ಗ್ಯಾರಂಟಿ ಯೋಜನೆಗೆ ನೋಂದಣಿ ಮಾಡೋ ಮುನ್ನ ಎಚ್ಚರ.. ಎಚ್ಚರ..!

                                       

Fake apps: ಗ್ಯಾರಂಟಿ ಯೋಜನೆಗೆ ನೋಂದಣಿ ಮಾಡೋ ಮುನ್ನ ಎಚ್ಚರ.. ಎಚ್ಚರ..!   ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗೃಹಲಕ್ಷ್ಮಿ ಆ್ಯಪ್, ಶಕ್ತಿ ಆ್ಯಪ್, ಯುವನಿಧಿ ಆ್ಯಪ್​ಗಳ ರೀತಿಯಲ್ಲೇ ತಲೆ ಎತ್ತಿವೆ ನಕಲಿ  ಆ್ಯಪ್​ಗಳು . 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ನೀವೂ ಕೂಡ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ನೋಂದಣಿ ಮಾಡಲು ಹೊರಟಿದ್ದೀರಾ... ಹಾಗಿದ್ದರೆ, ಎಚ್ಚರ, ಎಚ್ಚರ, ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗೃಹಲಕ್ಷ್ಮಿ ಆ್ಯಪ್, ಶಕ್ತಿ ಆ್ಯಪ್, ಯುವನಿಧಿ ಆ್ಯಪ್​ಗಳ ರೀತಿಯಲ್ಲೇ ತಲೆ ಎತ್ತಿವೆ ನಕಲಿ  ಆ್ಯಪ್​ಗಳು. 

2 /8

ಹೌದು, ಸರ್ಕಾರವನ್ನೇ ಸೆಡ್ಡು ಹೊಡೆಯಲು ನಿಂತಿರುವ ಈ ಫೇಕ್ ಆ್ಯಪ್​ಗಳು ಸರ್ಕಾರಿ ಗ್ಯಾರೆಂಟಿ ಆ್ಯಪ್​ಗಳನ್ನೇ ಮೀರಿಸುತ್ತಿವೆ. ನೀವೇನಾದರೂ ಯಾಮಾರಿ ಇಂತಹ  ಆ್ಯಪ್​ಗಳಲ್ಲಿ ನಿಮ್ಮ ಮಾಹಿತಿಗಳನ್ನು ಹಂಚಿಕೊಂಡರೆ ಸೈಬರ್ ಕ್ರೈಂ ಕಳ್ಳರು ನಿಮ್ಮ ಡೇಟಾ ಕದಿಯೋದು ಪಕ್ಕಾ.

3 /8

ಗೃಹಲಕ್ಷ್ಮಿ ಹೆಸರಿನಲ್ಲಿ ಇರುವ ಫೇಕ್ ಆ್ಯಪ್​ಗಳು:  * ಗೃಹಲಕ್ಷ್ಮಿ ಸ್ಕೀಮ್ ಆ್ಯಪ್ * ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಆ್ಯಪ್ * ಗೃಹ ಲಕ್ಷ್ಮಿ ಯೋಜನಾ ಆ್ಯಪ್ *  ಕರ್ನಾಟಕ ಲಕ್ಷ್ಮಿ ಯೋಜನಾ ಆ್ಯಪ್‌

4 /8

ಗೃಹಜ್ಯೋತಿ ಹೆಸರಿನಲ್ಲಿರುವ ಫೇಕ್ ಆ್ಯಪ್​ಗಳು: * ಪೋರ್ಟಲ್ ಗೃಹ ಜ್ಯೋತಿ * ಸ್ಕೀಮ್ ಗೃಹ ಜ್ಯೋತಿ * ಗೃಹ ಜ್ಯೋತಿ ಎಲೆಕ್ಟ್ರಿಸಿಟಿ ಆ್ಯಪ್ * ಗೃಹ ಜ್ಯೋತಿ ಸ್ಕೀಮ್ * ಗೃಹಜ್ಯೋತಿ ಆ್ಯಪ್ * ಗೃಹ ಜ್ಯೋತಿ ಸ್ಕೀಮ್

5 /8

ಯುವ ನಿಧಿ ಹೆಸರಲ್ಲೂ ಇವೆ ಫೇಕ್ ಆ್ಯಪ್​ಗಳು:  ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮಾತ್ರವಲ್ಲದೆ, ಯುವ ಜನತೆಗಾಗಿ ಘೋಷಣೆಯಾಗಿರುವ,  ಅಲ್ಲದೇ ಇನ್ನು ಜಾರಿಯಾಗದ ಯುವನಿಧಿ ಸ್ಕೀಮ್ ಹೆಸರಿನಲ್ಲಿಯು ಕೂಡ ಫೇಕ್ ಆ್ಯಪ್ ಓಪನ್ ಆಗಿದೆ. 

6 /8

ಪ್ಲೈ ಸ್ಟೋರ್ ನಲ್ಲಿ ಫೇಕ್ ಯುವ ನಿಧಿ ಆ್ಯಪ್ ಕ್ರಿಯೆಟ್ ಮಾಡಿರುವ ಹ್ಯಾಕರ್ಸ್  * ಯುವನಿಧಿ ಸ್ಕೀಮ್ * ಯುವ ನಿಧಿ ಆ್ಯಪ್ * ಯುವ ನಿಧಿ ಆನ್ ಲೈನ್ ಆ್ಯಪ್​ಗಳನ್ನು ಸೃಷ್ಟಿಸಿದ್ದಾರೆ. 

7 /8

ಗೂಗಲ್ ಹಾಗೂ ಪ್ಲೈ ಸ್ಟೋರ್​ನಲ್ಲಿ ಇರುವ ಉಚಿತ ಯೋಜನೆಗಳ ಆ್ಯಪ್​ಗಳು ಫೇಕ್ ಆಗಿದ್ದು,  ಯಾರೂ ಕೂಡ ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬೇಡಿ. ಒಂದು ವೇಳೆ ಅರ್ಜಿ ಸಲ್ಲಿಸಿದರೆ ಅದು ಸರ್ಕಾರಕ್ಕೆ ತಲುಪುದಿಲ್ಲ. ಬದಲಾಗಿ ಸೈಬರ್ ಖದೀಮರಿಗೆ ನಿಮ್ಮ ಡೇಟಾ, ಮಾಹಿತಿ ಪಡೆದು ಮೋಸ ಮಾಡಲು ಸಹಾಯ ಮಾಡುತ್ತೆ. 

8 /8

ನೀವು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಸರ್ಕಾರದ ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸಿ. ಸರ್ಕಾರದಿಂದ ಇನ್ನೂ ಕೂಡ ಯಾವುದೇ ಬೇರೆ ಆ್ಯಪ್​ಗಳನ್ನು ರಿಲೀಸ್ ಮಾಡಿಲ್ಲ ಎಂಬುದನ್ನು ನೆನಪಿನಲ್ಲಿಡಿ.