ಬೆಂಗಳೂರು : ಉಭಯ ಸದನದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa)ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ (Congress Protest)ನಡೆಸುತ್ತಿದೆ. ಈಶ್ವರಪ್ಪ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡುವವರೆಗೂ ಅಹೋರಾತ್ರಿ ಧರಣಿಯನ್ನು ಕೈಬಿಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತಾಳಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಸೋಮವಾರದ ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ತೀರ್ಮಾನಿಸಿದೆ. 


COMMERCIAL BREAK
SCROLL TO CONTINUE READING

ಸದನ ನಡೆಸಬೇಕಾದರೆ ಹಣಕಾಸು ವೆಚ್ಚ ಹೆಚ್ಚಾಗಿರುತ್ತದೆ. ಜನರ ದುಡ್ಡು ವ್ಯರ್ಥ ಆಗಬಾರದು ಎಂಬ ನಿಲುವನ್ನ  ಬಿಜೆಪಿ (BJP)ತಾಳಿದೆ. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ವಿಪಕ್ಷ ಕಾಂಗ್ರೆಸ್ (Congress)ಅವಕಾಶ ನೀಡುತ್ತಿಲ್ಲ, ಕಾಂಗ್ರೆಸ್ ಪ್ರತಿಭಟನೆಯಿಂದ (Congress Protest)ಸದನವನ್ನು ಮೊಟಕು ಗೊಳಿಸಬೇಕಾಯಿತು ಎಂಬ ಸಂದೇಶ ವನ್ನು ನೀಡಲು ಆಡಳಿತ ಪಕ್ಷ ನಿರ್ಧರಿಸಿದೆ.


ಇದನ್ನೂ ಓದಿ : ಹಿಜಾಬ್ ತೆಗೆದು ಪಾಠ ಮಾಡಲು ಉಪನ್ಯಾಸಕಿ ನಕಾರ, ಕೆಲಸಕ್ಕೆ ರಾಜೀನಾಮೆ


ರಾಜ್ಯಾದ್ಯಂತ ಉಗ್ರ ಹೋರಾಟ ನಿರ್ಧಾರ :
 ಸದ್ಯ ಹಿಜಾಬ್ ವಿವಾದ (Hijab Contraversy)ಪ್ರಕರಣ ಕೋರ್ಟ್ ನಲ್ಲಿ ಇರುವ ಕಾರಣ (Karnataka high Court), ಈ ಬಗ್ಗೆ  ಮಾತನಾಡಿದರೆ ಪಕ್ಷಕ್ಕೆ ಮುಜುಗರ ಉಂಟಾಗಬಹುದು ಎಂಬ ಲೆಕ್ಕಾಚಾರ ಕೈ ಪಾಳಯದ್ದಾಗಿದೆ. ಹೀಗಾಗಿ ಈಶ್ವರಪ್ಪ (KS Eshwarappa) ಹಾಗೂ ಇನ್ನಿತರೆ ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದೆ. ಕಾಂಗ್ರೆಸ್ ಸಚಿವ ಈಶ್ವರಪ್ಪ ಹೇಳಿಕೆ ಮುಂದಿಟ್ಟುಕೊಂಡು ಸಚಿವರ ರಾಜೀನಾಮೆಗೆ  ಆಗ್ರಹಿಸಿ ರಾಜ್ಯಾದ್ಯಂತ  ಪ್ರತಿಭಟನೆ ನಡೆಸಲು ಸಿದ್ಧತೆಗಳನ್ನು ನಡೆಸುತ್ತಿದೆ.


ಸಂಧಾನ ಸಭೆ ವಿಫಲ; ಮಾಜಿ ಸಿಎಂ ಬಿಎಸ್ ವೈ ಮಾತಿಗೂ ಜಗ್ಗದ ಡಿಕೆಶಿ :
ಪ್ರತಿಭಟನೆ ಕೈಬಿಡಲು ಕಾಂಗ್ರೆಸ್ ಗೆ ವಿವಿಧ ಮುಖಂಡರು ಮನವಿ ಮಾಡಿದ್ದಾರೆ. ಸಚಿವ ಕೆ ಎಸ್ ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)ಅವರಿಗೆ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಡಿಕೆಶಿ ತಂದೆಯನ್ನು ಅವಹೇಳನ ಮಾಡಿದ್ದಾರೆ, ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ನಿನ್ನೆ ನಡೆದ ಬಿ ಎಸ್ ಯಡಿಯೂರಪ್ಪ (BS Yadyurappa)ನೇತೃತ್ವದ ಸಂಧಾನ ಸಭೆಯಲ್ಲಿ ಕಾಂಗ್ರೆಸ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಸಂಧಾನ ಸಭೆ ಕೂಡಾ ವಿಫಲವಾಗಿದೆ. 


ಇದನ್ನೂ ಓದಿ : Hijab Controversy: ರಾಜ್ಯದ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಜಾರಿಗೊಳಿಸಿದ ಬೊಮ್ಮಾಯಿ ಸರ್ಕಾರ


ಸದ್ಯಕ್ಕೆ ಇಂದಿನ ವಿಧಾನಸಭೆ ಕಲಾಪವನ್ನ ಸೋಮವಾರ 11ಕ್ಕೆ ಮುಂದೂಡಲಾಗಿದ್ದು, ಕಾಂಗ್ರೆಸ್ ಸದಸ್ಯರು ಇಂದು ಕೂಡಾ ವಿಧಾನಸಭೆಯಲ್ಲೇ ಉಳಿದುಕೊಂಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.