್ನೂ ಓದಿ :  Siddaramaiah: 'ಸಿಎಂ ಸ್ಥಾನದಿಂದ 'ಬಿಎಸ್ ವೈ' ಕೆಳಗಿಳಿಯೋದು ಪಕ್ಕಾ'


ಅಷ್ಟೇಯಲ್ಲದೆ ತಮ್ಮ ದೆಹಲಿ ಭೇಟಿ ಯಶಸ್ವಿಯಾಗಿದೆ ಎಂಬ ಖುಷಿಯನ್ನು ಹಂಚಿಕೊಂಡಿದ್ದರು. ಹೈಕಮಾಂಡ್ ನಾಯಕರ ಭೇಟಿ ಫಲಪ್ರದವಾಗಿದೆ. ತಾವು ಹೇಳಿದವರಿಗೆ ಸಂಪುಟ ಸೇರ್ಪಡೆ ಮಾಡಲು ವರಿಷ್ಠರು ಒಪ್ಪಿದ್ದಾರೆ. ಯಾರೆಲ್ಲಾ ಸಂಪುಟ ಸೇರುತ್ತಾರೆ ಎಂಬುದನ್ನು ಸೋಮವಾರ ತೀರ್ಮಾನ ಮಾಡುತ್ತೇನೆ ಎಂದಿದ್ದರು. ಆದರೀಗ ಸಿಎಂ ಯಡಿಯೂರಪ್ಪ ಹೇಳಿದಂತೆ ಇನ್ನೆರಡೇ ದಿನದಲ್ಲಿ ಸಂಪುಟಸ ವಿಸ್ತರಣೆ ಅಥವಾ ಪುನರ್ರಚನೆ ಸಾಧ್ಯವಿಲ್ಲ ಎಂದು ಬಿಜೆಪಿ ಮೂಲಗಳಿಂದ ತಿಳಿದುಬರುತ್ತಿದೆ.


ಒಂದೊಮ್ಮೆ ಸಂಪುಟ ವಿಸ್ತರಣೆಯ ಅದರೆ ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ (MTB Nagaraj) ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತವಿದೆ. ಸಿ.ಪಿ. ಯೋಗೇಶ್ವರ್, ಉಮೇಶ್ ಕತ್ತಿ ಹೆಸರು ಬಲವಾಗಿ ಕೇಳಿಬರುತ್ತಿವೆ. ಉಳಿದ ಹೆಸರುಗಳ ಬಗ್ಗೆ ಯಡಿಯೂರಪ್ಪ ಬಿಟ್ಟುಕೊಟ್ಟಿಲ್ಲ.


ಇದನ್ನೂ ಓದಿ : ಬಿಜೆಪಿ ಗೋವನ್ನು ತಾಯಿಯಂತೆ ಕಾಣುವುದೇ ಆದರೆ ಮೊದಲು ಗೋಮಾಂಸ ರಫ್ತನ್ನು ನಿಲ್ಲಿಸಲಿ


ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ಕೊಡಲಿದ್ದು ಆನಂತರ ರಾಜ್ಯ ಸಚಿವ ಸಂಪುಟದ ವಿಸ್ತರಣೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಬಹುತೇಕ ಜನವರಿ 18 ಅಥವಾ 19ನೇ ತಾರೀಖು ಆಗಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.