CM Siddaramaiah: ಭಾರತದಲ್ಲಿ ಬಿಜೆಪಿ ಅವನತಿಯತ್ತ ಸಾಗುತ್ತಿದೆ. ಅದರ ಆರಂಭ ಕರ್ನಾಟಕದಿಂದಲೇ ಶುರುವಾಗಿದೆ. ಮೋದಿ ಅಲೆ, ಮೋದಿ ಪ್ರಭಾವ ಮಂಕಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರುನಾಡಿನಲ್ಲಿ ಎಲ್ಲೆಲ್ಲಿ ಭರ್ಜರಿ ಪ್ರಚಾರ ಮಾಡಿದ್ದರೋ ಅಲ್ಲೆಲ್ಲಾ ಬಿಜೆಪಿ ಹೀನಾಯವಾಗಿ ಸೋತಿರುವುದೇ ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ  ನಡೆಸಿದರು. 


COMMERCIAL BREAK
SCROLL TO CONTINUE READING

ವಿಧಾನ ಪರಿಷತ್ ನಲ್ಲಿಂದು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಭಾವ ಹೇಗೆ ಮಂಕಾಗುತ್ತಿದೆ, ಬಿಜೆಪಿ ಹೇಗೆ ಜನರಿಂದ ದೂರವಾಗುತ್ತಿದೆ ಎನ್ನುವುದನ್ನು ಎಳೆ ಎಳೆಯಾಗಿ ವಿವರಿಸಿದರು. 


ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ  28 ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರು. ಈ ಹಿಂದೆ ನಡೆದ ಯಾವುದೇ ಚುನಾವಣೆಯಲ್ಲಿ ಯಾವ ಪ್ರಧಾನಿಗಳೂ ಸಹ ರಾಜ್ಯಗಳ ಚುನಾವಣೆ ವೇಳೆ ಹೀಗೆ ವರ್ತಿಸಿರಲಿಲ್ಲ. ಅವರ ಪ್ರಥಮ ಆದ್ಯತೆ ದೇಶವನ್ನು ಮುನ್ನಡೆಸುವುದು ಆಗಿರುತ್ತಿತ್ತೇ ಹೊರತು, ಬರೀ ಚುನಾವಣೆಗಳನ್ನು ಮಾಡುತ್ತಾ ಓಡಾಡುವುದಲ್ಲ ಎಂದು ವಾಗ್ದಾಳಿ ನಡೆಸಿದರು. 


ಇದನ್ನೂ ಓದಿ- ಗ್ಯಾರಂಟಿ ಯೋಜನೆಗೆ ನೋಂದಣಿ ಮಾಡೋ ಮುನ್ನ ಎಚ್ಚರ.. ಎಚ್ಚರ..!


ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಹಳಷ್ಟು ರೋಡ್ ಶೋ ನಡೆಸಿದರು. ಆದರೆ, ಅವರು ಭರ್ಜರಿ ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ಸುತ್ತ ಮುತ್ತಲಿನ ಕ್ಷೇತ್ರಗಳಲ್ಲೂ ಕೂಡ ಕಾಂಗ್ರೆಸ್ ಅತಿ ಹೆಚ್ಚು  ಬಹುಮತದಿಂದ ಗೆದ್ದಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಮಂಕಾಗುತ್ತಿರುವುದಕ್ಕೆ ಹಿಡಿದ ಕೈಗನ್ನಡಿ ಆಗಿದ್ದು, ಬಿಜೆಪಿಯವರು ಇದನ್ನು ಒಪ್ಪಿಕೊಳ್ಳಿ.  ಇನ್ನು ಮುಂದೆ ಆದರೂ ಮೋದಿ ಅವರ ಮೇಲೆ ಅವಲಂಬಿತರಾಗುವುದನ್ನು ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಸದಸ್ಯರಿಗೆ ಹೇಳಿದರು. 


ಜನರ ಜೇಬಿನಲ್ಲಿದ್ದ ಹಣ ಕಿತ್ತುಕೊಂಡಿದ್ದೇ ಬಿಜೆಪಿ ಸೋಲಿಗೆ ಕಾರಣ: 
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ ಸಂಗತಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ಮು ಘೋಷಿಸಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅವುಗಳನ್ನು ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ನ ಬದ್ಧತೆ ಮತ್ತು ಸಿದ್ಧಾಂತವಾಗಿದೆ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿದೆ.  ಜನರ ಜೇಬಿನಲ್ಲಿದ್ದ ಹಣ ಕಿತ್ತುಕೊಂಡಿದ್ದೇ ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದು ತಿಳಿಸಿದರು. 


ಇದನ್ನೂ ಓದಿ- ಅನ್ನಭಾಗ್ಯ ದುಡ್ಡು ಅಕೌಂಟ್ ಸೇರಿದ್ಯಾ ಚೆಕ್ ಮಾಡೋದು ಹೇಗೆ..!?


ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು?
ತಮ್ಮ ಭಾಷಣದ ಸಂದರ್ಭದಲ್ಲಿ ಕನ್ನಡ ಮಣ್ಣಿನ ಸೌಹಾರ್ದ ಪರಂಪರೆಯ 2000 ವರ್ಷಗಳ ಮೌಲ್ಯವನ್ಮು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಪ "ಮನುಷ್ಯ ಜಾತಿ ತಾನೊಂದೇ ವಲಂ" ಎನ್ನುವ ಮೌಲ್ಯದಿಂದ ಕನ್ನಡ ಸಂಸ್ಕೃತಿಯನ್ನು ಅರಳಿಸಿದರು. ಹೀಗೆ ಪಂಪನಿಂದ ಹಿಡಿದು ಬಸವಣ್ಣನವರನ್ನು ಪ್ರಸ್ತಾಪಿಸಿ ಇವರೆಲ್ಲರ ಆಶಯಗಳೇ ನಮ್ಮ ಸಂವಿಧಾನದಲ್ಲಿದೆ. ಆದರೆ ತಾನು ಮಾತ್ರ ಶ್ರೇಷ್ಠ ಎನ್ನುವ ಹಿಟ್ಲರ್ ಒಬ್ಬ ಮತಾಂಧ. ಆತ ಮನುಷ್ಯ ವಿರೋಧಿ ಎಂದರು.   ಹಿಟ್ಲರ್ ತನ್ನ ತಿಕ್ಕಲುತನದಿಂದ ಹೇಗೆ ಮನುಷ್ಯರ ಮಾರಣ ಹೋಮಕ್ಕೆ ಕಾರಣನಾದ ಎಂದು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಬಿಜೆಪಿಯವರಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು, 'ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು ?" ಎಂದು ಪ್ರಶ್ನಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.