ಉಮಾಶಂಕರ್ ಹಲ್ಲಿ: ಬಿಳಿಗಿರಿ ಬನದಲ್ಲಿ ಹೊಸ ಹಲ್ಲಿ ಪತ್ತೆ ಹಚ್ಚಿದ ಸಂಶೋಧಕರು!

ಬಿಳಿಗಿರಿರಂಗನಾಥ ಬೆಟ್ಟದಲ್ಲಿರುವ ಏಟ್ರಿ ಸಂಶೋಧಕ ಡಾ.ಎನ್.ಎ.ಅರವಿಂದ್ & ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಹೊಸ ಹಲ್ಲಿ ಪ್ರಭೇದ ಪತ್ತೆ ಹಚ್ಚಿದ್ದಾರೆ‌.

Written by - Zee Kannada News Desk | Last Updated : Sep 14, 2022, 12:22 PM IST
  • ಬಿಳಿಗಿರಿರಂಗನನಾಥ ಬೆಟ್ಟದಲ್ಲಿ ಹೊಸ ಹಲ್ಲಿ ಪ್ರಭೇಧ ಪತ್ತೆ ಹಚ್ಚಿದ ಸಂಶೋಧಕರು
  • 2.57 CMನಷ್ಟು ಉದ್ದವಿರುವ ಗಂಡು ಹಲ್ಲಿಯ ದೇಹ ಕಂದು ಬಣ್ಣದಲ್ಲಿದ್ದು, ಬಾಲ ಕಪ್ಪಾಗಿದೆ
  • ನಿವೃತ್ತ ಪ್ರಾಧ್ಯಾಪಕ ಡಾ.ಉಮಾಶಂಕರ್ ಅವರ ಹೆಸರನ್ನು ಈ ಹಲ್ಲಿ ಪ್ರಭೇದಕ್ಕೆ ಇಡಲಾಗಿದೆ
ಉಮಾಶಂಕರ್ ಹಲ್ಲಿ: ಬಿಳಿಗಿರಿ ಬನದಲ್ಲಿ ಹೊಸ ಹಲ್ಲಿ ಪತ್ತೆ ಹಚ್ಚಿದ ಸಂಶೋಧಕರು! title=
ಹೊಸ ಹಲ್ಲಿ ಪ್ರಭೇಧ ಪತ್ತೆ

ಚಾಮರಾಜನಗರ: ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಹಲ್ಲಿ ಪ್ರಭೇದವನ್ನು ಪತ್ತೆ ಹಚ್ಚಲಾಗಿದೆ.

ಬಿಳಿಗಿರಿರಂಗ ಬೆಟ್ಟದಲ್ಲಿರುವ ಏಟ್ರಿ(Ashoka Trust for Research in Ecology and the Environment) ಸಂಶೋಧಕ ಡಾ.ಎನ್.ಎ.ಅರವಿಂದ್ ಮತ್ತು ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಈ ಹೊಸ ಹಲ್ಲಿ ಪ್ರಭೇದವನ್ನು ಪತ್ತೆ ಹಚ್ಚಿದ್ದಾರೆ‌.

ಇದನ್ನೂ ಓದಿ: ‘Udta Punjab’ ಆಗುವ ಅಂಚಿನಲ್ಲಿ ಬೆಂಗಳೂರು; ಡ್ರಗ್ಸ್ ಮಾರಾಟದಲ್ಲಿ ಪೊಲೀಸರು ಭಾಗಿ!

ಸದ್ಯ ಪತ್ತೆಯಾದ ಹಲ್ಲಿಯು 2.57 CMನಷ್ಟು ಉದ್ದವಿದೆ. ಈ ಗಂಡು ಹಲ್ಲಿಯ ದೇಹ ಕಂದು ಬಣ್ಣದಲ್ಲಿದ್ದು, ಬಾಲ ಕಪ್ಪಾಗಿದೆ. ಹೆಣ್ಣು  ಹಲ್ಲಿಯು ಪೂರ್ತಿಯಾಗಿ ಕಂದು ಬಣ್ಣದಿಂದ ಕೂಡಿದೆ. ನಿವೃತ್ತ ಪ್ರಾಧ್ಯಾಪಕರಾದ ಡಾ.ಉಮಾಶಂಕರ್ ಅವರ ಹೆಸರನ್ನು ಈ ಹಲ್ಲಿ ಪ್ರಭೇದಕ್ಕೆ ಇಡಲಾಗಿದೆ. ಉಮಾಶಂಕರ್ ಕುಬ್ಜ ಹಲ್ಲಿ (Umashankar's Dwarf Gecko) ಎಂದು ಕರೆಯಲಾಗಿದೆ.

ಇನ್ನು ಹೊಸದಾಗಿ ಪತ್ತೆಯಾಗಿರುವ ಪ್ರಭೇದದ ಹಲ್ಲಿ ರಾತ್ರಿ ಹೊತ್ತು ಹೆಚ್ಚು ಕಂಡುಬರುತ್ತದೆ. ಕಲ್ಲು ಮತ್ತು ಬಂಡೆಗಳ ಸಂದಿಗಳು ಇವುಗಳ ಅವಾಸಸ್ಥಾನವಾಗಿದೆ. ಎರಡಕ್ಕಿಂತ ಹೆಚ್ಚು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡಲಿದ್ದು, ಈ ಹಲ್ಲಿ ಕುಬ್ಜ ಗಾತ್ರದ್ದಾಗಿದೆ. ಬಿಳಿಗಿರಿಬನದಲ್ಲಿ ಮಾತ್ರ ಈ ಹಲ್ಲಿ ಕಂಡುಬರಲಿದೆ ಎಂದು ಅಧ್ಯಯನದಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ:  ಹಿಂದಿ ಹೇರಿಕೆ ವಿಚಾರ : 'ಕನ್ನಡದಲ್ಲಿ ಚೆಕ್ ಬರೆದರೆ ಮುಂಡೆ ಮಕ್ಳು ರಿಜೆಕ್ಟ್ ಮಾಡ್ತಾರೆ'

ಚರ್ಚೆ ಹೊತ್ತಲ್ಲಿ ಗಮನ ಸೆಳೆದ ಆಕಾರ: ಏಟ್ರಿ ಕಚೇರಿಯಲ್ಲಿ ಚರ್ಚೆ ಮಾಡುತ್ತಿರುವಾಗ ಕಂಡುಬಂದ ಹಲ್ಲಿಯು ಗಾತ್ರದಲ್ಲಿ ಚಿಕ್ಕದ್ದಾಗಿದ್ದರಿಂದ ಗಮನ ಸೆಳೆದು ಪರಿಶೀಲನೆ ನಡೆಸಿದಾಗ ಹೊಸ ಪ್ರಭೇದ ಇರಬಹುದು ಎಂಬ ಅನುಮಾನ ಬಂದಿದೆ. ಅರಣ್ಯ ಇಲಾಖೆಯ ಅನುಮತಿ ಪಡೆದು ಉಮಾಶಂಕರ್ ಮತ್ತು ಸೂರ್ಯನಾರಾಯಣನ್ ಸಂಶೋಧನೆ ಕೈಗೊಂಡು ದೇಹರಚನೆ ಸೇರಿದಂತೆ ಎಲ್ಲಾ ಪರೀಕ್ಷೆ ನಡೆಸಿ ಹೊಸ ಹಲ್ಲಿ ಪ್ರಭೇದ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಸಂಬಂಧ ಅಂತಾರಾಷ್ಟ್ರೀಯ ನಿಯತಕಾಲಿಕೆಯಾದ ವರ್ಟೆಬ್ರೆಟ್ ಝೂಲಾಜಿಯಲ್ಲಿ ಲೇಖನ ಪ್ರಕಟಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News