ಬೆಂಗಳೂರು ʼಗಾಂಜಾ ನಗರಿʼಯಾಗಲು ಕಾಂಗ್ರೆಸ್ ಕಾರಣ : ಬಿಜೆಪಿ ಆರೋಪ
ರಾಜಧಾನಿ ಬೆಂಗಳೂರು ಗಾಂಜಾ ನಗರಿಯಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ. ಸಿದ್ದರಾಮಯ್ಯ ಸರ್ಕಾರ ಅಕ್ರಮಗಳ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದೇ ಇದ್ದಿದ್ದರಿಂದಲೇ ಬೆಂಗಳೂರಿನ ಆರೋಗ್ಯ ಅಸ್ತವ್ಯಸ್ತವಾಗಿತ್ತು ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಬೆಂಗಳೂರು : ರಾಜಧಾನಿ ಬೆಂಗಳೂರು ಗಾಂಜಾ ನಗರಿಯಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ. ಸಿದ್ದರಾಮಯ್ಯ ಸರ್ಕಾರ ಅಕ್ರಮಗಳ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದೇ ಇದ್ದಿದ್ದರಿಂದಲೇ ಬೆಂಗಳೂರಿನ ಆರೋಗ್ಯ ಅಸ್ತವ್ಯಸ್ತವಾಗಿತ್ತು ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಈ ಕುರಿತು ಟ್ಟೀಟ್ ವಾರ್ ನಡೆಸಿರುವ ಬಿಜೆಪಿ, ಅಧಿಕಾರವಿಲ್ಲದಿದ್ದಾಗ "ಬೆಟರ್ ಬೆಂಗಳೂರು ಕ್ರಿಯಾ ಯೋಜನೆ ಸಮಿತಿ" ರಚಿಸುವ ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರದಲ್ಲಿರುವಾಗ ಗಾರ್ಡನ್ ಸಿಟಿ ಖ್ಯಾತಿಯ ಬೆಂಗಳೂರನ್ನು ಗಾರ್ಬೇಜ್ ಸಿಟಿ ಮಾಡಿದ್ದೇಕೆ? 2023 ರಿಂದ 2028 ರೊಳಗೆ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಐತಿಹಾಸಿಕ ಬದಲಾವಣೆ ತರಲಿದೆ ಎಂದು ಘೋಷಣೆ ಮಾಡಿದ್ದೀರಿ. 2013 ರಿಂದ 2018 ರ ವರೆಗೆ ನೀವು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ಉಮಾಶಂಕರ್ ಹಲ್ಲಿ: ಬಿಳಿಗಿರಿ ಬನದಲ್ಲಿ ಹೊಸ ಹಲ್ಲಿ ಪತ್ತೆ ಹಚ್ಚಿದ ಸಂಶೋಧಕರು!
ಈಗ ಬೆಂಗಳೂರಿನ ಬಗ್ಗೆ ವಿಪರೀತ ಕಾಳಜಿ ವಹಿಸುವ ಕಾಂಗ್ರೆಸ್ಸಿಗರೇ, 2013 ರಿಂದ 2018 ರ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳನ್ನು "ಗುಂಡಿಮಯ" ಮಾಡುವಾಗ ಬೆಂಗಳೂರಿನ ಐತಿಹ್ಯ ನೆನಪಾಗಿಲ್ಲವೇಕೆ?. ನಿಮ್ಮ ಅವಧಿಯಲ್ಲಿ ಮಾನವ ಕಳ್ಳ ಸಾಗಣೆಗೆ ಬೆಂಗಳೂರು ನಗರವೇ ಕೇಂದ್ರ ಸ್ಥಳವಾಗಿತ್ತು. ಬೆಂಗಳೂರನ್ನು ನರಕಸದೃಶ ಮಾಡಿದ್ದು ನೀವೇ ಅಲ್ವೇ? ಬೆಂಗಳೂರು ಗಾಂಜಾ ನಗರಿಯಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಸಿದ್ದರಾಮಯ್ಯ ಸರ್ಕಾರ ಅಕ್ರಮಗಳ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದೇ ಇದ್ದಿದ್ದರಿಂದಲೇ ಬೆಂಗಳೂರಿನ ಆರೋಗ್ಯ ಅಸ್ತವ್ಯಸ್ತವಾಗಿತ್ತು. ಅಧಿಕಾರದಲ್ಲಿದ್ದಾಗ ಏಕೆ ಬೆಟರ್ ಬೆಂಗಳೂರು ಎಂದು ಚಿಂತನೆ ಮಾಡಲಿಲ್ಲ ಡಿ.ಕೆ.ಶಿವಕುಮಾರ್ ಅವರೇ? ಎಂದು ಪ್ರಶ್ನೆ ಮಾಡಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.