ಬೆಂಗಳೂರು: ರಾಜ್ಯದಲ್ಲಿ 11 ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಮೈತ್ರಿ ಸರ್ಕಾರ ಬಂದಾಗಿನಿಂದಲೂ  ಆಗಾಗ ಶಾಸಕರು ಆಡಳಿತರೂಡ ಸರ್ಕಾರದ ವಿರುದ್ಧ ಅತೃಪ್ತಿ ಹೊರ ಹಾಕುತ್ತಲೇ ಬಂದಿದ್ದಾರೆ.ಈಗ ಅದು ರಾಜೀನಾಮೆ ಮೂಲಕ ಮತ್ತೊಮ್ಮೆ ಆಸ್ಫೋಟಗೊಂಡಿದೆ. 




COMMERCIAL BREAK
SCROLL TO CONTINUE READING

ಈಗ ಏಕಾಏಕಿ 11 ಶಾಸಕರು ವಿಧಾನಸಭಾ ಸ್ಪೀಕರ್ ಅವರಿಗೆ ರಾಜಿನಾಮೆ ನೀಡಿರುವುದು ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದಂತಾಗಿದೆ. ರಾಜೀನಾಮೆ ನೀಡಿರುವ ಶಾಸಕರೆಂದರೆ ಎಚ್. ವಿಶ್ವನಾಥ್, ರಮೇಶ್ ಜಾರಕಿಹೋಳಿ, ಸೋಮಶೇಖರ್, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ, ಬಿ.ಸಿ. ಪಾಟೀಲ್, ಮಹೇಶ್ ಕುಮತಹಳ್ಳಿ, ನಾರಾಯಣ ಗೌಡ, ಬೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಮತ್ತು ರಾಮಲಿಂಗ ರೆಡ್ಡಿ, ಎನ್ನಲಾಗಿದೆ.ಈಗ ರಾಜೀನಾಮೆ ನೀಡಿದ ಶಾಸಕರು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದ್ದಾರೆ ಎಂದು  ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.




ಈಗ ಶಾಸಕರು ರಾಜೀನಾಮೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ' ಕಾಂಗ್ರೆಸ್ ತೊರೆಯಲು ಬಯಸಿರುವ ಕೆಲವು ಶಾಸಕರು ಪಕ್ಷದ ಜೊತೆಗೆ ದೀರ್ಘಕಾಲಾವಧಿಯಿಂದ ಸಂಬಂಧವನ್ನು ಹೊಂದಿದ್ದಾರೆ.ನನಗೆ ಅವರು ನಮ್ಮ ಜೊತೆಗೆ ಇರುತ್ತಾರೆ ಎನ್ನುವ ನಂಬಿಕೆ ಇದೆ.ನಾನು ಬೆಂಗಳೂರಿಗೆ ಹೋದ ನಂತರ ಹೇಳಿಕೆ ನೀಡುವುದಾಗಿ ತಿಳಿಸಿದರು.



ಇನ್ನೊಂದೆಡೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿನ ಆಗಮಿಸಿ ಸಿದ್ಧರಾಮಯ್ಯ ನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು.